Monday, August 30, 2010

ವಾದಗಳ ಸೆರೆ ಬಿಡಿಸಿ : vAdagaLa sere biDisi


ವಾದಗಳ ಸೆರೆ ಬಿಡಿಸಿ, ಭೇಧಗಳ ತೆರೆ ಸರಿಸಿ
ತೆರೆದುಬಿಡು ಹೃದಯದ್ವಾರ, ಬರಲಿ ಬಿಡು ಕದಿರ ನೇರ ||ಪ||

ಹಳ್ಳಿಹಳ್ಳಿಯ ಬದಿಯ, ಹಳ್ಳಕೊಳ್ಳವೆ ಯಮುನೆ
ಜೀವನದಿಯಾದಾಳು, ಭಾವಜಲವೆರೆದಾಗ
ದನಗಾಹಿ ಬಾಲಕರು, ರಾಷ್ಟ್ರರಥ ಚಾಲಕರು
ಆದಾರು ಬೆಳೆದಾರು ಧ್ಯೇಯಜಲವೆರೆದಾಗ ||೧||

ತರುಣಗಣ ತಲೆ ಎತ್ತಿ ನಿಂತಾಗ ತೋಳೆತ್ತಿ
ಬೆಟ್ಟಬೆಟ್ಟವನೆತ್ತಿ ಸಹ್ಯಾದ್ರಿ ಮೈ ಎತ್ತಿ
ಇರುಳಕೋಟೆಯು ಕರಗಿ ಮೂಡುವನು ವಿಜಯರವಿ
ಹಾಡುವನು ಜಯಗಾನ ಚಿರವಿಹಾರಿ ಸಮೀರ ||೨||

ಮೈಮರೆತ ಮಾನವರ ಮಣ್ಣುಗೊಂಬೆಯ ಹಿಡಿದು
ನಾಡಿನಾಡಿಯ ಮಿಡಿದು ಜೀವರಾಗವ ತುಡಿದು
ಅಸುರಬಲ ಸದೆಬಡಿದು, ಶುಭ ನವೋದಯ ಗಳಿಸೆ
ಶಾಲಿವಾಹನರೆಲ್ಲ ನಿಲಬೇಕು ಸಾಕಾರ ||೩||

vAdagaLa sere biDisi, BEdhagaLa tere sarisi
teredubiDu hRudayadvAra, barali biDu kadira nEra ||pa||

haLLihaLLiya badiya, haLLakoLLave yamune
jIvanadiyAdaaLu, BAvajalaveredAga
danagAhi bAlakaru, rAShTraratha cAlakaru
AdAru beLedAru dhyEyajalaveredAga ||1||

taruNagaNa tale etti niMtAga tOLetti
beTTabeTTavanetti sahyAdri mai etti
iruLakOTeyu karagi mUDuvanu vijayaravi
hADuvanu jayagAna ciravihAri samIra ||2||

maimareta mAnavara maNNugoMbeya hiDidu
nADinADiya miDidu jIvaraagava tuDidu
asurabala sadebaDidu, SuBa navOdaya gaLise
SAlivAhanarella nilabEku sAkAra ||3||

No comments: