ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Sunday, September 12, 2010
ವಿಶ್ವಸಂತತಿ ಎಲ್ಲ ನಿನ್ನ : viSvasaMtati ella ninna
ವಿಶ್ವಸಂತತಿ ಎಲ್ಲ ನಿನ್ನ ಪುಣ್ಯೋದರದ
ಹಸುಗೂಸುಗಳು ಎಂದು ಹಾಲುಣಿಸಿದೆ
ಒಂದೇ ತೊಟ್ಟಿಲೊಳಿಟ್ಟು ತೂಗಿ ಶೋಭನವಾಗಿ
ಪ್ರೇಮ ಸಂಗೀತದೊಳು ಮೈಮರೆಸಿದೆ ||ಪ||
ಸೂರ್ಯಚಂದ್ರರಿಗೆಲ್ಲ ಪ್ರಭೆಯನಿತು ಇರಲಿಲ್ಲ
ನಿನ್ನ ಕೀರ್ತಿಯ ಜ್ಯೋತಿ ಪ್ರಜ್ವಲಿಸಿತು
ಮೇಘಮಂಡಲವೇರಿ ವಿಜಯ ವೀರಧ್ವಜವು
ಸ್ವಾತಂತ್ರ್ಯ ಸಂಭ್ರಮದಿ ಸಂಚರಿಸಿತು ||೧||
ಅಪಮಾನಗಳನಿಂತು ಶತಮಾನ ಸಹಿಸಿರಲು
ಶಕ್ತಿ ಭೈರವಿ ಜನನಿ ತಾಳ್ಮೆಯುಂಟೆ?
ಕ್ಷಮೆಯ ಮೀರದೆ ನೋವು ಶಕ್ತಿಪುತ್ರರು ನಾವು
ಹರಸಿಬಿಡು ತೆರಳುವೆವು ತಡೆವರುಂಟೆ? ||೨||
ಒಮ್ಮತದ ಏಕಪಂಥವ ಹಿಡಿದು ಸಾಗುವೆವು
ಕ್ಷಮಿಸಮ್ಮ ಸೋದರರು ಬಡಿದಾಡೆವು
ಹೊಸ ಜಗದ ನಿರ್ಮಾಣದೀ ಸಂಧಿಕಾಲದಲಿ
ನಿನ್ನ ಘನತೆಗೆ ಕೊರತೆಯಾಗಬಿಡೆವು ||೩||
ಹಸಿರುಡಿಗೆ ಪಸೆದುಟ್ಟು ಸಿರಿಮುಡಿಗೆ ಹೂತೊಟ್ಟು
ಭುವನೇಶ್ವರಿಯೇ, ನೀನು ಮೆರೆಯಬೇಕು
ಶುಭದಿನದ ಹೊಸಬೆಳಕ ಆನಂದ ಶೋಭೆಯಲಿ
ನಿನ್ನ ಶ್ರೀಮುಖ ಒಮ್ಮೆ ನೋಡಬೇಕು ||೪||
viSvasaMtati ella ninna puNyOdarada
hasugUsugaLu eMdu hAluNiside
oMdE toTTiloLiTTu tUgi SOBanavAgi
prEma saMgItadoLu maimareside ||pa||
sUryacaMdrarigella praBeyanitu iralilla
ninna kIrtiya jyOti prajvalisitu
mEGamaMDalavEri vijaya vIradhvajavu
svAtaMtrya saMBramadi saMcarisitu ||1||
apamAnagaLaniMtu SatamAna sahisiralu
Sakti Bairavi janani tALmeyuMTe?
kShameya mIrade nOvu Saktiputraru nAvu
harasibiDu teraLuvevu taDevaruMTe? ||2||
ommatada EkapaMthava hiDidu sAguvevu
kShamisamma sOdararu baDidADevu
hosa jagada nirmANadI saMdhikAladali
ninna Ganatege korateyAgabiDevu ||3||
hasiruDige paseduTTu sirimuDige hUtoTTu
BuvanESvariyE, nInu mereyabEku
SuBadinada hosabeLaka AnaMda SOBeyali
ninna SrImuKa omme nODabEku ||4||
Subscribe to:
Post Comments (Atom)
No comments:
Post a Comment