Sunday, September 26, 2010

ಹಾಡುವೆವು ಹೊಸತೊಂದು ಹಾಡು : hADuvevu hosatoMdu hADu


ಹಾಡುವೆವು ಹೊಸತೊಂದು ಹಾಡು
ಕಟ್ಟುವೆವು ಹೊಸತೊಂದು ನಾಡು
ಹಿಡಿದಿಹೆವು ಐಕ್ಯತೆಯ ಜಾಡು
ನೀಗುವೆವು ತಾಯ್ನಾಡ ಪಾಡು ||ಪ||

ಮತಜಾತಿಗಳ ಸೀಮೆ ದಾಟಿ
ನವಚೇತನದ ತಂತಿ ಮೀಟಿ
ಸುತರಿರಲು ನಾವ್ ನೂರು ಕೋಟಿ
ಭುವಿಯಲ್ಲಿ ನಮಗಾರು ಸಾಟಿ ||೧||

ಪ್ರಾಚೀನ ಇತಿಹಾಸವೆಮದು
ಭಾವಿತವ್ಯವತಿಭವ್ಯ ನಮದು
ಬಿತ್ತರಿಸಿ ತಾಯ್ನಾಡ ಹಿರಿಮೆ
ಗಳಿಸುವೆವು ಗತಮಾನ ಗರಿಮೆ ||೨||

ಶತ್ರುಗಳ ಷಡ್ಯಂತ್ರ ಕುಟಿಲ
ಪರಿಹಾರ ಸಂಕೀರ್ಣ ಜಟಿಲ
ಎದೆಗುಂದದೆಯೆ ಮುಂದೆ ಸಾಗಿ
ಹೋರಾಡಿ ಜಯಶೀಲರಾಗಿ ||೩||

hADuvevu hosatoMdu hADu
kaTTuvevu hosatoMdu nADu
hiDidihevu aikyateya jADu
nIguvevu tAynADa pADu ||pa||

matajAtigaLa sIme dATi
navacEtanada taMti mITi
sutariralu nAv nUru kOTi
Buviyalli namagAru sATi ||1||

prAcIna itihAsavemadu
BAvitavyavatiBavya namadu
bittarisi tAynADa hirime
gaLisuvevu gatamAna garime ||2||

SatrugaLa ShaDyaMtra kuTila
parihAra saMkIrNa jaTila
edeguMdadeye muMde sAgi
hOrADi jayaSIlarAgi ||3||

No comments: