ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Thursday, August 19, 2010
ಭರತ ದೇಶ ಭಾಗ್ಯ ಕೋಶ : Barata dESa BAgya kOSa
ಭರತ ದೇಶ ಭಾಗ್ಯ ಕೋಶ ನಮ್ಮ ಜನರ ಸಂಪದ
ಕೋಟಿ ಕೋಟಿ ಹೃದಯ ತೀರ್ಥ ಬೃಂದಾರಕ ಶಿವಪಥ ||ಪ||
ಹೈಮಾಚಲದುನ್ನತಿಯಲಿ ಆಧ್ಯಾತ್ಮದ ತೇಜದಲ್ಲಿ
ಸಗ್ಗಸಿರಿಯ ಸುರಿವಳಿಲ್ಲಿ ಆತ್ಮರತೀ ವನಮಾಲಿ ||೧||
ಸಹಾಧ್ಯಯನ ಸಹಭೋಜನ ಸಹ ಪೌರುಷ ಸಹ ತೋಷ
ವಿಶ್ವಮೈತ್ರಿ ಗಾಯತ್ರಿಯ ಪಠಿಸಿದಂತ ಧೀರಯುತ ||೨||
ಭವ್ಯಭೂಮಿ ಭಾರತ ಮಿಗಿಲೆನಗಿದು ಜಗಕಿಂತ
ಈ ಮಣ್ಣಿನ ಕಣಕಣವೂ ನನ್ನ ದೇಹ ನಿಶ್ಚಿತ ||೩||
ಜನ್ಮ ಭೂಮಿ, ಜನನಿ ದೇವಿ ಮಣಿವೆನಿದೋ ಸಂತತ
ನಿತ್ಯೆ ಸತ್ಯೆ ವಿಶ್ವವಂದ್ಯೆ ನಮೋ ತಾಯಿ ಭಾರತ ||೪||
Barata dESa BAgya kOSa namma janara saMpada
kOTi kOTi hRudaya tIrtha bRuMdAraka Sivapatha ||pa||
haimAcaladunnatiyali AdhyAtmada tEjadalli
saggasiriya surivaLilli AtmaratI vanamAli ||1||
sahAdhyayana sahaBOjana saha pouruSha saha tOSha
viSvamaitri gAyatriya paThisidaMta dhIrayuta ||2||
BavyaBUmi BArata migilenagidu jagakiMta
I maNNina kaNakaNavU nanna dEha niScita ||3||
janma BUmi, janani dEvi maNivenidO saMtata
nitye satye viSvavaMdye namO tAyi BArata ||4||
Subscribe to:
Post Comments (Atom)
No comments:
Post a Comment