Sunday, September 12, 2010

ಸಂಘ ಜನಿಸಿತು ಕೇಶವನ : saMGa janisitu


ಸಂಘ ಜನಿಸಿತು ಕೇಶವನ ದಿವ್ಯದೃಷ್ಟಿಯಿಂದ
ನಾಡಿನೆಲ್ಲೆಡೆ ಹರಡಿತು ಭರದಿ ತಪಸಿನ ಛಲದಿಂದ
ತಪಸಿನ ಫಲದಿಂದ ಅವನ ತ್ಯಾಗದ ಬಲದಿಂದ ||ಪ||

ಸಾವಿರ ವರುಷದ ದಾಸ್ಯಕೆ ಕಾರಣ ಐಕ್ಯತೆ ಇಲ್ಲದ ದೇಶ
ರಾಷ್ಟ್ರದೆಲ್ಲೆಡೆ ಮೊಳಗಿದೆ ಇಂದು ಹಿಂದು ಎಂಬ ಘೋಷ
ನಾವು ಹಿಂದು ಎಂಬ ಘೋಷ ||೧||

ವೀರಪುರುಷರ ಬಾಳ ಕಥೆಗಳು ನೀಡಿವೆ ನಮಗೆ ಆಹ್ವಾನ
ತಾಯ ಗೌರವವ ಎತ್ತಿ ಹಿಡಿಯಲು ಮರಣವೆ ಸನ್ಮಾನ
ನಮಗೆ ಮರಣವೆ ಸನ್ಮಾನ ||೨||

ಸಂಘದ ಕಾರ್ಯದ ಸೂರ್ಯನ ಬೆಳಕಲಿ ಬೆಳಗಿದೆ ವಿಜಯದ ಹಾದಿ
ಭರತಮಾತೆಯೆ ಎಲ್ಲರ ತಾಯಿ ಎಂದು ಜಗಕೆ ಸಾರಿ
ಇಂದು ಜಗಕೆ ದಾರಿ ತೋರಿ ||೩||

saMGa janisitu kESavana divyadRuShTiyiMda
nADinelleDe haraDitu Baradi tapasina CaladiMda
tapasina PaladiMda avana tyAgada baladiMda ||pa||

sAvira varuShada dAsyake kAraNa aikyate illada dESa
rAShTradelleDe moLagide iMdu hiMdu eMba GOSha
nAvu hiMdu eMba GOSha ||1||

vIrapuruShara bALa kathegaLu nIDive namage AhvAna
tAya gouravava etti hiDiyalu maraNave sanmAna
namage maraNave sanmAna ||2||

saMGada kAryada sUryana beLakali beLagide vijayada hAdi
BaratamAteye ellara tAyi eMdu jagake sAri
iMdu jagake dAri tOri ||3||

No comments: