ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Sunday, September 12, 2010
ಸಾಸಿರ ಪದಯುಗ ಸಾಸಿರನೇತ್ರ ; sAsira padayuga sAsiranEtra
ಸಾಸಿರ ಪದಯುಗ ಸಾಸಿರನೇತ್ರ ಸಾಸಿರ ಸಾಸಿರ ಶೀರ್ಷಾ
ಸಾಕ್ಷಾತ್ಕರಿಸಿದೆ ಅಭಂಗ ಏಕತೆ ಸಮರಸತೆಯ ಸಂದೇಶ
ವ್ಯಾಪಿಸಿ ವಿಶ್ವದ ತಲೆ ಎತ್ತಿಹ ಹೇ ಅಸೀಮ ಸಮಾಜ ಪುರುಷ ||ಪ||
ಎಲ್ಲಿದೆ ತರತಮ ಜಾತಿನೀತಿ ಕುಲ ಎಲ್ಲಿದೆ ಎಲ್ಲಿದೆ ಭಿನ್ನಮತ
ಹಿಂದುತ್ವದಿ ನಿಜ ಬಾಂಧವರೆನಿಸಲು ಇಲ್ಲಿದೆ ಇಲ್ಲಿದೆ ಕರ್ಮಪಥ ||೧||
ಸೃಷ್ಟಿಗೆ ಗೋಚರ ನವ ಮನ್ವಂತರ ಸೃಷ್ಟಿ
ಸಿದ್ದಿಯ ಮಾರ್ಗಕೆ ಉದಯಿಸಿತೋ ಶಿವಶಕ್ತಿ
ಸಕಲ ಜೀವಕುಲ ಸುಖವ ಕಾಣಲಿದೆ
ಪ್ರಕೃತಿಗೆ ಮರು ವಿಶ್ವಾಸ ||೨||
ಆರ್ಷ ಪರಂಪರೆ ವೀರ ವಾರಸಿಕೆ ಕಲೆತು
ಬ್ರಹ್ಮ ತೇಜವಿದು ಕ್ಷಾತ್ರ ಕಾರ್ಯದೊಳು ಬೆರೆತು
ಸಂಘರ್ಷವಾಗಲಿ ಶಾಂತಿಯೆ ಆಗಲಿ
ಸಕ್ಷಮ ಹಿಂದು ವಿಕಾಸ ||೩||
ವಿಕೃತಿಯಳಿಸಿ ಸಂಸ್ಕೃತಿಯ ಬೆಳೆವ ಸಂರಚನೆ
ಕೃತಿಗಿಳಿದಿದೆ ಸತ್‍ಕೃತಿಯಾಗಿದೆ ಸಂಘಟನೆ
ಲೋಕಶಕ್ತಿ ನೀ ವಿಜಯಶಾಲಿನಿ
ವಿಶ್ವಮಂಗಲೋದ್ದೇಶ ||೪||
sAsira padayuga sAsiranEtra sAsira sAsira SIrShA
sAkShAtkariside aBaMga Ekate samarasateya saMdESa
vyApisi viSvada tale ettiha hE asIma samAja puruSha ||pa||
ellide taratama jAtinIti kula ellide ellide Binnamata
hiMdutvadi nija bAMdhavarenisalu illide illide karmapatha ||1||
sRuShTige gOcara nava manvaMtara sRuShTi
siddiya mArgake udayisitO SivaSakti
sakala jIvakula suKava kANalide
prakRutige maru viSvAsa ||2||
ArSha paraMpare vIra vArasike kaletu
brahma tEjavidu kShAtra kAryadoLu beretu
saMGarShavAgali SaaMtiye Agali
sakShama hiMdu vikAsa ||3||
vikRutiyaLisi saMskRutiya beLeva saMracane
kRutigiLidide sat^kRutiyAgide saMGaTane
lOkaSakti nI vijayaSAlini
viSvamaMgalOddESa ||4||
Subscribe to:
Post Comments (Atom)
No comments:
Post a Comment