Sunday, September 26, 2010

ಸ್ವಾತಂತ್ರ್ಯ ಸ್ವಾಮಿತ್ವ: Swatantrya Swamitva


ಸ್ವಾತಂತ್ರ್ಯ ಸ್ವಾಮಿತ್ವ ಸ್ವಬಲ ಸ್ವಾಧೀನತೆಯ
ನಿಮ್ಮೆದೆಯ ಸತ್ವದುರಿ ಆರದಿರಲಿ
ಅಪಮಾನ ಸಹಿಸದಿಹ ಅಭಿಮಾನ ನಿಮಗಿರಲಿ
ನಿಮ್ಮೊಡನೆ ನಾವಿರಲಿ ಇಲ್ಲದಿರಲಿ ||ಪ||

ಭಗ್ನವಾಯಿತು ಕಾಯ ದಗ್ಧವಾಯಿತು ಹೃದಯ
ನಗ್ನವಾಯಿತು ನಾಡು ನಮ್ಮೆದುರಿಗೆ
ತೀರಿಲ್ಲ ಋಣದ ಹೊರೆ ಮುಂದೆ ನೀವಾದರೂ
ಹಿಂದಿರುಗಿಸಿರಿ ಸಾಲ ಇತ್ತವರಿಗೆ ||೧||

ನಮ್ಮೆದೆಯ ತುಂಬಿದ್ದ ನಿಮ್ಮುಸುರಿನಾಕಾಂಕ್ಷೆ
ನಮ್ಮೊಡಲ ಸಂತಾನ ನಿಮಗೆ ಬರಲಿ
ಸೇಡುಗಳ ಪೂರೈಕೆ ಆದರ್ಶದಾರೈಕೆ
ಸತ್ಪುತ್ರ ಕರ್ತವ್ಯ ಮರೆಯದಿರಲಿ ||೨||

ಸುಖದ ಶಯ್ಯೆಯ ತಂಪು ಮೋಹ ಮಂಜಿನ ಮಾಯೆ
ಬಿಸಿಯ ನೆತ್ತರ ನಂಜು ಎಚ್ಚರಿಸಲಿ
ಕಷ್ಟನಷ್ಟದ ಕಾವು ಬವಣೆಗಳ ಬೇಸಿಗೆಗೆ
ನಿರ್ಧಾರದಾಗಾರ ಕರಗದಿರಲಿ ||೩||

ಹರಿಯುತಿದೆ ನಿಮ್ಮೊಳಗೆ ನೆನಪಿರಲಿ ನಮ್ಮದೇ
ಪೂರ್ವಜರು ನಮಗಿತ್ತ ಶುದ್ಧರಕುತ
ಅವರು ಬಾಳಿದ ಹಾಗೆ ನಾವು ಬದುಕಿದ ಹಾಗೆ
ಬಾಳಿ ಬದುಕಿರಿ ನೀವು ನಿರುತ ನಗುತ ||೪||

svAtaMtrya svAmitva svabala svAdhInateya
nimmedeya satvaduri Aradirali
apamAna sahisadiha aBimAna nimagirali
nimmoDane nAvirali illadirali ||pa||

BagnavAyitu kAya dagdhavAyitu hRudaya
nagnavAyitu nADu nammedurige
tIrilla RuNada hore muMde nIvAdarU
hiMdirugisiri sAla ittavarige ||1||

nammedeya tuMbidda nimmusurinAkAMkShe
nammoDala saMtAna nimage barali
sEDugaLa pUraike AdarSadAraike
satputra kartavya mareyadirali ||2||

suKada Sayyeya taMpu mOha maMjina mAye
bisiya nettara naMju eccarisali
kaShTanaShTada kAvu bavaNegaLa bEsigege
nirdhAradAgAra karagadirali ||3||

hariyutide nimmoLage nenapirali nammadE
pUrvajaru namagitta Suddharakuta
avaru bALida hAge nAvu badukida hAge
bALi badukiri nIvu niruta naguta ||4||

Labels: Kannada, Swatantrya Swamitva, Sangha Geeta, ಸ್ವಾತಂತ್ರ್ಯ ಸ್ವಾಮಿತ್ವ, ಸಂಘ ಹಾಡುಗಳು, ಕನ್ನಡ 

No comments: