Sunday, September 26, 2010

ಸೇವೆಯೆ ಜೀವನದ ಪರಮಧರ್ಮ : sEveye jIvanada paramadharma


ಸೇವೆಯೆ ಜೀವನದ ಪರಮಧರ್ಮ
ಜೀವಲೋಕದ ಹಿತದ ಆಧಾರಮರ್ಮ ||ಪ||

ಅದ್ವೈತ ಸಂಬಂಧ ದ್ವೈತದರಿವಿನೊಳಿಂದ
ಅದ್ವಿತೀಯಾನಂದ ಸೇವೆಯಿಂದ
ಸುದ್ದಿಗಳ ಸುಳಿವಿಲ್ಲ ಶಬ್ದದಾವುಟ ಸಲ್ಲ
ಶುದ್ಧ ಸೇವಾಭಾವ ಇದು ಸಹಜ ನಿಜ ಕರ್ಮ ||೧||

ಸಾಮಾಜಿಕರ ನಡುವೆ ಸಮರಸವನು ಎರೆದು
ಸಾಂಮನಸ್ಯದ ಚಿಗುರು ಹೂವು ಪಡೆದು
ಈ ಮಹಾ ಹಿಂದು ಜೀವನ ತರುವು ನಳನಳಿಸೆ
ಸೇವಾವ್ರತದ ಪಥವು ಸಾರ್ಥಕವು ಜನ್ಮ ||೨||

ನೀಗುವೆವು ಲೋಕಗಳ ಶೋಕಗಳ ಸಂಕುಲವ
ನೀಡುವೆವು ಜನಮನಕೆ ಚೈತನ್ಯವ
ಬಲಗೊಳಲಿ ಭಾರತವು ಫಲ ತರಲಿ ಪೌರುಷವು
ನೆಲಗೊಳಲಿ ಸತ್ಯ ಸೌಂದರ್ಯದಭಿರಾಮ ||೩||

sEveye jIvanada paramadharma
jIvalOkada hitada AdhAramarma ||pa||

advaita saMbaMdha dvaitadarivinoLiMda
advitIyAnaMda sEveyiMda
suddigaLa suLivilla SabdadAvuTa salla
Suddha sEvABAva idu sahaja nija karma ||1||

sAmAjikara naDuve samarasavanu eredu
sAMmanasyada ciguru hUvu paDedu
I mahA hiMdu jIvana taruvu naLanaLise
sEvAvratada pathavu sArthakavu janma ||2||

nIguvevu lOkagaLa SOkagaLa saMkulava
nIDuvevu janamanake caitanyava
balagoLali BAratavu Pala tarali pouruShavu
nelagoLali satya souMdaryadaBirAma ||3||

No comments: