Monday, July 26, 2010

ಧರೆಯ ಹೃದಯ ಗೆದ್ದು : dhareya hRudaya geddu


ಧರೆಯ ಹೃದಯ ಗೆದ್ದು ಎದ್ದು ನಿಲ್ಲಬಲ್ಲ ಭಾರತ
ತಾಯೇ ನಿನ್ನ ಪೂಜೆ ನಾನು ಮಾಡುವೆನು ಅವಿರತ ||ಪ||

ನೋವನೆಲ್ಲ ನುಂಗಿ ನೀನು ನಮ್ಮನೆಲ್ಲ ಸಲಹಿದೆ
ನಿನ್ನ ನಾವು ಮರೆತ ನೋವು ಎದೆಯನೆಲ್ಲ ತುಂಬಿದೆ
ಅಂದುಗೈದ ಪಾಪ ತೊಳೆದು ಮತ್ತೆ ಶುದ್ಧರಾಗಲು
ಬಿಡದೆ ನಿನ್ನ ಸೇವಿಸುವ ಸತ್ವಶೀಲ ಸುತರೊಲು ||೧||

ನಿನ್ನ ಅಂಗ ಅಂಗವೆಲ್ಲ ಭಂಗವಾಗಿ ಹೋದ ಚಿತ್ರ
ಕಾಣುತಿಹುದು ಕಣ್ಣ ಮುಂದೆ ಭೀತಿ ತರುವ ವಿಷದ ಚಕ್ರ
ಅಮ್ಮ ನಿನ್ನ ಮಕ್ಕಳೆಲ್ಲ ತುಂಬಿಕೊಂಡು ಭೇದಭಾವ
ಕಾದಿ ಮಡಿವ ದೃಶ್ಯ ಕಂಡು ನೊಂದೆ ತಾಯೇ ಭಾರತೀ ||೨||

ಮತ್ತಮುತ್ತಿದಂಥ ಘೋರ ಅಂಧಕಾರ ತೊಡೆವೆನಿಂದು
ಎನ್ನ ಬಾಳ ಭವ್ಯ ಗುರಿಯ ತೋರಿಸಿದೆ ಸಂಘವಿಂದು
ಎನ್ನ ಸರ್ವಶಕ್ತಿ ಸುರಿದು ಸಂಘ ಕಾರ್ಯಗೈದು ನಾನು
ಭವ್ಯ ಬಾಳು ಬಾಳುವಂತೆ ಹರಸು ಎನ್ನ ಓ ಪ್ರಭೋ ||೩||

dhareya hRudaya geddu eddu nillaballa BArata
tAyE ninna pUje nAnu mADuvenu avirata ||pa||

nOvanella nuMgi nInu nammanella salahide
ninna nAvu mareta nOvu edeyanella tuMbide
aMdugaida pApa toLedu matte SuddharAgalu
biDade ninna sEvisuva satvaSIla sutarolu ||1||

ninna aMga aMgavella BaMgavAgi hOda citra
kANutihudu kaNNa muMde BIti taruva viShada cakra
amma ninna makkaZLella tuMbikoMDu BEdaBAva
kAdi maDiva dRuSya kaMDu noMde tAyE BAratI ||2||

mattamuttidaMtha GOra aMdhakAra toDeveniMdu
enna bALa Bavya guriya tOriside saMGaviMdu
enna sarvaSakti suridu saMGa kAryagaidu nAnu
Bavya bALu bALuvaMte harasu enna O praBO ||3||

Sunday, July 25, 2010

ಹೆಗಲು ಹೆಗಲು ಹೆಜ್ಜೆ ಹೆಜ್ಜೆ : hegalu hegalu hejje hejje


ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವ
ಯುಗದ ಹಣೆಯ ಬರಹ ತಿದ್ದಿ ಹಗೆಯಕುಲವ ತೊಡೆಯುವಾ
ಅಜಯ ಗೀತೆ ಅಭಯ ಗೀತೆ ವಿಜಯ ಗೀತೆ ಹಾಡುವಾ ||ಪ||

ವಿಂಧ್ಯ ಸಹ್ಯ ನೀಲಗಿರಿಯು ಹಿಮಗಿರಿಗೇ ಬೆಂಬಲ
ಬಂಜೆಯಲ್ಲ ಭಾರತಾಂಬೆ ಶೂರಸುತರದೀ ನೆಲ
ಕೆಡುಕನಳಿಸೆ, ಒಳಿತು ಗಳಿಸೆ ಸಿದ್ಧವಿಹುದು ತೋಳ್ಬಲ ||೧||

ನಾವು ಅಮರ ಪುತ್ರರು, ನರ ನಿಮಿತ್ತ ಮಾತ್ರರು
ಗೋತ್ರಭಿದನ ಗೋತ್ರರು, ಮೃತ್ಯುಂಜಯ ಮಿತ್ರರು
ಕ್ಷಯವಿಲ್ಲದ ಕ್ಷಾತ್ರರು, ಅಲ್ಲ ಗಲಿತಗಾತ್ರರು ||೨||

ಮಾನವನ್ನೆ ಬಲಿಯ ಕೊಟ್ಟು ಬಾಳಬಹುದೆ ಮಾನವ?
ತಡವಿದೇಕೆ ತಡವುದೇಕೆ ದ್ರೋಹಿಯ ಹೊರಗಟ್ಟುವಾ
ಹಗೆಯ ಮೆಟ್ಟಿ ಹೆಣವನೊಟ್ಟಿ ವಿಜಯದುರ್ಗ ಕಟ್ಟುವಾ ||೩||

ಚಾಮುಂಡಿ ಔತಣಕ್ಕೆ, ಶತ್ರು ರಕ್ತ ತರ್ಪಣ
ರಾಷ್ಟ್ರದೇಕಾತ್ಮಶಕ್ತಿಗೆಮ್ಮ ಹೃದಯದರ್ಪಣ
ದೇಹಗೇಹನೇಹವೆಲ್ಲ ಅನ್ನಿ ರಾಷ್ಟ್ರಾರ್ಪಣ ||೪||

ಇಂದು ಸಾಯಲಾರದವನು ಎಂದು ಬದುಕಲರಿಯನು
ದೇಶದ ಮೊರೆ ಧರ್ಮದ ಕರೆ ಕರ್ತವ್ಯದ ಕಡು ತ್ವರೆ
ರಣಕಹಳೆಯು ಮೊಳಗುತ್ತಿರೆ ಜೀವಗಳ್ಳರುಳಿವರೆ? ||೫||

hegalu hegalu hejje hejje jODigUDi naDeyuva
yugada haNeya baraha tiddi hageyakulava toDeyuvA
ajaya gIte aBaya gIte vijaya gIte hADuvA ||pa||

viMdhya sahya nIlagiriyu himagirigE beMbala
baMjeyalla BAratAMbe SUrasutaradI nela
keDukanaLise, oLitu gaLise siddhavihudu tOLbala ||1||

nAvu amara putraru, nara nimitta mAtraru
gOtraBidana gOtraru, mRutyuMjaya mitraru
kShayavillada kShAtraru, alla galitagAtraru ||2||

mAnavanne baliya koTTu bALabahude mAnava?
taDavidEke taDavudEke drOhiya horagaTTuvA
hageya meTTi heNavanoTTi vijayadurga kaTTuvA ||3||

cAmuMDi autaNakke, Satru rakta tarpaNa
rAShTradEkAtmaSaktigemma hRudayadarpaNa
dEhagEhanEhavella anni rAShTrArpaNa ||4||

iMdu sAyalAradavanu eMdu badukalariyanu
dESada more dharmada kare kartavyada kaDu tvare
raNakahaLeyu moLaguttire jIvagaLLaruLivare? ||5||

ಧರೆಗವತರಿಸಿದೆ ಸ್ವರ್ಗದ ಸ್ಪರ್ದಿಯು : dharegavatariside svargada


ಧರೆಗವತರಿಸಿದೆ ಸ್ವರ್ಗದ ಸ್ಪರ್ದಿಯು 
ಸುಂದರ ತಾಯ್ನೆಲವು
ನಮ್ಮೀ ತಾಯ್ನೆಲವು
ದೇವೀ ನಿನ್ನಯ ಸೊಬಗಿನ 
ಮಹಿಮೆಯ ಬಣ್ಣಿಸಲಸದಳವು 
ಬಣ್ಣಿಸಲಸದಳವು ||ಪ||

ಧವಳ ಹಿಮಾಲಯ ಮುಕುಟದ ಮೆರುಗು
ಕಾಲ್ತೊಳೆಯುತಲಿದೆ ಜಲಧಿಯ ಬುರುಗು
ಗಂಗಾ ಬಯಲಿದು ಹಸಿರಿನ ಸೆರಗು
ಕಣಕಣ ಮಂಗಲವು ನಮ್ಮೀ ತಾಯ್ನೆಲವು ||೧||

ಕಾಶಮೀರದಲಿ ಸುರಿವುದು ತುಹಿನ
ರಾಜಸ್ಥಾನದಿ ಸುಡುವುದು ಪುಲಿನ
ಮಲಯಾಚಲದಲಿ ಗಂಧದ ಪವನ
ವಿಧವಿಧ ಹೂ ಫಲವು ನಮ್ಮೀ ತಾಯ್ನೆಲವು ||೨||

ಹಲವು ಭಾಷೆ ನುಡಿ ಲಿಪಿಗಳ ತೋಟ
ವಿವಿಧ ಪಂಥ ಮತಗಳ ರಸದೂಟ
ಕಾಣಲು ಕಾಮನಬಿಲ್ಲಿನ ನೋಟ
ಬಗೆಬಗೆ ಸಂಕುಲವು ನಮ್ಮೀ ತಾಯ್ನೆಲವು ||೩||

ಪುಣ್ಯವಂತರಿಗೆ ಇದುವೆ ನಾಕ
ಖಳರಿಗೆ ಆಗಿದೆ ಶಿವನ ಪಿನಾಕ
ಶರಣಾಗತರಿಗೆ ಆಭಯದಾಯಕ
ಯುಗುಯುಗದೀ ನಿಲವು ನಮ್ಮೀ ತಾಯ್ನೆಲವು ||೪||

ಗಂಗೆ ತುಂಗೆಯರ ಅಮೃತ ಸ್ತನ್ಯ
ಕುಡಿಸುತ ಮಾಡಿದೆ ಜೀವನ ಧನ್ಯ
ಮುಡಿಪಿದು ಬದುಕು ನಿನಗೆ ಅನನ್ಯ 
ಕ್ಷಣ ಕ್ಷಣ ಬಲ ಛಲವು ನಮ್ಮೀ ತಾಯ್ನೆಲವು ||೫||

dharegavatariside svargada spardiyu 
suMdara tAynelavu
nammI tAynelavu
dEvI ninnaya sobagina mahimeya 
baNNisalasadaLavu 
baNNisalasadaLavu ||pa||

dhavaLa himAlaya mukuTada merugu
kAltoLeyutalide jaladhiya burugu
gaMgA bayalidu hasirina seragu
kaNakaNa maMgalavu nammI tAynelavu ||1||

kASamIradali surivudu tuhina
rAjasthAnadi suDuvudu pulina
malayAcaladali gaMdhada pavana
vidhavidha hU phalavu nammI tAynelavu ||2||

halavu BAShe nuDi lipigaLa tOTa
vividha paMtha matagaLa rasadUTa
kANalu kAmanabillina nOTa
bagebage saMkulavu nammI tAynelavu ||3||

puNyavaMtarige iduve nAka
KaLarige Agide Sivana pinAka
SaraNAgatarige ABayadAyaka
yuguyugadI nilavu nammI tAynelavu ||4||

gaMge tuMgeyara amRuta stanya
kuDisuta mADide jIvana dhanya
muDipidu baduku ninage ananya
kShaNa kShaNa bala chalavu nammI tAynelavu ||5||

ಧಗಧಗಿಸಿದೆ ಹೈಮಾದ್ರಿಯ ಒಡಲು : dhagadhagiside haimAdriya oDalu


ಧಗಧಗಿಸಿದೆ ಹೈಮಾದ್ರಿಯ ಒಡಲು
ಭೋರ್ಗರೆದಿದೆ ಯುವಶಕ್ತಿಯ ಕಡಲು
ಜಗದ ಸವಾಲಿಗೆ ಉತ್ತರ ಕೊಡಲು
ನವನಿರ್ಮಾಣದ ದೀಕ್ಷೆಯ ತೊಡಲು
ಜೈಜೈ ಮಾತಾ ಭಾರತಮಾತಾ... ಜೈಜೈ ಮಾತಾ ಭಾರತಮಾತಾ... ||ಪ||

ಶತಶತಮಾನದ ಸಾಹಸ ಚರಿತೆ
ಸಾಧನೆಗದುವೇ ಸ್ಪೂರ್ತಿಯ ಒರತೆ
ಮರಳಿಗಳಿಸಲು ಕಳೆದಿಹ ಘನತೆ
ಟೊಂಕವ ಕಟ್ಟಿದೆ ಜಾಗೃತ ಜನತೆ ||೧||

ಮೈಮರೆವಿನ ಕಾಲವು ಕಳೆದಿಹುದು
ಆಣ್ವಸ್ತ್ರದ ಹಿರಿತನ ಲಭಿಸಿಹುದು
ತ್ಯಜಿಸಿರಿ ಅಂಜಿಕೆ ಭ್ರಮೆ ಕೀಳರಿಮೆ
ಸಾರುವ ವಿಶ್ವಕೆ ನಾಡಿನ ಗರಿಮೆ ||೨||

ಸಹಿಸಲು ಒಲ್ಲೆವು ದ್ರೋಹಿಗಳಾಟ
ದಹಿಸಲು ಬಲ್ಲೆವು ಅರಿಗಳ ಕೂಟ
ಕೋಟಿಸುಪುತ್ರರೆ ಬನ್ನಿರಿ ಕೂಡಿ
ನಾಡಸಮಗ್ರತೆಯನು ಕಾಪಾಡಿ ||೩||

dhagadhagiside haimAdriya oDalu
BOrgaredide yuvaSaktiya kaDalu
jagada savAlige uttara koDalu
navanirmANada dIkSheya toDalu
jaijai mAtA BAratamAtA... jaijai mAtA BAratamAtA... ||pa||

SataSatamAnada sAhasa carite
sAdhanegaduvE spUrtiya orate
maraLigaLisalu kaLediha Ganate
ToMkava kaTTide jAgRuta janate ||1||

maimarevina kAlavu kaLedihudu
ANvastrada hiritana laBisihudu
tyajisiri aMjike Brame kILarime
sAruva viSvake nADina garime ||2||

sahisalu ollevu drOhigaLATa
dahisalu ballevu arigaLa kUTa
kOTisuputrare banniri kUDi
nADasamagrateyanu kApADi ||3||

ದೇಶ ದೇಶ ದೇಶ ನನ್ನದು : dESa dESa dESa nannadu


ದೇಶ ದೇಶ ದೇಶ ದೇಶ ದೇಶ ನನ್ನದು
ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು ||ಪ||

ಹರಿಹರಿಯುವ ನೀರಕಣ ಮೇಲ್ನಗುವ ಬಾನಂಗಣ
ಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣ
ಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದು
ಎಲ್ಲ ನನ್ನದು, ಎಲ್ಲ ನನ್ನದು ||೧||

ನಗೆ ಚೆಲ್ಲುವ ಮಲ್ಲಿಗೆಯ ಹೂದಳವು ನನ್ನದು
ಬಗೆಬಗೆಯ ತೆಂಗುಬಾಳೆ ಕಡಲಾಗಿಹ ಕಾಡಹೊಳೆ
ಬೆಳೆದು ನಿಂತ ವನಸಿರಿಯು, ಕಂಗೊಳಿಪ ಬೃಂದಾವನ
ಎಲ್ಲ ನನ್ನದು, ಎಲ್ಲ ನನ್ನದು ||೨||

ನರಹರಿಯ ಪಾಂಚಜನ್ಯ, ವಾಲ್ಮೀಕಿ ರಾಮಾಯಣ
ವೇದಗಳ ಉದ್ಘೋಷ ಮಂತ್ರ ತಂತ್ರ ಆವಾಸ
ಕಿವಿಯ ಮೊರೆವ ಮೇಘದೂತ ಕರುಳ ಕೊರೆವ ಕುರುಕ್ಷೇತ್ರ
ಎಲ್ಲ ನನ್ನದು, ಎಲ್ಲ ನನ್ನದು ||೩||

ವ್ಯಾಸ ಭಾಸ ಕಾಳಿದಾಸ ಬುದ್ಧ ಬಸವ ಕನಕದಾಸ
ರಾಮಕೃಷ್ಣ ಪರಮಹಂಸ ಮಧುಕೇಶವ ನೀಲಹಂಸ
ತಾಯಿ ಮಡಿಲ ಮುಗುಳುನಗೆ ಕೋಟಿ ತುಟಿಯ ಮಂದಹಾಸ
ಎಲ್ಲ ನನ್ನದು, ಎಲ್ಲ ನನ್ನದು ||೪||

dESa dESa dESa dESa dESa nannadu
siMdhu kaNive kailAsa giriyu nannadu ||pa||

harihariyuva nIrakaNa mElnaguva bAnaMgaNa
hasirAgiha maNNakaNa hArADuva hakkigaNa
hoLehoLeyuva cukkigaNa ella nannadu
ella nannadu, ella nannadu ||1||

nage celluva malligeya hUdaLavu nannadu
bagebageya teMgubALe kaDalAgiha kADahoLe
beLedu niMta vanasiriyu, kaMgoLipa bRuMdAvana
ella nannadu, ella nannadu ||2||

narahariya pAMcajanya, vAlmIki rAmAyaNa
vEdagaLa udGOSha maMtrataMtra AvAsa
kiviya moreva mEGadUta karuLa koreva kurukShEtra
ella nannadu, ella nannadu ||3||

vyAsa BAsa kALidAsa buddha basava kanakadAsa
rAmakRuShNa paramahaMsa madhukESava nIlahaMsa
tAyi maDila muguLunage kOTi tuTiya maMdahAsa
ella nannadu, ella nannadu ||4|

ದೇವಿ ಭಾರತಿಗೆ ಅನುದಿನ ನಮಿಸಿ : dEvi BAratige anudina


ದೇವಿ ಭಾರತಿಗೆ ಅನುದಿನ ನಮಿಸಿ
ಧರ್ಮ ಜಾಗೃತಿಯ ಜ್ಯೋತಿಯ ಉರಿಸಿ
ದೇಶದ ಉದ್ದಗಲದಿ ಸಂಚರಿಸಿ
ಮನ ಮನದಲಿ ನವಚೇತನ ಹರಿಸಿ
’ಹಿಂದು’ ಧಾವಿಸುವ ಮುನ್ನಡೆಗೆ ||ಪ||

ಯುವ ಜನತೆಗೆ ಸನ್ನಡತೆಯ ಕಲಿಸಿ
ಉನ್ನತ ಧ್ಯೇಯದರ್ಶವ ಬೆಳೆಸಿ
ಪ್ರಗತಿಯ ಕಡೆ ನಡೆಯಲು ಸಹಕರಿಸಿ
’ಹಿಂದು’ ಧಾವಿಸುವ ಮುನ್ನಡೆಗೆ ||೧||

ಮತಭೇದಗಳ ದೂರಕೆ ಸರಿಸಿ
ಸರ್ವ ಸಮನ್ವಯ ಭಾವವ ಮೆರೆಸಿ
ದೃಢ ಸಂಕಲ್ಪದಿ ಪ್ರಕೃತಿಯ ಉಳಿಸಿ
’ಹಿಂದು’ ಧಾವಿಸುವ ಮುನ್ನಡೆಗೆ ||೨||

ಕಣಕಣದಲಿ ಕೆಚ್ಚನು ನೆಲೆಯಿರಿಸಿ
ಭಕ್ತಿ, ತ್ಯಾಗ ಸೆಲೆ ಹೃದಯದಿ ಸ್ರವಿಸಿ
ಸಂಸ್ಕೃತಿ ಪುನರುತ್ಥಾನಕೆ ಶ್ರಮಿಸಿ
ರಾಷ್ಟ್ರದ ಬಲ ಸಂವರ್ಧನೆಗೊಳಿಸಿ
’ಹಿಂದು’ ಧಾವಿಸುವ ಮುನ್ನಡೆಗೆ ||೩||

dEvi BAratige anudina namisi
dharma jAgRutiya jyOtiya urisi
dESada uddagaladi saMcarisi
mana manadali navacEtana harisi
'hiMdu' dhAvisuva munnaDege ||pa||

yuva janatege sannaDateya kalisi
unnata dhyEyadarSava beLesi
pragatiya kaDe naDeyalu sahakarisi
'hiMdu' dhAvisuva munnaDege ||1||

mataBEdagaLa dUrake sarisi
sarva samanvaya BAvava meresi
dRuDha saMkalpadi prakRutiya uLisi
'hiMdu' dhAvisuva munnaDege ||2||

kaNakaNadali keccanu neleyirisi
Bakti, tyAga sele hRudayadi sravisi
saMskRuti punarutthAnake Sramisi
rAShTrada bala saMvardhanegoLisi
'hiMdu' dhAvisuva munnaDege ||3||

ಹುಡುಕುವ ಬಳ್ಳಿ ಹರಿದಾಡಿ : huDukuva baLLi


ಹುಡುಕುವ ಬಳ್ಳಿ ಹರಿದಾಡಿ ಬಂದು ಕಾಲ ತೊಡರಿದ್ಹಾಂಗ
ಬಯಸಿದ ಮುಕುಟ ಬೆಳಗಾಗ ಬಂದು ಶಿರವನಡರಿದ್ಹಾಂಗ
ಅಖಂಡ ತಾಯಿಯ ಕನಸು ಕಲ್ಪನೆಯ
ಸಾಕಾರದ ಸುಗ್ಗಿ... ಬಂತೇ ತಾನಾಗಿ ||ಪ||

ಪಂಜಾಬದಿ ನೋಡ, ಮಂಜು ಮುಸುಕಿದ ಮೋಡ
ಪಂಜಾಬದಿ ನೋಡ
ಸಂಜೆಯಿಂದ ಮರುಸಂಜೆಯ ತನಕ ಕೊಲ್ಲತಾರ ಸುದ್ದಿ
ಹಂಚಿಕೆ ಹಾಕಿ ದೇಶವ ಮುರಿಯಲು ಮಾಡತಾರ ಬುದ್ಧಿ
ನಾಡಿಗೆ ತಂದರು ಕೇಡ, ಇದು ಪಾಕಿಯ ಕೈವಾಡ
ಪಾಕಿ ಬರಲವರ ಕುಟ್ಟಿ ನೆತ್ತಿಯಾ ಮೆಟ್ಟಿ, ಗಡಿಯ ಹೊರಗಟ್ಟಿ
ಈ ನಾಡ ಮೇಲೆತ್ತಿ... ನಿಲ್ಲೋಣ ಎದೆ ತಟ್ಟಿ ||೧||

ಕಾಶ್ಮೀರದ ಕತ್ತಿ, ನೆತ್ತಿ ಮ್ಯಾಗ ತೂಗುತ್ತಿ
ಕಾಶ್ಮೀರದ ಕತ್ತಿ
ರಾಷ್ಟ್ರದೊಳಗೆ ಪರರಾಜ್ಯವ ಕಟ್ಟಲು ಹಾಕತಾರ ಹೊಂಚ
ಶಸ್ತ್ರಹಿಡಿದು ಸರಿ ರಾತ್ರಿ ಹಗಲು ಕೊರಿತಾರ ಭೂಮಿಯಂಚ
ಮುಖಂಡ ಜನರಂತಾರ, ಇದು ದ್ರೋಹಿಯ ಹುನ್ನಾರ
ದೇಶದ್ರೋಹಿಗಳ ಹಿಡಿದು, ಸುತ್ತ ಸದೆಬಡಿದು, ಉತ್ತರಕೆ ನಡೆದು
ಈ ನಾಡ ಮೇಲೆತ್ತಿ... ನಿಲ್ಲೋಣ ಎದೆ ತಟ್ಟಿ ||೨||

ಶ್ರೀರಾಮನ ಕಾರ್ಯ ದೇಶದೇಕತೆಯ ಧ್ಯೇಯ
ಶ್ರೀರಾಮನ ಕಾರ್ಯ
ಒಂದುಗೂಡಿ ಮತವಿತ್ತರೆಲ್ಲ, ಹಿಂದುತ್ವನಿಷ್ಠ ಶಕ್ತಿ
ಹಿಂದು ಸಂಘಟಕ ಹಿರಿಯ ಆತ್ಮಕೆ ಆಗಬೇಕು ತೃಪ್ತಿ
ಬಲ್ಲವ ಬಲ್ಲ ಇದನ, ಈ ಸಂಘಕಾರ್ಯ ಹದನ
ಸಂಘದಲ್ಲಿ ಮನವಿಟ್ಟು ಚಿಂತೆಗಳ ಬಿಟ್ಟು ಭುಜಕೆ ಭುಜ ಕೊಟ್ಟು
ಈ ನಾಡ ಮೇಲೆತ್ತಿ... ನಿಲ್ಲೋಣ ಎದೆ ತಟ್ಟಿ ||೩||

huDukuva baLLi haridADi baMdu kAla toDarid~hAMga
bayasida mukuTa beLagAga baMdu SiravanaDarid~hAMga
aKaMDa tAYiya kanasu kalpaneya
sAkArada suggi... baMtE tAnAgi ||pa||

paMjAbadi nODa, maMju musukida mODa
paMjAbadi nODa
saMjeyiMda marusaMjeya tanaka kollatAra suddi
haMcike hAki dESava muriyalu mADatAra buddhi
nADige taMdaru kEDa, idu pAkiya kaivADa
pAki baralavara kuTTi nettiyA meTTi, gaDiya horagaTTi
I nADa mEletti... nillONa ede taTTi ||1||

kASmIrada katti, netti myAga tUgutti
kASmIrada katti
rAShTradoLage pararAjyava kaTTalu hAkatAra hoMca
SastrahiDidu sari rAtri hagalu koritAra BUmiyaMca
muKaMDa janaraMtAra, idu drOhiya hunnAra
dESadrOhigaLa hiDidu, sutta sadebaDidu, uttarake naDedu
I nADa mEletti... nillONa ede taTTi ||2||

SrIraamana kArya dESadEkateya dhyEya
SrIraamana kArya
oMdugUDi matavittarella, hiMdutvaniShTha Sakti
hiMdu saMGaTaka hiriya Atmake AgabEku tRupti
ballava balla idana, I saMGakArya hadana
saMGadalli manaviTTu ciMtegaLa biTTu Bujake Buja koTTu
I nADa mEletti... nillONa ede taTTi ||3||

ದಾಹ ದಾಹ ದಿಗ್ವಿಜಯಕೆ : daaha daaha digvijayake


ದಾಹ ದಾಹ ದಿಗ್ವಿಜಯಕೆ, ಸ್ವಾಭಿಮಾನ ಭರಿತ ಹೃದಯಕೆ
ಸ್ವತಂತ್ರ ಜನತೆಯೆದೆಯ ಬೆಂಕಿ ಆರದೆಂದು ಆರದು
ಮಾತೃಭೂಮಿಗಳಿವು ದಾಸ್ಯ ಬಾರದೆಂದು ಬಾರದು || ಪ ||

ಹಸಿರು ಘಟ್ಟ ಹಿಮದ ಬೆಟ್ಟ ಜಲಧಿ ಗಗನ ನಮ್ಮದು
ದುಷ್ಟತನವ ಮೆಟ್ಟಿ ನಿಲುವ ನ್ಯಾಯ ನಿಷ್ಠೆ ನಮ್ಮದು
ಪ್ರಿಯ ಸ್ವದೇಶ ರಕ್ಷಣಾರ್ಥ ಹೊರಟೆವಿದೋ ಹೊರಟೆವು
ಕಡೆಯ ತನಕ ಗೆಲ್ಲುವನಕ ನಿಲ್ಲೆವೆಲ್ಲು ನೆಲ್ಲೆವು ||೧||

ನೀತಿಯಳಿದು ಸ್ಪರ್ಧೆ ಬೆಳೆದು ಬದುಕು ಸಾವಿನಂಚಲಿ
ಜಗದ ಜೀವ ತಪಿಸುತಿರಲು ಅಸುರ ಸುತರ ಸಂಚಲಿ
ಅಣುವಿನಸ್ತ್ರ ಕ್ಷಿಪಣಿ ಶಸ್ತ್ರವಿರಲು ದಿನವು ಸಿಡಿಯುತ
ದಿಗ್ದಿಗಂತದೆಲ್ಲ ಕಡೆಗೆ ಶೌರ್ಯಕಿಹುದು ಸ್ವಾಗತ ||೨||

ರಾಷ್ಟ್ರಯಜ್ಞದಗ್ನಿಯೊಡನೆ ಬಾಳಸಮಿಧೆ ಬೆರೆಯಲಿ
ಸ್ವಾತಂತ್ರ್ಯ ಪ್ರಣತಿಯುರಿಗೆ ರುಧಿರದಾಜ್ಯವೆರೆಯಲಿ
ಭೂಬುನಾದಿ ತಳದಲಿಂದು ಮೂಳೆ ಮೂಳೆ ಬೀಳಲಿ
ಹೊಸತು ಬಾಳ ನವ ವಿಶಾಲ ನಾಡ ಸೌಧವೇಳಲಿ ||೩||

daaha daaha digvijayake, svAbhimaana bharita hRudayake
svataMtra janateyedeya beMki AradeMdu Aradu
mAtRuBUmigaLivu dAsya bAradeMdu bAradu || pa ||

hasiru GaTTa himada beTTa jaladhi gagana nammadu
duShTatanava meTTi niluva nyAya niShThe nammadu
priya svadESa rakShaNArtha horaTevidO horaTevu
kaDeya tanaka gelluvanaka nillevellu nellevu ||1||

nItiyaLidu spardhe beLedu baduku sAvinaMcali
jagada jIva tapisutiralu asura sutara saMcali
aNuvinastra kShipaNi Sastraviralu dinavu siDiyuta
digdigaMtadella kaDege Souryakihudu svAgata ||2||

rAShTrayaj~jadagniyoDane bALasamidhe bereyali
svAtaMtrya praNatiyurige rudhiradAjyavereyali
BUbunAdi taLadaliMdu mULe mULe bILali
hosatu bALa nava viSAla nADa soudhavELali ||3||

ತರುಣ ಬಲದ ಜಲಧಿ : taruNa balada jaladhi


ತರುಣ ಬಲದ ಜಲಧಿ ಭರದಿ ಭೋರ್ಗರೆದಿದೆ
ಭರತ ಭುವಿಯ ಭಾಗ್ಯದ್ವಾರವಿಂದು ತೆರೆದಿದೆ
ಬಿಂದು ಬಿಂದು ಸಿಂಧುವಾಗಿ ಉಕ್ಕಿ ಮೊರೆದಿದೆ
ಹಿಂದು ಹಿಂದು ಎಂಬ ಘೋಷ ಮುಗಿಲಮುಟ್ಟಿದೆ
ಜೈ ಭಾರತಿ ಜೈ ಭಾರತಿ ಜೈ ಆಅರತಿ ಅಮರ ನಿನ್ನ ಕೀರುತಿ || ಪ ||

ಕಷ್ಟನಷ್ಟವೇನೆ ಬರಲಿ ನಿಷ್ಠೆ ಎಮದು ರಾಷ್ಟ್ರಕೆ
ಭ್ರಷ್ಟರನ್ನು ಬಡಿದು ಅಟ್ಟಿ ದುಷ್ಟರನ್ನು ದೂರಕೆ
ಧೂರ್ತ ಶತ್ರುಗಳನು ಮೆಟ್ಟಿ ಚೆಂಡಾಡುತ ರುಂಡವ
ಗೈವೆವಿಂದು ಸಮರ ಭೂಮಿಯಲ್ಲಿ ರುದ್ರತಾಂಡವ
ಜೈ ಭಾರತಿ ಜೈ ಭಾರತಿ ಜೈ ಭಾರತಿ ಇದೊ ಪ್ರಾಣದಾಹುತಿ ||೧||

ಬರಿದೆ ಶಾಂತಿ ಮಂತ್ರ ಜಪಿಸಿ ಕುಳಿತರೇನು ಸಾರ್ಥಕ?
ವ್ಯಕ್ತಿ ವ್ಯಕ್ತಿಯಾಗಲಿಂದು ರಾಷ್ಟ್ರಭಕ್ತ ಸೈನಿಕ
ಸಂಘರ್ಷದ ಸಮಯದಲ್ಲಿ ಹೇಡಿತನವು ಸಲ್ಲದು
ಸ್ವಾಭಿಮಾನಿ ಯುವಜನಾಂಗ ಸೋಲನೆಂದು ಒಲ್ಲದು
ಜೈ ಭಾರತಿ ಜೈ ಭಾರತಿ ಜೈ ಭಾರತಿ ನಿನಗೆ ಜಯದ ಆರತಿ ||೨||

ಹಿಂದು ಶಕ್ತಿಯಿಂದ ಮುಕ್ತಿ ಜಗದ ಜನರ ಅಳಲಿಗೆ
ಹಿಂದು ತತ್ವದಿಂದ ಮಾತ್ರ ಮನುಜ ಕುಲದ ಏಳಿಗೆ
ನಿದ್ದೆ ತೊರೆದು ಎದ್ದು ಬನ್ನಿ ಕೋಟಿ ಹಿಂದು ತರುಣರೆ
ಬದ್ಧರಾಗಿ ಧ್ಯೇಯಕ್ಕಿಂದು ಸಾಟಿಯಿಲ್ಲದರುಣರೆ
ಜೈ ಭಾರತಿ ಜೈ ಭಾರತಿ ಜೈ ಭಾರತಿ ಈ ಜಗದ ಸಾರಥಿ ||೩||

taruNa balada jaladhi Baradi BOrgaredide
Barata Buviya BAgyadvAraviMdu teredide
biMdu biMdu siMdhuvAgi ukki moredide
hiMdu hiMdu eMba GOSha mugilamuTTide
jai BArati jai BArati jai A^^arati amara ninna kIruti || pa ||

kaShTanaShTavEne barali niShThe emadu rAShTrake
BraShTarannu baDidu aTTi duShTarannu dUrake
dhUrta SatrugaLanu meTTi ceMDADuta ruMDava
gaiveviMdu samara BUmiyalli rudratAMDava
jai BArati jai BArati jai BArati ido prANadAhuti ||1||

baride SAMti maMtra japisi kuLitarEnu sArthaka?
vyakti vyaktiyAgaliMdu rAShTraBakta sainika
saMGarShada samayadalli hEDitanavu salladu
svABimAni yuvajanAMga sOlaneMdu olladu
jai BArati jai BArati jai BArati ninage jayada Arati ||2||

hiMdu SaktiyiMda mukti jagada janara aLalige
hiMdu tatvadiMda mAtra manuja kulada ELige
nidde toredu eddu banni kOTi hiMdu taruNare
baddharAgi dhyEyakkiMdu sATiyilladaruNare
jai BArati jai BArati jai BArati I jagada sArathi ||3||

ಜ್ಞಾನದಾತನೆ ಚಿರಪುನೀತನೆ : j~jAnadAtane cirapunItane


ಜ್ಞಾನದಾತನೆ ಚಿರಪುನೀತನೆ ಧ್ಯೇಯ ದೇವನೆ ವಂದನೆ |
ಜೀವನಕೆ ಸಾರ್ಥಕತೆ ಕರುಣಿಸು ಗುರಿಯ ಸೇರಲು ಸಾಧನೆ ||ಪ||

ಕಾಯದಾ ಗುಡಿಯಲ್ಲಿ ನಿನ್ನಯ ದಿವ್ಯಮೂರ್ತಿಯನಿರಿಸಿದೆ
ತಾಯಿ ಭೂಮಿಯ ಸೇವೆಗೈಯ್ಯುವ ಶಪಥವನು ಸ್ವೀಕರಿಸಿದೆ
ಮಾಯಗೊಳಿಸಿದೆ ಮನದ ಭ್ರಾಂತಿಯ ಭ್ರಮೆಯ ಕಂಗಳ ತೆರೆಸಿದೆ ||೧||

ಕೀರ್ತಿಪಥದಲಿ ಮುಂದೆ ನಡೆಯುವ ಸ್ಪೂರ್ತಿಯನು ನೀ ನೀಡಿದೆ
ಧೂರ್ತ ಜನತೆಯ ದುಷ್ಟತಂತ್ರದ ಸಂಚಿನಿಂ ಕಾಪಾಡಿದೆ
ಪಾರ್ಥಸಾರಥಿಯಂತೆ ನಾಡಿಗೆ ಕರ್ಮಪಥವನು ತೋರಿದೆ ||೨||

ನಿನ್ನ ಆರಾಧನೆಯ ಗೈದ ಅಸಂಖ್ಯ ಸಂತ ಮಹಂತರು
ಹೊನ್ನ ಭೂಮಿಯಿದನ್ನು ಕಟ್ಟಿದ ಸಾಹಸಿಗ ರಣಧೀರರು
ಚೆನ್ನ ಭಾರತದಲ್ಲಿ ಜನಿಸಿದ ಜನರು ಧನ್ಯರು ಧನ್ಯರು ||೩||

j~jAnadAtane cirapunItane dhYEya dEvane vaMdane |
jIvanake sArthakate karuNisu guriya sEralu sAdhane ||pa||

kAyadA guDiyalli ninnaya divyamUrtiyaniriside
tAyi BUmiya sEvegaiyyuva Sapathavanu svIkariside
mAyagoLiside manada BrAMtiya Brameya kaMgaLa tereside ||1||

kIrtipathadali muMde naDeyuva spUrtiyanu nI nIDide
dhUrta janateya duShTataMtrada saMciniM kApADide
pArthasArathiyaMte nADige karmapathavanu tOride ||2||

ninna ArAdhaneya gaida asaMKya saMta mahaMtaru
honna BUmiyidannu kaTTida sAhasiga raNadhIraru
cenna BAratadalli janisida janaru dhanyaru dhanyaru ||3||

ಜ್ವಾಲಮುಖಿಯ ಗರ್ಭದಲಿ : jvAlamuKiya garBadali


ಜ್ವಾಲಮುಖಿಯ ಗರ್ಭದಲಿ | ನಿದ್ರಿಸುತಿಹ ಸುಕುಮಾರ |
ನೀದಾವಾನಲ ರೂಪವ ಧರಿಸಿ | ಪ್ರಕಟಗೊಳ್ಳು ಬಾರಾ ||
ಧೀರಾ ಪ್ರಕಟಗೊಳ್ಳು ಬಾರಾ ||ಪ||

ನಿನ್ನಯ ಶಕ್ತಿಯ ನೀನೇ ಮರೆತೆ | ಸುಖವೈಭೋಗದಿ ನೀ ಮೈಮರೆತೆ ||
ಅರಿಗಳ ಸಂಚಿನ ಸುಳಿಯೊಳು ಸಿಲುಕಿ | ಗೈದ ಕಳಂಕಿತ ನಾಡಿನ ಚರಿತೆ ||೧||

ಸುರನದಿಯನು ಧರೆಗಿಳಿಸಿದ ಧೀರ | ಸಿಂಹವ ಮಣಿಸಿದ ಭರತ ಕುಮಾರ ||
ಛತ್ರಪತಿಯ ನಿಜ ವಾರಸುದಾರ | ನವನಿರ್ಮಾಣಕೆ ನೀನಾಧಾರ ||೨||

ವಿಶ್ವಕೆ ಬೆಳಕನು ನೀಡಿದೆ ಅಂದು | ಕತ್ತಲ ಕೂಪದಿ ಮುಳುಗಿಹೆ ಇಂದು ||
ದೈವತ್ವದ ಆರಾಧಕ ನೀನು | ಅಸುರತ್ವಕೆ ಶಾರಣಾಗದಿರೆಂದು ||೩||

jvAlamuKiya garBadali | nidrisutiha sukumAra |
nIdAvAnala rUpava dharisi | prakaTagoLLu bAraa ||
dhIrA prakaTagoLLu bAraa ||pa||

ninnaya Saktiya nInE marete | suKavaiBOgadi nI maimarete ||
arigaLa saMcina suLiyoLu siluki | gaida kaLaMkita nADina carite ||1||

suranadiyanu dharegiLisida dhIra | siMhava maNisida bharata kumAra ||
Catrapatiya nija vArasudAra | navanirmANake nInAdhaara ||2||

viSvake beLakanu nIDide aMdu | kattala kUpadi muLugihe iMdu ||
daivatvada ArAdhaka nInu | asuratvake SAraNAgadireMdu ||3||

Saturday, July 24, 2010

ಜಯ ಜಯವೆನ್ನಿರಿ ಭಾರತಿಗೆ : jaya jayavenniri


ಜಯ ಜಯವೆನ್ನಿರಿ ಭಾರತಿಗೆ
ಜನಹೃನ್ಮಂದಿರ ದೇವತೆಗೆ ||ಪ||

ಜ್ವಾಲಾಮುಖಿಯೊಳು ಉರಿಗಣ್ ತೆರೆದಿವೆ
ಸುಪ್ತ ಹಿಮಾಚಲ ಶೃಂಗಗಳು
ಕನ್ಯಾಕುಮಾರಿಯ ತಟದಿಂ ಹೊರಟಿವೆ
ಎತ್ತರದೆಡೆಗೆ ರಥಾಂಗಗಳು
ಡಮ ಡಮ ಡಮರು - ನಾದ ಶುಭಂಕರ
ಮಾರ್ದನಿಗೊಳುತಿದೆ ದೆಸೆದೆಸೆಗೆ ||೧||

ಸಾಗರ ಸಂಗಮ ದಾಟಿದ ಜಂಗಮ
ವಿವೇಕ ಬೋಧಿಸೆ ಜಗದಗಲ
ಕಾಲಡಿ ಶಂಕರ ಗೌರಿಶಂಕರ
ಪೂಜೆಗೆ ಒಯ್ದನು ಹೃತ್ಕಮಲ
ಹಿಂದುತ್ವದ ಹೂಂಕಾರ ಶಿವಂಕರ
ಪೌರುಷ ತುಂಬುತೆ ಎದೆ‍ಎದೆಗೆ ||೨||

ರಾಷ್ಟ್ರಚಿರಂತನ ಕೇಶವ ಚಿಂತನ
ಕೋಟಿ ಹೃದಯಗಳ ಅರಳಿಸಿವೆ
ವೈಭವ ಸಿಂಹಾಸನದಲಿ ಮಾತೆಯ
ಕಾಣುವ ಆಸೆಯು ಕೆರಳುಸುತಿವೆ
ವಿಶ್ವ ವಿಜಯ ವಿಶ್ವಾಸ ನಿರಂತರ
ಸಂಘದ ಕಾರ್ಯದ ಜತೆಜತೆಗೆ ||೩||

jaya jayavenniri BAratige
janahRunmaMdira dEvatege ||pa||

jvAlAmuKiyoLu urigaN teredive
supta himAcala SRuMgagaLu
kanyAkumAriya taTadiM horaTive
ettaradeDege rathAMgagaLu
Dama Dama Damaru - nAda SuBaMkara
mArdanigoLutide desedesege ||1||

sAgara saMgama dATida jaMgama
vivEka bOdhise jagadagala
kAlaDi SaMkara gouriSaMkara
pUjege oydanu hRutkamala
hiMdutvada hUMkAra SivaMkara
pouruSha tuMbute ede^edege ||2||

rAShTraciraMtana kESava ciMtana
kOTi hRudayagaLa araLisive
vaiBava siMhAsanadali mAteya
kANuva Aseyu keraLusutive
viSva vijaya viSvAsa niraMtara
saMGada kAryada jatejatege ||3||

ಜಯ ಜಯ ಜಯ ರಘುವೀರ : jaya jaya raGuvIra


ಜಯ ಜಯ ಜಯ ರಘುವೀರ
ಹರ ಹರ ಹರ ಮಹದೇವ ||ಪ||

ಪಡುಗಡಲಿನ ತೆರೆ ದಡಗಳ ಬಡಿದು
ಕರೆಯುದ್ದಕು ಜಯಭೇರಿಯ ಹೊಡೆದು
ಹಾಡುತಲಿರುವುದ ನಾವಾಲಿಸುವಾ
ಎಲ್ಲರ ಕಂಠವ ಜತೆಗೂಡಿಸುವಾ ||೧||

ಗಡಗಳ ನಡುವಿನ ಹೆಗ್ಗಾಡಿನಲಿ
ಮೊರೆಯುವ ಬಿರುಗಾಳಿಯ ಹುಯ್ಲಿನಲಿ
ಕಗ್ಗಲ್ಲಿನ ನೀರವ ಸುಯ್ಲಿನಲಿ
ಏನದು ಕೇಳ್ವದು ವನದಲಿಗಳಲಿ ||೨||

ಶಿವನಶ್ವದ ರಣ ಕುಣಿತದ ಗೀತ
ಸ್ವಾಮಿ ಸಮರ್ಥರ ಸುರ ಸಂಗೀತ
ರಣವಾಸಿಯದೀ ವೀರೋದ್ಘೋಷ
ಸನ್ಯಾಸಿಯ ಒಲವಿನ ಹೃದ್ಘೋಷ ||೩||

ಹಿಂದೂ ಸ್ವಾತಂತ್ರ್ಯದ ಕ್ರಾಂತಿಪದ
ಪರಿಚಯ ನುಡಿ ಜಾಗೃತ ಭಾರತದ
ಭೋರಿಡಲಿ ನಿರಾಶೆಯ ಅಡಗಿಸುತ
ವೈರಿಯ ಎದೆ ಗಡಗಡ ನಡುಗಿಸುತ ||೪||

jaya jaya jaya raGuvIra
hara hara hara mahadEva ||pa||

paDugaDalina tere daDagaLa baDidu
kareyuddaku jayaBEriya hoDedu
hADutaliruvuda nAvAlisuvA
ellara kaMThava jategUDisuvA ||1||

gaDagaLa naDuvina heggADinali
moreyuva birugALiya huylinali
kaggallina nIrava suylinali
Enadu kELvadu vanadaligaLali ||2||

SivanaSvada raNa kuNitada gIta
svAmi samarthara sura saMgIta
raNavAsiyadI vIrOdGOSha
sanyAsiya olavina hRudGOSha ||3||

hiMdU svAtaMtryada krAMtipada
paricaya nuDi jAgRuta BAratada
BOriDali nirASeya aDagisuta
vairiya ede gaDagaDa naDugisuta ||4||

ಜನನೀ ಜನ್ಮಭೂಮಿ : jananI janmaBUmi


ಜನನೀ ಜನ್ಮಭೂಮಿ...
ಭಾರತಿ ನಿನ್ನಯ ಅಡಿಗಳಿಗೆ
ಪೊಡಮಡುವೆ ನಾ ಅಡಿಗಡಿಗೆ
ಜನನೀ ಓ ಜನನೀ, ಜನನೀ ಜನ್ಮಭೂಮಿ ||ಪ||

ಜನ್ಮ ಜನ್ಮದಾ ಪುಣ್ಯದ ಫಲವು ಕರುಣೆಯ ತೋರಿದ ಒಲವಿನ ಬಲವು
ಬಂದಿಹೆ ಧರೆಗೆ ನಿನ್ನೊಡಲೊಳಗೆ ಕೋಟಿ ಕೋಟಿ ಜನ ಸೋದರರೆನಗೆ ||೧||

ಮೇಲೆ ಹಿಮಾಚಲ ಕಾಲಡಿ ಕಡಲು ಬಂಗಾರದ ನಿಧಿ ತುಂಬಿದೆ ಒಡಲು
ಶ್ರೀಗಂಧದ ಸೌಗಂಧವು ತುಂಬ ಏನೆಂಬೆನು ನೀ ಸ್ವರ್ಗದ ಬಿಂಬ ||೨||

ಉಜ್ವಲ ಕಲೆ ಸಂಸ್ಕೃತಿಗಳ ನಾಡು ಕೆಚ್ಚೆದೆ ಕಲಿಗಳ ಸಾಹಸ ಬೀಡು
ಶಂಕರ ಬಸವ ವಿವೇಕರ ನೆಲವು ಪಾವನವು ಸೌಭಾಗ್ಯದ ಫಲವು ||೩||

ಸಾವಿರ ಜನ್ಮವು ಬಂದರೆ ಬರಲಿ ತಾಯೆ ನಿನ್ನಯ ಮಡಿಲೆನಗಿರಲಿ
ನಿನ್ನಲೆ ಜನನ ನಿನ್ನಲೆ ಮರಣ ಎನ್ನಯ ಜೀವನ ನಿನಗೇ ಶರಣ ||೪||

jananI janmaBUmi...
BArati ninnaya aDigaLige
poDamaDuve nA aDigaDige
jananI O jananI, jananI janmaBUmi ||pa||

janma janmadA puNyada Palavu karuNeya tOrida olavina balavu
baMdihe dharege ninnoDaloLage kOTi kOTi jana sOdararenage ||1||

mEle himAcala kAlaDi kaDalu baMgArada nidhi tuMbide oDalu
SrIgaMdhada sougaMdhavu tuMba EneMbenu nI svargada biMba ||2||

ujvala kale saMskRutigaLa nADu keccede kaligaLa sAhasa bIDu
SaMkara basava vivEkara nelavu pAvanavu soubhAgyada phalavu ||3||

saavira janmavu baMdare barali tAye ninnaya maDilenagirali
ninnale janana ninnale maraNa ennaya jIvana ninagE SaraNa ||4||

ತಡವದೇಕೆ ತಾಯ ಕರೆಗೆ : taDavadEke tAya karege


ತಡವದೇಕೆ ತಾಯ ಕರೆಗೆ ಬಾಳೆ ಅವಳ ಕೊಡುಗೆ
ಅಳಿಸಬೇಕು ಅವಳ ನೋವು ತೊಡಿಸಿ ಹರುಷದುಡಿಗೆ || ಪ ||

ಜಾರದಿರಲಿ ಸಮಯವಿನಿತು ಕ್ಷಣಿಕ ನಮ್ಮ ಬದುಕು
ತಾಯಭಕ್ತಿ ಧ್ಯೇಯ ಜ್ಯೋತಿ ಜಗಕೆ ಪ್ರಖರ ಬೆಳಕು
ಹಣದ ಮೋಹ ಕೀರ್ತಿದಾಹ ತರದೆಂದಿಗು ಮೆರಗು
ಋಣವ ಕಳೆವ ಪರಿಯೆ ಸೇವೆ ಅದುವೆ ಬಾಳ ಬೆಳಕು || ೧ ||

ಜನ್ಮದಾತೆ ಚರಣಸೇವೆ ತ್ಯಾಗಕಿಂತ ಮಿಗಿಲು
ಭೇದ ಬಿಟ್ಟು ಮೋದದಿಂದ ದುಡಿದಾಗಲೆ ಹಗಲು
ಧ್ಯೇಯ ಪಥದಿ ನೇರ ಪಯಣ ತೊರೆದು ಆರಿಗಳಂಜಿಕೆ
ಸತ್ಯನಿಷ್ಠೆ ಸ್ವಾಭಿಮಾನದಿಂದ ಸಫಲ ಗಳಿಕೆ || ೨ ||

ಯತ್ನವೆಂದು ವ್ಯರ್ಥವಲ್ಲ ಯಶದ ಹಾದಿ ಗೋಚರ
ಸ್ಪೂರ್ತಿ ಚಿಲುಮೆ ಚಿಮ್ಮುತಿರಲು ಕಾರ್ಯಸಿದ್ಧಿ ಸಾಸಿರ
ನಿಂದೆ ಸ್ತುತಿಗೆ ಕಿವುಡು ಮನವು ಸ್ವಾರ್ಥ ಬರದು ಹತ್ತಿರ
ಭರತಮಾತೆ ನಗುವಿಗಾಗಿ ಬಾಳ್ವಪರಿ ಸುಂದರ || ೩ ||

taDavadEke tAya karege bALe avaLa koDuge
aLisabEku avaLa nOvu toDisi haruShaduDige || pa ||

jAradirali samayavinitu kShaNika namma baduku
tAyaBakti dhYEya jYOti jagake praKara beLaku
haNada mOha kIrtidAha taradeMdigu meragu
RuNava kaLeva pariye sEve aduve bALa beLaku || 1 ||

janadAte caraNasEve tyAgakiMta migilu
BEda biTTu mOdadiMda duDidAgale hagalu
dhYEya pathadi nEra payaNa toredu ArigaLaMjike
satyaniShThe svAbhimAnadiMda saphala gaLike || 2 ||

yatnaveMdu vyarthavalla yaSada hAdi gOcara
spUrti cilume cimmutiralu kArya siddhi sAsira
niMde stutige kivuDu manavu svArtha baradu hattira
BaratamAte naguvigAgi bALva pari suMdara || 3 ||

ಸೇವೆಯ ಸೇತುವೆ ಕಟ್ಟಲು ಬನ್ನಿ : sEveya sEtuve kaTTalu


ಸೇವೆಯ ಸೇತುವೆ ಕಟ್ಟಲು ಬನ್ನಿ
ವ್ಯಕ್ತಿ ಸಮಾಜದ ನಡುವೆ || ಪ ||

ಸೇವೆಯೆ ತತ್ವದ ಸಾರವು ನಿಜದಿ ಸೇವೆಯೆ ಜೀವನ ಧರ್ಮ
ಸ್ವಾರ್ಥ ದುರಾಸೆಯ ನೀಗಿಸಿ ಬಾಳನು ಸಾರ್ಥಕಗೊಳಿಸುವ ಮರ್ಮ
ಕಂಗೆಡಿಸುವ ಕಗ್ಗತ್ತಲ ಕೂಪದಿ ಸೇವೆಯೆ ದಾರಿ ದೀಪ
ದುಃಖಿತ ಜನಗಳ ಕಂಬನಿ ಒರೆಸುವ ಕರುಣೆಯ ಮಾತೃ ಸ್ವರೂಪ || ೧ ||

ಅಕ್ಷರ ವಿದ್ಯೆಯ ಕಲಿಸಿ ನಿರಕ್ಷರ ಕುಕ್ಷಿಗಳಿಗೆ ಒಲವಿಂದ
ಅಕ್ಷಯ ರಕ್ಷಣೆ ನೀಡುತ ಶೋಷಿತ ಜನತೆಗೆ ಛಲಬಲದಿಂದ
ಕಾರ್ಪಣ್ಯದ ಘಟಸರ್ಪದ ದರ್ಪವ ಮುರಿಯಲು ಸೇವೆಯ ಮಾರ್ಗ
ತ್ಯಾಗ ಸಮರ್ಪಣ ಭಾವದಿ ದುಡಿದರೆ ಧರೆಯಿದು ಆಗದೆ ಸ್ವರ್ಗ || ೨ ||

ಮನೆಮನೆಯಾಗಲಿ ಸೇವಧಾಮ ಚಿರವಾತ್ಯಲದ ಸೆಲೆಯು
ನೋವಲಿ ನರಳಿಹ ಹತಭಾಗ್ಯರಿಗೆ ನಲಿವನು ನೀಡುವ ನೆಲೆಯು
ಅಸ್ಪೃಶ್ಯತೆ ಅನ್ಯಾಯವನಳಿಸಲು ಗೈಯ್ಯುವ ದೃಢ ಸಂಕಲ್ಪ
ಭಾರತ ಮಾತೆಯ ಆರಾಧನೆಗೆ ಅರ್ಪಿಸಿ ಜೀವನ ಪುಷ್ಪ || ೩ ||

sEveya sEtuve kaTTalu banni
vyakti samAjada naDuve || pa ||

sEveye tatvada sAravu nijadi sEveye jIvana dharma
svArtha durAseya nIgisi bALanu sArthakagoLisuva marma
kaMgeDisuva kaggattala kUpadi sEveye dAri dIpa
duHKita janagaLa kaMbani oresuva karuNeya mAtRu svarUpa || 1 ||

akShara vidyeya kalisi nirakShara kukShigaLige olaviMda
akShaya rakShaNe nIDuta SOShita janatege ChalabaladiMda
kArpaNyada GaTasarpada darpava muriyalu sEveya mArga
tyAga samarpaNa bhAvadi duDidare dhareyidu Agade svarga || 2 ||

manemaneyAgali sEvadhaama ciravAtyalada seleyu
nOvali naraLiha hatabhAgyarige nalivanu nIDuva neleyu
aspRushyate anyAyavanaLisalu gaiyyuva dRuDha saMkalpa
BArata mAteya Araadhanege arpisi jIvana puShpa || 3 ||

निर्वाण षटकम् : ನಿರ್ವಾಣ ಶತಕಮ್ : nirvana shatakam


ಮನೋ ಬುಧ್ಯಹಂಕಾರ ಚಿತ್ತಾ ನಿ ನಾಹಮ್ | ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣ ನೇತ್ರೇ
ನ ಚ ವ್ಯೋಮ ಭೂಮಿರ್ ನ ತೇಜೊ ನ ವಾಯುಃ | ಚಿದಾನಂದ ರೂಪಃ ಶಿವೋಹಮ್ ಶಿವೋಹಮ್ ||೧||

ನ ಚ ಪ್ರಾಣ ಸಂಜ್ಞೋ ನ ವೈ ಪಂಚ ವಾಯುಃ ನ ವಾ ಸಪ್ತ ಧಾತುರ್ ನ ವಾ ಪಂಚ ಕೋಶ
ನ ವಾಕ್ ಪಾಣಿ ಪಾದೌ ನಾ ಚೋಪಸ್ಥ ಪಾಯು | ಚಿದಾನಂದ ರೂಪಃ ಶಿವೋಹಮ್ ಶಿವೋಹಮ್ ||೨||

ನ ಮೇ ದ್ವೇಷ ರಾಗೌ ನ ಮೇ ಲೋಭ ಮೋಹೌ | ಮದೋ ನೈವ ಮೇ ನೈವ ಮಾತ್ಸರ್ಯ ಭಾವಃ
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ | ಚಿದಾನಂದ ರೂಪಃ ಶಿವೋಹಮ್ ಶಿವೋಹಮ್ ||೩||

ನ ಪುಣ್ಯನ್ ನ ಪಾಪನ್ ನ ಸೌಖ್ಯನ್ ನ ದುಃಖಮ್ | ನ ಮಂತ್ರೋ ನ ತೀರ್ಥಮ್ ನ ವೇದಾ ನ ಯಜ್ಞಾಃ
ಅಹಂ ಭೋಜನನ್ ನೈವ ಭೋಜ್ಯನ್ ನ ಭೋಕ್ತಾ | ಚಿದಾನಂದ ರೂಪಃ ಶಿವೋಹಮ್ ಶಿವೋಹಮ್ ||೪||

ನ ಮೃತ್ಯುರ್ ನ ಶಂಕಾ ನ ಮೇ ಜಾತಿ ಭೇದಃ | ಪಿತಾ ನೈವ ಮೇ ನೈವ ಮಾತಾ ನ ಜನ್ಮ
ನ ಬಂಧುರ್ ನ ಮಿತ್ರಮ್ ಗುರುರ್ ನೈವ ಶಿಷ್ಯಃ | ಚಿದಾನಂದ ರೂಪಃ ಶಿವೋಹಮ್ ಶಿವೋಹಮ್ ||೫||

ಅಹಮ್ ನಿರ್ವಿಕಲ್ಪೋ ನಿರಾಕಾರ ರೂಪೋ
ವಿಭುತ್ವಾಚ್ಛ ಸರ್ವತ್ರ ಸರ್ವೇಂದ್ರಿಯಾಣಾಮ್
ನ ಚಾ ಸಂಗತನ್ ನೈವ ಮುಕ್ತಿರ್ ನ ಮೇಯಃ
ಚಿದಾನಂದ ರೂಪಃ ಶಿವೋಹಮ್ ಶಿವೋಹಮ್ ||೬||

मनो बुद्ध्यहंकारचित्तानि नाहम् न च श्रोत्र जिह्वे न च घ्राण नेत्रे
न च व्योम भूमिर् न तेजो न वायु: चिदानन्द रूप: शिवोऽहम् शिवोऽहम् ॥

न च प्राण संज्ञो न वै पञ्चवायु: न वा सप्तधातुर् न वा पञ्चकोश:
न वाक्पाणिपादौ न चोपस्थपायू चिदानन्द रूप: शिवोऽहम् शिवोऽहम् ॥

न मे द्वेष रागौ न मे लोभ मोहौ मदो नैव मे नैव मात्सर्य भाव:
न धर्मो न चार्थो न कामो ना मोक्ष: चिदानन्द रूप: शिवोऽहम् शिवोऽहम् ॥

न पुण्यं न पापं न सौख्यं न दु:खम् न मन्त्रो न तीर्थं न वेदा: न यज्ञा:
अहं भोजनं नैव भोज्यं न भोक्ता चिदानन्द रूप: शिवोऽहम् शिवोऽहम् ॥

न मृत्युर् न शंका न मे जातिभेद: पिता नैव मे नैव माता न जन्म
न बन्धुर् न मित्रं गुरुर्नैव शिष्य: चिदानन्द रूप: शिवोऽहम् शिवोऽहम् ॥

अहं निर्विकल्पो निराकार रूपो विभुत्वाच्च सर्वत्र सर्वेन्द्रियाणाम्
न चासंगतं नैव मुक्तिर् न मेय: चिदानन्द रूप: शिवोऽहम् शिवॊऽहम् ॥

mano buddhyahaMkAracittAni nAham na ca Srotra jihve na ca GrANa netre
na ca vyoma BUmir na tejo na vAyu: cidAnanda rUpa: Sivo&ham Sivo&ham ||

na ca prANa saMj~jo na vai pa~jcavAyu: na vA saptadhAtur na vA pa~jcakoSa:
na vAkpANipAdau na copasthapAyU cidAnanda rUpa: Sivo&ham Sivo&ham ||

na me dveSha rAgau na me loBa mohau mado naiva me naiva mAtsarya BAva:
na dharmo na cArtho na kAmo nA mokSha: cidAnanda rUpa: Sivo&ham Sivo&ham ||

na puNyaM na pApaM na sauKyaM na du:Kam na mantro na tIrthaM na vedA: na yaj~jA:
ahaM BojanaM naiva BojyaM na BoktA cidAnanda rUpa: Sivo&ham Sivo&ham ||

na mRutyur na SaMkA na me jAtiBeda: pitA naiva me naiva mAtA na janma
na bandhur na mitraM gururnaiva SiShya: cidAnanda rUpa: Sivo&ham Sivo&ham ||

ahaM nirvikalpo nirAkAra rUpo viButvAcca sarvatra sarvendriyANAm
na cAsaMgataM naiva muktir na meya: cidAnanda rUpa: Sivo&ham Sivo&ham ||