Tuesday, August 17, 2010

ಧ್ಯೇಯ ಜನಿಸಿತು ದೇಹ ಧರಿಸಿ : dhyEya janisitu


ಧ್ಯೇಯ ಜನಿಸಿತು ದೇಹ ಧರಿಸಿ
ಸಂಪರ್ಕದಮೃತವನೆಮಗೆ ಕುಡಿಸಿ, ನಿತ್ಯಶಕ್ತಿಯ ಮಂತ್ರ ನೀಡಲು
ಧ್ಯೇಯ ಜನಿಸಿತು ದೇಹ ಧರಿಸಿ ||ಪ||

ಶೂನ್ಯ ಪಥದೊಳು ಸಾಗುತಿರಲು ನಾಡಿನೆಲ್ಲಡೆ ತರುಣ ಜನತೆ
ಶೂನ್ಯದಲೆ ಲಯವಾಗುತಿರಲು ರಾಷ್ಟ್ರಜೀವನದಖಿಲ ಚರಿತೆ
ಬೆಳಕು ಹೊಮ್ಮಿತು ಪ್ರಭೆಯ ಚಿಮ್ಮಿತು, ಧರ್ಮ ಸಾರಿತು ಭರದಿ ದ್ರವಿಸಿ ||೧||

ವಿಷಮ ಭಾವದೊಳೈಕ್ಯ ಸಾಧನ ಸೂತ್ರಗಳು ತುಂಡಾಗುತಿರಲು
ದಿವ್ಯತರ ಚಿರ ರಾಷ್ಟ್ರಜೀವನ ಸತ್ವ ಲಯವಾಗಳಿಯುತಿರಲು
ಸಂಸ್ಕೃತಿಯ ನವ ಸ್ನೇಹವುದಿಸಿತು, ಧರ್ಮ ಸಾರಿತು ಕರುಣೆಯಿರಿಸಿ ||೨||

ಸೋತು ಪರಕೀಯತೆಯ ಸುಳಿಯಲಿ ಮುಳುಗಿಹೋಗಿರೆ ದೇಶವೆಮದು
ಆತ್ಮವಿಸ್ಮೃತಿ ಕವಿದು ಘೂರ್ಮಿಸಿ, ಶಕ್ತಿಗುಂದಿರೆ ನಾಡು ಕುಸಿದು
ಶ್ರದ್ಧೆ ಭರವಸೆ ಎದ್ದಿತಾ ಕ್ಷಣ, ದೇಹ ಜನಿಸಿತು ಧ್ಯೇಯ ಧರಿಸಿ ||೩||

dhyEya janisitu dEha dharisi
saMparkadamRutavanemage kuDisi, nityaSaktiya maMtra nIDalu
dhyEya janisitu dEha dharisi ||pa||

SUnya pathadoLu sAgutiralu nADinellaDe taruNa janate
SUnyadale layavAgutiralu rAShTrajIvanadaKila carite
beLaku hommitu praBeya cimmitu, dharma sAritu Baradi dravisi ||1||

viShama BAvadoLaikya sAdhana sUtragaLu tuMDaagutiralu
divyatara cira rAShTrajIvana satva layavAgaLiyutiralu
saMskRutiya nava snEhavudisitu, dharma sAritu karuNeyirisi ||2||

sOtu parakIyateya suLiyali muLugihOgire dESavemadu
AtmavismRuti kavidu GUrmisi, SaktiguMdire nADu kusidu
Sraddhe Baravase edditA kShaNa, dEha janisitu dhyEya dharisi ||3||

No comments: