ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Sunday, September 12, 2010
ಶಕ್ತಿ ಪರಾಕ್ರಮ ಆವಾಹನೆಗೆ : Sakti parAkrama AvAhanege
ಶಕ್ತಿ ಪರಾಕ್ರಮ ಆವಾಹನೆಗೆ, ಕಂಕಣ ಧರಿಸಿ ಸಾಧಕರೆ
ಹಿಂದುತ್ವದ ಆರಾಧಕರೆ ||ಪ||
ಚಂಡಮುಂಡರಾ ದಂಡನು ದಂಡಿಸಿ
ರುಂಡವ ಖಂಡಿಸಿ ಚೆಂಡಾಡಿ
ದುಷ್ಟರ ದಮನಿಸಿ ಕಷ್ಟಕೆ ಸಿಲುಕಿಹ
ಶಿಷ್ಟ ಶಕ್ತಿಯನು ಕಾಪಾಡಿ ||೧||
ಕಂಟಕವಳಿಸಿ ಸಂಕಟ ನೀಗಲು
ಟೊಂಕವ ಕಟ್ಟುವ ಸಮಯವಿದು
ಜಡತೆಯ ಜಯಿಸಿ ಸ್ವಾರ್ಥವ ದಹಿಸಿ
ಮುನ್ನಡೆಯುವ ಸುಮಹೂರ್ತವಿದು ||೨||
ಬಹುರಾಷ್ಟ್ರೀಯರ ಸಂಚಿನ ಸುಳಿಯಲಿ
ನಾಡೆಮದು ಮುಳುಗದೆ ಇರಲಿ
ಸ್ವತ್ವ ಸ್ವದೇಶೀ ಸ್ವಾವಲಂಬನೆಯ
ದಿವ್ಯಮಂತ್ರ ಮೊಳಗುತಲಿರಲಿ ||೩||
Sakti parAkrama AvAhanege, kaMkaNa dharisi sAdhakare
hiMdutvada ArAdhakare ||pa||
caMDamuMDarA daMDanu daMDisi
ruMDava KaMDisi ceMDADi
duShTara damanisi kaShTake silukiha
SiShTa Saktiyanu kApADi ||1||
kaMTakavaLisi saMkaTa nIgalu
ToMkava kaTTuva samayavidu
jaDateya jayisi svArthava dahisi
munnaDeyuva sumahUrtavidu ||2||
bahurAShTrIyara saMcina suLiyali
nADemadu muLugade irali
svatva svadESI svAvalaMbaneya
divyamaMtra moLagutalirali ||3||
Subscribe to:
Post Comments (Atom)
No comments:
Post a Comment