Sunday, September 12, 2010

ವಿಶ್ವ ವಂದ್ಯೆ ಜಗಜ್ಜನನಿ : viSva vaMdye jagajjanani


ವಿಶ್ವ ವಂದ್ಯೆ ಜಗಜ್ಜನನಿ ನಮನ ತಾಯಿ ಭಾರತಿ
ದಿವ್ಯ ಪ್ರಭೆಯ ಜ್ಞಾನ ಸುಧೆಯ ಚಿರನವೀನ ಸಾರಥಿ ||ಪ||

ರಜತಗಿರಿಯ ಮುಕುಟದಲ್ಲಿ ತೋರಿತಿಹುದು ನಿನ್ನ ಸೊಬಗು
ಪಾದಕಮಲ ತೊಳೆಯುತಿರುವ ಜಲಧಿಗುಂಟು ದಿವ್ಯಮೆರುಗು
ತುಂಬಿ ತೊನೆವ ಪೈರು ಪಚ್ಚೆ ಹಸಿರುಡುಗೆಯ ಚೆಲ್ವ ಬೆಡಗು
ಗಂಗೆ ತುಂಗೆ ಸಿಂಧು ಕಪಿಲೆ ಸುರನದಿಗಳ ತುಂಬು ಬಳುಕು ||೧||

ಚೆಲುವಿನ ಖನಿ ಮಾತೆಗಂತೆ ಸ್ವಾಭಿಮಾನಿ ಪುತ್ರರು
ಬಂಧ ಮುಕ್ತಿಗಾಗಿ ತಮ್ಮ ಉಸಿರುಸಿರನು ಕೊಟ್ಟರು
ಅಪಮಾನವ ಸಹಿಸದಂಥ ಅಭಿಮಾನಿ ವೀರರು
ನಿನ್ನ ಮಂದಹಾಸದಲ್ಲಿ ಧನ್ಯತೆಯನು ಕಂಡರು ||೨||

ನಿನ್ನ ಒಡಲ ಮಕ್ಕಳಾಗೆ ಎಂಥ ಭಾಗ್ಯ ತಾಯೆ ನಮಗೆ
ವೇದದ ನೆಲೆ ಗೀತೆಯ ಸೆಲೆ ನವಚೇತನ ಬಾಳಿಗೆ
ಶತ್ರುಗಳನು ಗೆದ್ದ ಚರಿತೆ ಬೇಕು ನಮ್ಮ ಸ್ಫೂರ್ತಿಗೆ
ನಿನ್ನ ರೋಮ ಕೊಂಕದಿರಲು ಸಿದ್ಧರಿಹೆವು ಬಲಿಗೆ ||೩||

viSva vaMdye jagajjanani namana tAyi BArati
divya praBeya j~jAna sudheya ciranavIna sArathi ||pa||

rajatagiriya mukuTadalli tOritihudu ninna sobagu
pAdakamala toLeyutiruva jaladhiguMTu divyamerugu
tuMbi toneva pairu pacce hasiruDugeya celva beDagu
gaMge tuMge siMdhu kapile suranadigaLa tuMbu baLuku ||1||

celuvina Kani mAtegaMte svABimAni putraru
baMdha muktigAgi tamma usirusiranu koTTaru
apamAnava sahisadaMtha aBimAni vIraru
ninna maMdahAsadalli dhanyateyanu kaMDaru ||2||

ninna oDala makkaLAge eMtha BAgya tAye namage
vEdada nele gIteya sele navacEtana bALige
SatrugaLanu gedda carite bEku namma sphUrtige
ninna rOma koMkadiralu siddharihevu balige ||3||

No comments: