Sunday, August 29, 2010

ಯುವಜನಾಂಗ ಹೋ ಹೋ : yuvajanAMga hO hO


ಯುವಜನಾಂಗ ಹೋ ಹೋ ಯುವಜನಾಂಗ ಹೋ
ಯುವಜನಾಂಗವೇಳುತಿಹುದು ರಣದ ಭೇರಿ ಕಹಳೆಗೆ
ಯಶೋಗಾನ ಕೇಳುತಿಹುದು ಸ್ಫೂರ್ತಿ ಎರೆದು ಬಾಳಿಗೆ ||ಪ||

ಹಚ್ಚಿ ಉರಿ ಪರಾನುಕರಣೆ ಹೀನ ತತ್ವ ಭ್ರಾಂತಿಗೆ
ಧ್ಯೇಯ ಹಿಡಿದು ದಾರಿ ನಡೆದು ತುಷ್ಟಿಪುಷ್ಟಿ ಶಾಂತಿಗೆ ||೧||

ಸ್ಮರಣೆಯರಳಿ ಕೆರಳುತಿಹುದು ದಗ್ಧ ಚಿತೆಯ ಚೇತನ
ಮಥಿಸುತಿಹುದು ಕಥಿಸುತಿಹುದು ನೆನಪು ಚಿರ ಪುರಾತನ ||೨||

ಬಾರಿ ಬಾರಿ ನಡೆಯಲಿಹುದು ವೈರಿ ಕುಲದ ಮರ್ದನ
ದೈವ ಬಲದ ಕೈಗೆ ಜಯವು ಸತ್ಯನಿತ್ಯನೂತನ ||೩||

ವರವಿಶಾಲ ಭರತಭುವಿಗೆ ವಿಜಯಪರ್ವ ಬರುತಿದೆ
ನವನವೀನ ಶೌರ್ಯವರಳಿ ಜ್ಯೋತಿ ಬೆಳಕ ತರುತಿದೆ ||೪||

yuvajanAMga hO hO yuvajanAMga hO
yuvajanAMgavELutihudu raNada BEri kahaLege
yaSOgAna kELutihudu sphUrti eredu bALige ||pa||

hacci uri parAnukaraNe hIna tatva BrAMtige
dhyEya hiDidu dAri naDedu tuShTipuShTi SAMtige ||1||

smaraNeyaraLi keraLutihudu dagdha citeya cEtana
mathisutihudu kathisutihudu nenapu cira purAtana ||2||

bAri bAri naDeyalihudu vairi kulada mardana
daiva balada kaige jayavu satyanityanUtana ||3||

varaviSAla BarataBuvige vijayaparva barutide
navanavIna SouryavaraLi jyOti beLaka tarutide ||4||

No comments: