Sunday, September 12, 2010

ಸಂಘ ವಿಚಾರವ ಮನದಲಿ ತುಂಬಿ : saMGa vicArava manadali tuMbi


ಸಂಘ ವಿಚಾರವ ಮನದಲಿ ತುಂಬಿ
ಗ್ರಾಮ ಗ್ರಾಮಕೆ ತೆರಳೋಣ ||ಪ||

ಎಂದಿಗೂ ಮರೆಯದ ಸಂಘ ಕಾರ್ಯವ
ಜೀವನ ವ್ರತ ಸ್ವೀಕರಿಸೋಣ
ಹೃದಯದಿ ತುಂಬಿದ ಅಹಂಕಾರವ
ಮನಸ್ಸಿನಿಂದ ತೆಗೆಯೋಣ ||೧||

ದೃಢ ಸಿದ್ಧಾಂತದ ಸಾಧಾರ
ಸಂಘ ಬುನಾದಿಯ ಕಟ್ಟೋಣ
ವಿಪತ್ತುಗಳನೆದುರಿಸಲು ನಾವು
ನಿರ್ಭಯರಾಗಿ ಶ್ರಮಿಸೋಣ ||೨||

ಹೃದಯ ಸಾಗರದಂಚನು ದಾಟಿ
ಸ್ವರ್ಗಿಯ ಇತಿಹಾಸವ ರಚಿಸೋಣ
ತತ್ವ ಸುಧಾರಸ ಕುಂಭವ ಕುಡಿದು
ಅಮೃತ ಪುಂಗವರಾಗೋಣ ||೩||

saMGa vicArava manadali tuMbi
grAma grAmake teraLONa ||pa||

eMdigU mareyada saMGa kAryava
jIvana vrata svIkarisONa
hRudayadi tuMbida ahaMkArava
manassiniMda tegeyONa ||1||

dRuDha siddhAMtada sAdhAra
saMGa bunAdiya kaTTONa
vipattugaLanedurisalu nAvu
nirBayarAgi SramisONa ||2||

hRudaya sAgaradaMcanu dATi
svargiya itihAsava racisONa
tatva sudhArasa kuMBava kuDidu
amRuta puMgavarAgONa ||3||

No comments: