Saturday, September 18, 2010

ಸಿಂಹನೊಡನಾಡುತ್ತ : siMhanoDanADutta


ಸಿಂಹನೊಡನಾಡುತ್ತ ಹಲ್ಲುಗಳನೆಣಿಸಿದವ
ಹಾಲ್ಗಲ್ಲ ಹಸುಳೆ ಇವ ನಮ್ಮ ಭಾರತ
ಬಲ್ಲೆಯಾ ಕಿರಾತ ಅವನ ಛಲಬಲಭರಿತ
ಒಂದೊಂದು ಜೀವವೂ ಭರತ ಸಹಜಾತ ||ಪ||

ಹೊಯ್ ಎನಲು ಹುಲಿ ಹೊಯ್ದ ಸಳ ನಮ್ಮ ನಾಯಕ
ಅರಿಯೆಯಾ ಮಂದಮತಿ ಖಳನಾಯಕ
ತಾತ್ವಿಕರ ಸಾತ್ವಿಕರ ದಳ ನಮ್ಮದಾಗಿರಲು
ಸಲ್ಲದಿರು ಸ್ನೇಹದಲಿ ತುಡುಕಾಯಾಕ ||೧||

ಹೂ ಹಸಿರು ಎಲೆ ಚಿಗುರು ಹೊದರು ಹೊಮ್ಮುವ ವನದಿ
ಒಂದು ವಿಷ ಜಂತುವಿಗೆ ಹೆಸರೇನನಿಡಲಿ?
ಯಾವ ಶಾಪದ ರೂಪವಿಂದು ಕುಣಿದೆದ್ದಿಹುದು
ನಮ್ಮದೊಂದೊಂದುಗುರು ಪರಶುರಾಮನ ಕೊಡಲಿ
ಪರಶುರಾಮನ ಕೊಡಲಿ ||೨||

siMhanoDanADutta hallugaLaneNisidava
hAlgalla hasuLe iva namma BArata
balleyA kirAta avana CalabalaBarita
oMdoMdu jIvavU Barata sahajAta ||pa||

hoy enalu huli hoyda saLa namma nAyaka
ariyeyA maMdamati KaLanAyaka
tAtvikara sAtvikara daLa nammadAgiralu
salladiru snEhadali tuDukAyAka ||1||

hU hasiru ele ciguru hodaru hommuva vanadi
oMdu viSha jaMtuvige hesarEnaniDali?
yAva SApada rUpaviMdu kuNideddihudu
nammadoMdoMduguru paraSurAmana koDali
paraSurAmana koDali ||2||

No comments: