ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Sunday, September 26, 2010
ಹಿಂದು ಭೂಮಿಯ ಸಿಂಧೂ ಜಲಧಿಯ : hiMdu BUmiya siMdhU jaladhiya
ಹಿಂದು ಭೂಮಿಯ ಸಿಂಧೂ ಜಲಧಿಯ ಕಣಕಣಗಳ ಚೈತನ್ಯವ ಹೀರಿ
ಹಿಂದುವಿನೆದೆ ಎದೆ ಸ್ಪಂದನಗೊಳುತಿದೆ ಬಾಂಧವ್ಯದ ಮಜಲೇರಿ ||ಪ||
ಸರಿಸುತ ಕಾರ್ಗತ್ತಲ ದೂರ ಪಸರಿಸುತಾ ಜಾಗೃತಿ ಕದಿರ
ಹಿಂದೂರವಿಯುದಯಿಸಿದನು ನೋಡ, ಹಿಂದಕೆ ಸರಿಯಿತು ಮೋಡ
ಅಂಗಳದಲಿ ಮುಂಜಾವಿಗೆ ಸ್ವಾಗತ, ಭವಿಷ್ಯತ್ತಿಗೆ ಯಶಕೋರಿ ||೧||
ಕುಗ್ಗಿದೆ ಸಂಕೋಚದ ಅವಧಿ ಹಿಗ್ಗಿದೆ ಸಂತೋಷದ ಉದಧಿ
ಭಾರತಮಾತೆಗೆ ವೈಭವಕಾಲ ಬರುತಿದೆ ಸಂಶಯವಿಲ್ಲ
ಗತಗೌರವವಾ ಮತ್ತೆ ಪಡೆಯುವಾ, ದೃಢನಿರ್ಧಾರವ ತೋರಿ ||೨||
ಸೋಲಿನ ಕಾರಣಗಳ ಹುಡುಕಿ, ವಿಜಯ ರಣಾಂಗಣದೊಳು ಧುಮುಕಿ
ಸಂಗಮಿಸಿದೆ ಚೇತನ ಕಾವೇರಿ ಸಂಘಟನೆಯ ನಿಜದಾರಿ
ಒಂದನು ಎರಡಾಗಿಸಿ ನಾಲ್ಕಾಗಿಸಿ ನೂರು ಸಾವಿರವ ಸೇರಿ ||೩||
ವಿಶ್ವವೆ ವಿಶ್ವಾಸವನಿಡುವಾ, ಪ್ರತಿಮಾನವ ಸಂತಸ ಪಡುವಾ
ವಿವಿಧತೆ ಏಕತೆ ಮೇಳೈಸಿಹುದು ದ್ವೈತಾದ್ವೈತವು ನಮದು
ಧರ್ಮದ ತಳಹದಿ ಕರ್ಮಕೆ ನಾಂದಿ, ಎಂಬೀ ತತ್ವವ ಸಾರಿ ||೪||
hiMdu BUmiya siMdhU jaladhiya kaNakaNagaLa caitanyava hIri
hiMduvinede ede spaMdanagoLutide bAMdhavyada majalEri ||pa||
sarisuta kArgattala dUra pasarisutA jAgRuti kadira
hiMdUraviyudayisidanu nODa, hiMdake sariyitu mODa
aMgaLadali muMjAvige svAgata, BaviShyattige yaSakOri ||1||
kuggide saMkOcada avadhi higgide saMtOShada udadhi
BAratamAtege vaiBavakAla barutide saMSayavilla
gatagouravavA matte paDeyuvA, dRuDhanirdhArava tOri ||2||
sOlina kAraNagaLa huDuki, vijaya raNAMgaNadoLu dhumuki
saMgamiside cEtana kAvEri saMGaTaneya nijadAri
oMdanu eraDAgisi nAlkAgisi nUru sAvirava sEri ||3||
viSvave viSvAsavaniDuvA, pratimAnava saMtasa paDuvA
vividhate Ekate mELaisihudu dvaitAdvaitavu namadu
dharmada taLahadi karmake nAMdi, eMbI tatvava sAri ||4||
Subscribe to:
Post Comments (Atom)
No comments:
Post a Comment