Sunday, September 26, 2010

ಸುರನದಿಯನು ಧರೆಗಿಳಿಸಿದ : suranadiyanu dharegiLisida


ಸುರನದಿಯನು ಧರೆಗಿಳಿಸಿದ ಧೀರನ ವಾರಸುದಾರರು ನಾವು
ಸೋಲನೆ ಗೆಲುವಿನ ಸಾಧನಗೊಳಿಸುವ ಸಾಹಸಗಾರರು ನಾವು
ಭಾರತವೀರರು ನಾವು... ನವಭಾರತ ವೀರರು ನಾವು ||ಪ||

ಅಡಿಗಡಿಗೆದುರಾಗಿಹ ಅಡೆತಡೆಗಳ
ಅಡಿಯಿಂದಲೆ ಕಿತ್ತೆಸೆಯುವೆವು |
ನಾಡಿನ ಗಡಿಗೌರವ ರಕ್ಷಣೆಗೆ
ಪ್ರಾಣವನೇ ಮುಡಿಪಿರಿಸುವೆವು ||೧||

ಸ್ವಂತದ ಚಿಂತನೆಗಳನು ಬದಿಗಿರಿಸಿ
ರಾಷ್ಟ್ರದ ಚಿಂತನೆ ಮಾಡುವೆವು |
ಕಠಿಣ ಸವಾಲುಗಳನು ಸ್ವೀಕರಿಸಿ
ದೇಶದ ಹಿತ ಕಾಪಾಡುವೆವು ||೨||

ನಮ್ಮಯ ಜನರೇ ಸುಮ್ಮನೆ ನಿಂದಿಸಿ
ಹುಸಿ ಅಪವಾದವ ಹೊರಿಸಿರಲು |
ಅಗ್ನಿಪರೀಕ್ಷೆಗೆ ಒಳಗಾಗಿಹೆವು
ಮಿಥ್ಯೆಗಳಿಂದಲಿ ಹೊರಬರಲು ||೩||

ಕೇಶವ ಕಂಡಿಹ ಕನಸುಗಳೆಲ್ಲವ
ಶೀಘ್ರದಲಿ ನನಸಾಗಿಸಲು |
ಮುನ್ನಡೆವೆವು ಕ್ಷಣಮಾತ್ರವು ನಿಲ್ಲದೆ
ಪರಮವೈಭವವ ಸಾಧಿಸಲು ||೪||

suranadiyanu dharegiLisida dhIrana vArasudAraru nAvu
sOlane geluvina sAdhanagoLisuva sAhasagAraru nAvu
BAratavIraru nAvu... navaBArata vIraru nAvu ||pa||

aDigaDigedurAgiha aDetaDegaLa
aDiyiMdale kitteseyuvevu |
nADina gaDigourava rakShaNege
prANavanE muDipirisuvevu ||1||

svaMtada ciMtanegaLanu badigirisi
rAShTrada ciMtane mADuvevu |
kaThiNa savAlugaLanu svIkarisi
dESada hita kApADuvevu ||2||

nammaya janarE summane niMdisi
husi apavAdava horisiralu |
agniparIkShege oLagAgihevu
mithyegaLiMdali horabaralu ||3||

kESava kaMDiha kanasugaLellava
SIGradali nanasAgisalu |
munnaDevevu kShaNamAtravu nillade
paramavaiBavava sAdhisalu ||4||

No comments: