Thursday, August 19, 2010

ಬಿಂದುವು ಮೊರೆಯಿತು ಸಾಗರವಾಗಿ : iMduvu moreyitu


ಬಿಂದುವು ಮೊರೆಯಿತು ಸಾಗರವಾಗಿ
ಸಸಿಯು ಬೆಳೆಯಿತು ಹೆಮ್ಮರವಾಗಿ
ಹಿಂದುವು ನಿಂದಿಹನು ಮೈಕೊಡವಿ
ಅಕ್ಷಯ ಶಕ್ತಿಯ ಆಗರವಾಗಿ
ಇದುವೇ ಸಂಘದ ಸಾಧನೆಯು... ನನಸಾಯಿತು ಬರಿ ಕಲ್ಪನೆಯು ||ಪ||

ಕಳೆಯಿತು ಸೋಲಿನ ಕತ್ತಲ ಕಾಲ
ಹರಿಯಿತು ಸಾಸಿರ ಸಂಚಿನ ಜಾಲ
ಸಾಗದು ಇನ್ನು ಶತ್ರುಗಳಾಟ
ದಿಶೆತಪ್ಪಿದ ಉಗ್ರರ ಚೆಲ್ಲಾಟ... ಇದುವೇ... ||೧||

ಭ್ರಮೆ ಕೀಳರಿಮೆಗೆ ಅಂತ್ಯವ ಸಾರಿ
ಹಿಂದುತ್ವದ ಹೊಂಗಿರಣವ ಬೀರಿ
ಮುನ್ನಡೆದಿದೆ ಯುವವೀರರ ಪಡೆಯು
ಬಳಿಸಾರಿದೆ ಘನವಿಜಯದ ಗುರಿಯು... ಇದುವೇ... ||೨||

ಅವಮಾನದ ಅವಶೇಷವನಳಿಸಿ
ಅಭಿಮಾನದ ನವಸ್ಫೂರ್ತಿಯ ಬೆಳೆಸಿ
ಮೂಡಿಹುದೆಲ್ಲೆಡೆ ಜನಜಾಗೃತಿಯು
ಯುಗಯುಗಗಳ ಕನಸಿಗೆ ಆಕೃತಿಯು... ಇದುವೇ... ||೩||

iMduvu moreyitu sAgaravAgi
sasiyu beLeyitu hemmaravAgi
hiMduvu niMdihanu maikoDavi
akShaya Saktiya AgaravAgi
iduvE saMGada sAdhaneyu... nanasAyitu bari kalpaneyu ||pa||

kaLeyitu sOlina kattala kAla
hariyitu sAsira saMcina jAla
sAgadu innu SatrugaLATa
diSetappida ugrara cellATa... iduvE... ||1||

Brame kILarimege aMtyava sAri
hiMdutvada hoMgiraNava bIri
munnaDedide yuvavIrara paDeyu
baLisAride Ganavijayada guriyu... iduvE... ||2||

avamAnada avaSEShavanaLisi
aBimAnada navasphUrtiya beLesi
mUDihudelleDe janajAgRutiyu
yugayugagaLa kanasige AkRutiyu... iduvE... ||3||

No comments: