Tuesday, August 17, 2010

ನವ ಭಾರತ ನವ ಯುವಕನೆ : nava BArata nava yuvakane


ನವ ಭಾರತ ನವ ಯುವಕನೆ ನವೋದಯದ ಹರಿಕಾರನೆ
ನಾಡ ನಾಡಿಯನ್ನೇ ಮಿಡಿವ ನವ-ನೂತನ ಚೇತನವೆ ||ಪ||

ಹಿಮಾಚಲದ ತುಂಗಶೃಂಗ ನಿನ್ನ ಉತ್ತಮಾಂಗ
ಧವಳ ವರ್ಣ ದಯಾಪೂರ್ಣ ನಿನ್ನ ಅಂತರಂಗ
ರತ್ತಧುನೀ ಧಮನಿ ಧಮನಿ ನದಿ ನದಂಗಳೆಲ್ಲ
ತದತ್ತರಂಗವಾಗಿ ಹರಿವ ತೇಜದೊಡಲು ನಿನ್ನದು ||೧||

ದ್ರೋಹ ದರ್ಪ ದೌರ್ಜನ್ಯಕೆ ಎತ್ತು ಕೊಡಲಿ ಇಂದೇ
ತುಂಡಾದರೂ ಮೊಂಡಾದರೂ ಭರತಖಂಡ ನಿನ್ನದೇ
ದಿಕ್ತಟದಲಿ ಪಟಪಟಿಸಲಿ ಭವ್ಯನಾಡ ಬಾವುಟ
ಶಾಂತಿ ಸಾಕು ಕ್ರಾಂತಿ ಬೇಕು ತೋರೋ ಮನದ ಆರ್ಭಟ ||೨||

ಮೈಯನೊದರು ಮುಡಿಯ ಕೆದರು ಕಣ್ಣುಕೆಂಡವಾಗಲಿ
ನಚ್ಚ ತುಂಬು ಮನದ ತುಂಬ ಕೆಚ್ಚು ನಿನ್ನದಾಗಲಿ
’ನಾನು ಭಾರತೀಯ’ ನೆಂಬ ತಾರಕದಾ ಮಂತ್ರ
ಘೋಷಿಸುತ್ತೆ ಮುಂದೆ ಸಾಗೊ ಧನ್ಯವೀ ಸ್ವತಂತ್ರ ||೩||

nava BArata nava yuvakane navOdayada harikArane
nADa nADiyannE miDiva nava-nUtana cEtanave ||pa||

himAcalada tuMgaSRuMga ninna uttamAMga
dhavaLa varNa dayApUrNa ninna aMtaraMga
rattadhunI dhamani dhamani nadi nadaMgaLella
tadattaraMgavAgi hariva tEjadoDalu ninnadu ||1||

drOha darpa dourjanyake ettu koDali iMdE
tuMDAdarU moMDAdarU bharataKaMDa ninnadE
diktaTadali paTapaTisali BavyanADa bAvuTa
SAMti sAku krAMti bEku tOrO manada ArBaTa ||2||

maiyanodaru muDiya kedaru kaNNukeMDavAgali
nacca tuMbu manada tuMba keccu ninnadAgali
'nAnu BAratIya' neMba tArakadA maMtra
GOShisutte muMde sAgo dhanyavI svataMtra ||3||

No comments: