Saturday, August 28, 2010

ಭಾರತದ ಆಗಸದಿ : BAratada Agasadi


ಭಾರತದ ಆಗಸದಿ ನವಸೂರ್ಯೋದಯವಾಗುತಿದೆ
ಶತಶತಮಾನದ ದೈನ್ಯವನಳಿಸುತ ನವ ಜೀವನ ಪ್ರಭೆ ಮೂಡುತಿದೆ ||ಪ||

ರೂಢಿಯ ಜಡತೆಯ ಬಂಧನ ಕಳಚುತ
ನವೋತ್ಸಾಹ ನವ ಸ್ಫೂರ್ತಿಯನೆರೆಯುತ
ಮಸಣದ ಶೂನ್ಯದಿ ಸಾಸಿರ ಸುಮಗಳ
ನವ ನಂದನ ಸಜ್ಜಾಗುತಿದೆ ||೧||

ತ್ಯಾಗ ತಪೋಮಯ ಋಷಿ ಮುನಿ ಜೀವನ
ಸಾಹಸ ಚೈತ್ರದ ಕ್ಷಾತ್ರೋತ್‍ಸ್ಫುರಣ
ಶೀಲನ ಶೌರ್ಯದ ಆರಾಧನೆಯಲಿ
ನಾಡಿಯ ತನ್ಮಯವಾಗುತಿದೆ ||೨||

ಬಿಂದುವು ಸಿಂಧುತ್ವಕೆ ತಾನೆಳೆಸಲು
ಕಳೆಯದೆ ಹಿಂದುತ್ವದ ಬಿರಿಯಳಲು
ಬಾನ್‍ಧರೆ ಬೆಸೆಯುವ ಮಹದಾಕಾಂಕ್ಷೆಯ
ಸಂಘ ಶಕ್ತಿ ಮೈ ತಾಳುತಿದೆ ||೩||

BAratada Agasadi navasUryOdayavAgutide
SataSatamAnada dainyavanaLisuta nava jIvana praBe mUDutide ||pa||

rUDhiya jaDateya baMdhana kaLacuta
navOtsAha nava sphUrtiyanereyuta
masaNada SUnyadi sAsira sumagaLa
nava naMdana sajjAgutide ||1||

tyAga tapOmaya RuShi muni jIvana
sAhasa caitrada kShAtrOt^sphuraNa
SIlana Souryada ArAdhaneyali
nADiya tanmayavAgutide ||2||

biMduvu siMdhutvake tAneLesalu
kaLeyade hiMdutvada biriyaLalu
bAn^dhare beseyuva mahadAkAMkSheya
saMGa Sakti mai tALutide ||3||

No comments: