Sunday, September 12, 2010

ಸಮಾಜಪುರುಷನ ಅಭಂಗ ಪೂಜೆಗೆ : samAjapuruShana aBaMga pUjege


ಸಮಾಜಪುರುಷನ ಅಭಂಗ ಪೂಜೆಗೆ ಅಸಂಖ್ಯ ಕಮಲಗಳರಳುತಿವೆ
ಅಸೀಮ ಸ್ಫೂರ್ತಿಯ ಸಶಕ್ತ ಯುವಕರ ಪ್ರಬುದ್ಧ ಹೃದಯಗಳರಳುತಿವೆ ||ಪ||

ಪ್ರಭಾತ ಭಾಸ್ಕರ ಮುದದಿಂದುದಿಸುತ ಪೂರ್ಣಾಕಾರದಿ ಬರುತಿಹನು
ನವರಾಗದ ನವಗಾನದ ನವೀನ ಸಂದೇಶವನದೊ ತರುತಿಹನು
ಅನಂತ ಪ್ರೇರಣೆ ದಿಗಂತ ತುಂಬುತ ಸಜೀವ ತಳೆಯುತಲಿದೆ ನಾಡು
ಸನ್ಮಂಗಳ ಜಯಗಾನವ ಪಾಡುವ ರಣಕಹಳೆಗಳೆದ್ದಿವೆ ನೋಡು ||೧||

ರಾಷ್ಟ್ರದ ದೈವಾರಧನೆ ಬಂದಿದೆ ಬೆಂಕಿಯ ಕೊಡು ನಿಜ ಜೀವನಕೆ
ಪ್ರಜ್ವಲಿಸಲಿ ಯಜ್ಞದ ಜ್ವಾಲಾಪ್ರಭೆ ಧುಮುಕೊಮ್ಮೆಗೆ ಸಮರಾಂಗಣಕೆ
ಈ ಜೀವನವಾಗಲಿ ಆಜ್ಯಾಹುತಿ ಭೂರಜಕಾಗಲಿ ಸಂತೃಪ್ತಿ
ಅದರಿಂದಾಗಲಿ ಚಿರ ರಾಷ್ಟ್ರೋನ್ನತಿ ಅದುವರೆಗೆಲ್ಲಿದೆ ವಿಶ್ರಾಂತಿ? ||೨||

samAjapuruShana aBaMga pUjege asaMKya kamalagaLaraLutive
asIma sphUrtiya saSakta yuvakara prabuddha hRudayagaLaraLutive ||pa||

praBAta BAskara mudadiMdudisuta pUrNAkAradi barutihanu
navarAgada navagAnada navIna saMdESavanado tarutihanu
anaMta prEraNe digaMta tuMbuta sajIva taLeyutalide nADu
sanmaMgaLa jayagAnava pADuva raNakahaLegaLeddive nODu ||1||

rAShTrada daivAradhane baMdide beMkiya koDu nija jIvanake
prajvalisali yaj~jada jvAlApraBe dhumukommege samarAMgaNake
I jIvanavAgali AjyAhuti BUrajakAgali saMtRupti
adariMdaagali cira rAShTrOnnati aduvaregellide viSrAMti? ||2||

No comments: