Sunday, September 26, 2010

ಹಿಂದು ಹೆಸರಿನ ರಾಷ್ಟ್ರದೇಹದ : hiMdu hesarina rAShTradEhada


ಹಿಂದು ಹೆಸರಿನ ರಾಷ್ಟ್ರದೇಹದ ಉಸಿರೆ ನಮನ ಸನಾತನ
ಓ ಮಹೋನ್ನತ ಚೇತನ ||ಪ||

ಹಿಂದುಸಾಗರ ಹಿಮದ ಆಗರ ನದಿಯ ನಾಗರ ಸಂಗಮ
ಮರದ ಮರ್ಮರದಿಂದ ಹೊರಡಿಸು ಸ್ವಾಭಿಮಾನದ ಸರಿಗಮ
ಹಿಂದು ಹಿಂದುವಿನೆದೆಯ ಸ್ಪಂದನ ನಿನ್ನ ಯಾನದ ಇಂಧನ ||೧||

ಭಣಗುಡುವ ಜನಮನದ ಗಗನದಿ ತುಂಬಿ ಮೇಘದ ಗರ್ಜನ
ಸ್ವಾರ್ಥ ಜಡತೆಯ ರೂಢಿರಾಡಿಯ ಮಾಡುತಲಿ ಪರಿಮಾರ್ಜನ
ಸಿಡಿಲು ದಹಿಸಲಿ ಮಲೆಯು ತೊಳೆಯಲಿ ಬೆಳಕು ಹೊಮ್ಮಲಿ ಬಾಳಿನ ||೨||

ಶಕ್ತವಾಗಲಿ ವ್ಯಕ್ತಿಜೀವನ ನಿನ್ನ ಕಾಯದ ಕಣಕಣ
ಪ್ರಾಣವರ್ಧನ ತ್ರಾಣವರ್ಧನ ಬೆಳೆಸು ದ್ರುಮದೊಲು ತೃಣತೃಣ
ವೈರಿಕುಲ ಕಾಳಿಂಗ ಮರ್ದನ ಶೌರ್ಯಧನ ಸಂವರ್ಧನ ||೩||

hiMdu hesarina rAShTradEhada usire namana sanAtana
O mahOnnata cEtana ||pa||

hiMdusAgara himada Agara nadiya nAgara saMgama
marada marmaradiMda horaDisu svABimAnada sarigama
hiMdu hiMduvinedeya spaMdana ninna yAnada iMdhana ||1||

BaNaguDuva janamanada gaganadi tuMbi mEGada garjana
svArtha jaDateya rUDhirADiya mADutali parimArjana
siDilu dahisali maleyu toLeyali beLaku hommali bALina ||2||

SaktavAgali vyaktijIvana ninna kAyada kaNakaNa
prANavardhana trANavardhana beLesu drumadolu tRuNatRuNa
vairikula kALiMga mardana Souryadhana saMvardhana ||3||

No comments: