ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Sunday, August 29, 2010
ಮಥಿಸಿ ಮೈದಳೆಯುತಿದೆ : mathisi maidaLeyutide
ಮಥಿಸಿ ಮೈದಳೆಯುತಿದೆ ಹಿಂದುತ್ವದಮೃತ
ಗತಿಸಿದೆ ವಿದ್ವೇಷ ಹಾಲಹಲ ವಿಷ ||ಪ||
ವೇದಗಳ ದರುಶನವ ಲೋಕದೆದುರಲಿ ತೆರೆದು
ಬದುಕಿನುನ್ನತ ಗತಿಯ ಔದಾರ್ತ ಮೆರೆದು
ನೆಲೆಗೊಳಿಸಿ ನೀತಿಗಳ ನಿರ್ಮಿಸಿದೆ ಧರ್ಮಪಥ
ಕಾಲದ ಸವಾಲುಗಳ ಎದುರಿಸಿದೆ ಸತತ ||೧||
ಜನಮನವ ಸಂಸ್ಕೃರಿಸಿ ತರತಮದ ಕೆಡುಕಳಿಸಿ
ಬಲದುಪಾಸನೆ ಕಲಿಸಿ ಬಲಿದು ಸಂಘಟಿಸಿ
ಶ್ರೇಷ್ಠ ಸದ್ಗುಣ ಸುಮಗರಳುತಿವೆ ಅನವರತ
ರಾಷ್ಟ್ರ ಸ್ವೀಕರಿಸಿದೆ ಸಂಘ ಸಿದ್ಧಾಂತ ||೨||
ಧರ್ಮ ಸಂಸ್ಥಾಪನೆಗೆ ಬನ್ನಿರೆಲ್ಲರೂ ಕೂಡಿ
ದುರ್ಮತಿಗೆ ದುರ್ಜನಕೆ ರಣವೀಳ್ಯ ನೀಡಿ
ಗೆಲುವೆ ಗುರಿಯಾಗಿಹುದು ಸೋಲಿಲ್ಲವೆನ್ನುತ
ಛಲದಿ ನಿಜಗೊಳಿಸೋಣ ವಿಜಗೀಷು ಚರಿತ ||೩||
mathisi maidaLeyutide hiMdutvadamRuta
gatiside vidvESha hAlahala viSha ||pa||
vEdagaLa daruSanava lOkadedurali teredu
badukinunnata gatiya audArta meredu
nelegoLisi nItigaLa nirmiside dharmapatha
kAlada savAlugaLa eduriside satata ||1||
janamanava saMskRurisi taratamada keDukaLisi
baladupAsane kalisi balidu saMGaTisi
SrEShTha sadguNa sumagaraLutive anavarata
rAShTra svIkariside saMGa siddhAMta ||2||
dharma saMsthApanege bannirellarU kUDi
durmatige durjanake raNavILya nIDi
geluve guriyAgihudu sOlillavennuta
Caladi nijagoLisONa vijagIShu carita ||3||
Subscribe to:
Post Comments (Atom)
No comments:
Post a Comment