Sunday, September 26, 2010

ಹಿಂದುಸ್ತಾನದ ಚಿರ ನವ ಹರಯವೆ : hiMdustAnada cira nava


ಹಿಂದುಸ್ತಾನದ ಚಿರ ನವ ಹರಯವೆ, ಹೇ ಹೈಮಾಚಲ ಸಂದರ್ಶನವೆ
ಇದೋ ಉದ್ಭವಿಸಿದೆ ಪ್ರಾಣಪ್ರವಾಹವು, ಯುವಜನ
ಜಾಹ್ನವಿ ಸಿಂಧೂಬಲವು ||ಪ||

ರಣಮತ್ತರ ಬಿಸಿನೆತ್ತರ ಬಾಹುವೆ, ಓ ನಾಡಿನ ಯೌವನ ಸಿಡಿದೇಳು
ರಾಷ್ಟ್ರದ ನೇತ್ರ ತೃತೀಯ ಸ್ವರೂಪವೆ, ತಾರುಣ್ಯವೇ ಉರಿಗಣ್ ತೆರೆ ಏಳು ||೧||

ದೃಢ ನಿಶ್ಚಯದೊಳು ಹೃತ್ಪರ್ವತಗಳು, ಕೋಟ್ಯಂತರ ನಿಂತಿರೆ ರಾಷ್ಟ್ರದಲಿ
ದುರ್ಗಮ ದುರ್ಗಗಳೆಚ್ಚರಗೊಳುತಿವೆ, ಅರಿಗೆಂದಿಗು ದೊರೆಯದು ಜಯವಿಲ್ಲಿ ||೨||

ಕಿಡಿ ಹಾರಿದೆ ಸಿಡಿಮದ್ದಿನ ನಿದ್ದೆಗೆ, ಧುಮಧುಮ ಧುಮಗುಡುತಿದೆ ಧುರಭೇರಿ
ಜನಜನರೆದೆಯೊಳು ಧಗಧಗ ಧಗಿಸಿದೆ, ಭೀಷಣ ರಣಬೆಂಕಿಯು ಓ ವೈರಿ ||೩||

ಮೃತ್ಯುಂಜಯ ಜನ ಹೃದಯ ಹಿಮಾಲಯ, ಮೈ ತಾಳಿದೆ ಇದು ಪ್ರದೀಪ್ತ ವಲಯ
ಹೃನ್ಮಹಿಮಾಲಯ ಅರಿಯ ಯಮಾಲಯ, ಬೆಳೆಬೆಳೆದಿದೆ ಇದು ಸುಷುಪ್ತ ಪ್ರಲಯ ||೪||

hiMdustAnada cira nava harayave, hE haimAcala saMdarSanave
idO udBaviside prANapravAhavu, yuvajana
jAhnavi siMdhUbalavu ||pa||

raNamattara bisinettara bAhuve, O nADina youvana siDidELu
rAShTrada nEtra tRutIya svarUpave, tAruNyavE urigaN tere ELu ||1||

dRuDha niScayadoLu hRutparvatagaLu, kOTyaMtara niMtire rAShTradali
durgama durgagaLeccaragoLutive, arigeMdigu doreyadu jayavilli ||2||

kiDi hAride siDimaddina niddege, dhumadhuma dhumaguDutide dhuraBEri
janajanaredeyoLu dhagadhaga dhagiside, BIShaNa raNabeMkiyu O vairi ||3||

mRutyuMjaya jana hRudaya himAlaya, mai tALide idu pradIpta valaya
hRunmahimAlaya ariya yamAlaya, beLebeLedide idu suShupta pralaya ||4||

No comments: