Sunday, September 12, 2010

ವೇದಕಾಲ ದಾಳದಿಂದ : vEdakAla dALadiMda


ವೇದಕಾಲ ದಾಳದಿಂದ ಪುರಾಣಗಳ ಪೂರ್ವದಿಂದ
ತತ್ವಕಾವ್ಯ ವಿಸ್ತರಕೆ ನಡೆ ನಿರಂತರ
ರಾಮಭರತರೊಡನೆ ಬೆರೆತು ಕೃಷ್ಣಾರ್ಜುನರೊಡನೆ ಕಲೆತು
ಬಾಹುಬಲಿಯ ಎತ್ತರಕ್ಕೆ ನಡೆನಿರಂತರ ||ಪ||

ಜಾತಿಮತದ ಪೊರೆಯ ಹರಿದು
ಮೌಡ್ಯ ಮೋಹದೆದೆಯ ಬಿರಿದು
ನಿಂದೆ ಸ್ತುತಿಯನೆಲ್ಲ ಗೆಲುತ ನಡೆನಿರಂತರ
ನೂರು ಬಗೆಯ ನೋವನುಂಗಿ | ಚಾರುಮಂದಹಾಸ ಬೆಳಗಿ
ನಾಡಿನೆಲ್ಲ ನಗಿಸಿ ನಗುತ - ನಡೆನಿರಂತರ ||೧||

ಸ್ವಾಭಿಮಾನದುಸಿರ ಹಿಡಿದು ದಾಸ್ಯಮತಿಯ ನೆನಪ ತೊರೆದು
ಸಂಘದ ಸುಮಗಂಧ ಸೂಸಿ ನಡೆನಿರಂತರ
ಶ್ರದ್ಧೆ ಶ್ರಮವನಾರಧಿಸಿ ಧ್ಯೇಯವ್ರತವ ಪರಿಪಾಲಿಸಿ
ಚರೈವೇತಿ ಮಂತ್ರಪಠಿಸಿ - ನಡೆ ನಿರಂತರ ||೨||

ನಡೆನಿರಂತರ - ನಡೆನಿರಂತರ
ನಿಲ್ಲದೆ ನಡೆ ನಿರಂತರ ಉತ್ತರೋತ್ತರ
ಲೋಕ ಲೋಕಕೊದಗಲಿದೆ ಹಿಂದು ಮನ್ವಂತರ
ಏಕ ಮನದಿ ಧೀರ ಪಥದಿ ನಡೆನಿರಂತರ ||೩||

vEdakAla dALadiMda purANagaLa pUrvadiMda
tatvakAvya vistarake naDe niraMtara
rAmaBarataroDane beretu kRuShNArjunaroDane kaletu
bAhubaliya ettarakke naDeniraMtara ||pa||

jAtimatada poreya haridu
mouDya mOhadedeya biridu
niMde stutiyanella geluta naDeniraMtara
nUru bageya nOvanuMgi | cArumaMdahAsa beLagi
nADinella nagisi naguta - naDeniraMtara ||1||

svABimAnadusira hiDidu dAsyamatiya nenapa toredu
saMGada sumagaMdha sUsi naDeniraMtara
Sraddhe SramavanAradhisi dhyEyavratava paripAlisi
caraivEti maMtrapaThisi - naDe niraMtara ||2||

naDeniraMtara - naDeniraMtara
nillade naDe niraMtara uttarOttara
lOka lOkakodagalide hiMdu manvaMtara
Eka manadi dhIra pathadi naDeniraMtara ||3||

No comments: