Sunday, September 26, 2010

ಹಿಂದುತ್ವದ ಒಡಲಾಳದ ಬೆಂಕಿಯೆ : hiMdutvada oDalALada


ಹಿಂದುತ್ವದ ಒಡಲಾಳದ ಬೆಂಕಿಯೆ
ಜಡತೆಯ ತೊರೆದು ಸಿಡಿದೇಳು
ಶತಶತಮಾನದ ಕಡು ಅಪಮಾನದ
ಅವಶೇಷಂಗಳ ದಹಿಸೇಳು... ಮುಗಿಲನು ಚುಂಬಿಸಿ ಭುಗಿಲೇಳು ||
ಸತ್ಯಮೇವ ಜಯತೇ... ಶೌರ್ಯಮೇವ ಜಯತೇ ||ಪ||

ನಿನ್ನಯ ಪೌರುಷಮಯ ಇತಿಹಾಸ
ಸ್ಮರಿಸದೆ ಮೈಮರೆತಿದೆ ಈ ದೇಶ
ಪ್ರಕಟಗೊಳ್ಳು ನೀ ಪ್ರಜ್ವಲಿಸುತಲಿ
ಬೆಳಗಲಿ ಭುವಿ ತವ ಪ್ರಖರ ಪ್ರಕಾಶ ||೧||

ತುಷ್ಟೀಕರಣವ ಪುಷ್ಟೀಕರಿಸುವ
ತಾರತಮ್ಯಯುತ ಧೋರಣೆಯು |
ಕಪಟ ಮತಾಂತರ ಕುಟಿಲ ಅವಾಂತರ
ರಾಷ್ಟಾಂತರಕಿದು ಪ್ರೇರಣೆಯು ||೨||

ಸಂಘ ಶಕ್ತಿಯ ನೀ ಪ್ರತಿರೂಪ
ಹೊರಹೊಮ್ಮಿಸು ಬಾ ನಿನ್ನ ಪ್ರತಾಪ |
ವಿಘ್ನ ವಿರೋಧಕ ಮಸಣದ ಬೂದಿ
ಸತ್ಯಕೆ ಅಂತಿಮ ವಿಜಯದ ಗಾದಿ ||೩||

hiMdutvada oDalALada beMkiye
jaDateya toredu siDidELu
SataSatamAnada kaDu apamAnada
avaSEShaMgaLa dahisELu... mugilanu cuMbisi BugilELu ||
satyamEva jayatE... SouryamEva jayatE ||pa||

ninnaya pouruShamaya itihAsa
smarisade maimaretide I dESa
prakaTagoLLu nI prajvalisutali
beLagali Buvi tava praKara prakASa ||1||

tuShTIkaraNava puShTIkarisuva
tAratamyayuta dhOraNeyu |
kapaTa matAMtara kuTila avAMtara
rAShTRAMtarakidu prEraNeyu ||2||

saMGa Saktiya nI pratirUpa
horahommisu bA ninna pratApa |
viGna virOdhaka masaNada bUdi
satyake aMtima vijayada gAdi ||3||

No comments: