Saturday, September 18, 2010

ಸಿಡಿಲೆರಗಿದರೂ ಬಂದೊದಗಿದರೂ : siDileragidarU baMdodagidarU


ಸಿಡಿಲೆರಗಿದರೂ ಬಂದೊದಗಿದರೂ ಕಡು ಭೀಕರ ಅಗ್ನಿ ಪರೀಕ್ಷೆ
ಸಾಸಿರ ವಿಜಯದ ಭುಜಕೀರ್ತಿಯ ಜೊತೆ
ಮನತೊಡುವುದೇ ಸೈ ಮರುದೀಕ್ಷೆ ||ಪ||

ನೆಲೆದೆದೆಯಾಳದ ಪ್ರಬಲ ಪ್ರವಾಹದ ಬುಗ್ಗೆಯಿದೋ ರಮ್ಯ ಅದಮ್ಯ
ದೌಷ್ಟ್ಯಕೆ ದಮನಕೆ ಕುಗ್ಗದು ಚೇತನ, ಮನದೆಲ್ಲೆಯು ಕೋವಿಗಗಮ್ಯ ||೧||

ಹನಿನೆತ್ತರು ಬಿದ್ದೆಡೆ ಹುತ್ತಾಗುತ ಸತ್ತೆಡೆಸಾವಿರವಾಗುತಲಿ
ತನುವೆತ್ತುವೆವೊ ತಲೆಯೆತ್ತುವೆವೊ ಮಣ್ಣಿನೊಳೆ ಹೊನ್ನಾಗುತಲಿ ||೨||

ತಕ್ಷಕ ದಂಶಕೆ ಮಡಿದಶ್ವತ್ಥದ ಹಿಡಿಬೂದಿಯನಭಿಮಂತ್ರಿಸುತ
ತಕ್ಷಣ ವೃಕ್ಷವ ಚಿಗುರಿಸುವುದೆ ಸೈ, ಅಶ್ವಿನಿಯರನಾಮಂತ್ರಿಸುತ ||೩||

siDileragidarU baMdodagidarU kaDu BIkara agni parIkShe
sAsira vijayada BujakIrtiya jote
manatoDuvudE sai marudIkShe ||pa||

nelededeyALada prabala pravAhada buggeyidO ramya adamya
douShTyake damanake kuggadu cEtana, manadelleyu kOvigagamya ||1||

haninettaru biddeDe huttAguta satteDesAviravAgutali
tanuvettuvevo taleyettuvevo maNNinoLe honnAgutali ||2||

takShaka daMSake maDidaSvatthada hiDibUdiyanaBimaMtrisuta
takShaNa vRukShava cigurisuvude sai, aSviniyaranAmaMtrisuta ||3||

No comments: