Friday, September 17, 2010

ಸಿಂಧು ಸಂಸ್ಕೃತಿಯಲ್ಲಿ : siMdhu saMskRutiyalli


ಸಿಂಧು ಸಂಸ್ಕೃತಿಯಲ್ಲಿ ಸಿರಿಪರಂಪರೆಯಲ್ಲಿ
ಹಿಂದು ಹೆಸರಲಿ ನಾವು ಬಂದೆವಿಳೆಗೆ
ಸಂದಕಾಲವನಳೆದು ಇಂದು ಯಶ ಸಿದ್ಧಿಸಲು
ಬಂದಿಹುದು ಶುಭ ಸಮಯ ನಮ್ಮ ಬಳಿಗೆ ||ಪ||

ಒಡಕು ಶಂಖಧ್ವನಿಯ ಗುಡುಗು ನೂರ್ಮಡಿಗೊಂಡು
ಸಿಡಿಸಿಡಿದು ಸೀಳಾಗಿ ಸ್ವೀಕರಿಪ ಮೊದಲೇ
ಬಡವ ಅಂತ್ಯಜರೆಂಬ ತಡೆಗೋಡೆಗಳು ಬೆಳೆದು
ದುಡುಕಿ ವಿಷನಾಗಗಳು ಪೂತ್ಕರಿಪ ಮೊದಲೇ
ಹುಡುಕಿ ಓರ್ವೋರ್ವನನು ನಿಜ ವಿಕಾಸಕೆ ತರಲು ||೧||

ವಿಸ್ಮೃತಿಯ ಕರಿಮುಗಿಲು ಪ್ರಗತಿ ಪಥವನು ಕವಿದು
ಪಶ್ಚಿಮಕೆ ಸೋತವರನನುಸರಿಸದೇ
ಆತ್ಮರತಿಯಲಿ ಮುಳುಗಿ ಆರ್ತರನು ಕಡೆಗಣಿಸಿ
ಆತ್ಮದುತ್ಥಾನದಲೆ ಮನ ಸೋಲದೇ
ಲೋಕ ಕಲ್ಯಾಣದೆಲೆ ಸಾರ್ಥಕತೆ ಸೃಷ್ಟಿಸಲು ||೨||

ನಿಶೆಯ ವಿಭ್ರಮೆಯುಳಿಸಿ ಉಷೆಯ ಉದ್ಗಮಗೊಳಿಸಿ
ಹೊಸದಿಗಂತದಿ ಹಿಂದು ಪ್ರಜ್ಞೆ ಬೆಳಗೆ
ಅರುಣ ಕದಿರಾವರಿಸಿ ಧೀ ಪ್ರಚೋದನೆಗೊಳಿಸಿ
ಅರ್ಘ್ಯವನು ಕಾದಿರಲಮೃತ ಘಳಿಗೆ
ಧ್ಯೇಯ ಸಾಧನೆ ವ್ರತಕೆ ಮನದಿ ಸಂಕಲ್ಪಿಸಲು ||೩||

siMdhu saMskRutiyalli siriparaMpareyalli
hiMdu hesarali nAvu baMdeviLege
saMdakAlavanaLedu iMdu yaSa siddhisalu
baMdihudu SuBa samaya namma baLige        ||pa||

oDaku SaMKadhvaniya guDugu nUrmaDigoMDu
siDisiDidu sILAgi svIkaripa modalE |
baDava aMtyajareMba taDegODegaLu beLedu
duDuki viShanAgagaLu pUtkaripa modalE
huDuki OrvOrvananu nija vikAsake taralu    ||1||

vismRutiya karimugilu pragati pathavanu kavidu
paScimake sOtavarananusarisadE |
Atmaratiyali muLugi Artaranu kaDegaNisi
AtmadutthAnadale mana sOladE |
lOka kalyANadele sArthakate sRuShTisalu    ||2||

niSeya viBrameyuLisi uSheya udgamagoLisi
hosadigaMtadi hiMdu praj~je beLage
aruNa kadirAvarisi dhI pracOdanegoLisi
arghyavanu kAdiralamRuta GaLige
dhyEya sAdhane vratake manadi saMkalpisalu        ||3||

No comments: