Sunday, August 29, 2010

ಭಾರತವೆಮ್ಮಯ ಮಾತೃಭೂಮಿ : BAratavemmaya mAtRuBUmi


ಭಾರತವೆಮ್ಮಯ ಮಾತೃಭೂಮಿ |
ಪುಣ್ಯಭೂಮಿ ವೀರಭೂಮಿ ||ಪ||

ಎತ್ತರ ಹಿಮಗಿರಿ ಮೆರೆಯುವ ಭೂಮಿ
ಸುತ್ತಲು ಸಾಗರ ಮೊರೆಯುವ ಭೂಮಿ
ಸಾಸಿರ ನದಿಗಳು ಹರಿಯುವ ಭೂಮಿ
ಹಸಿರಿನ ಉಡುಗೆಯ ಧರಿಸಿಹ ಭೂಮಿ ||೧||

ರಾಮಕೃಷ್ಣರು ಜನಿಸಿದ ಭೂಮಿ
ಚತುರ್ವೇದಿಗಳು ಧ್ವನಿಸಿದ ಭೂಮಿ
ಸಾಧಕರಿಗೆ ಪಥದರ್ಶಕ ಭೂಮಿ
ಸಾಹಸಿಗಳ ಸಮರಾಂಗಣ ಭೂಮಿ ||೨||

ಭಾಷೆವೇಷಗಳ ವೈವಧ್ಯತೆಯು
ದ್ವೇಷವನಳಿಸುವ ಭಾವೈಕ್ಯತೆಯು
ಸರ್ವ ಸಮಾನತೆ ನಮ್ಮಯ ರೀತಿ
ಏಕತೆ ಎಮ್ಮಯ ಬಾಳಿನ ನೀತಿ ||೩||

BAratavemmaya mAtRuBUmi |
puNyaBUmi vIraBUmi ||pa||

ettara himagiri mereyuva BUmi
suttalu sAgara moreyuva BUmi
sAsira nadigaLu hariyuva BUmi
hasirina uDugeya dharisiha BUmi ||1||

rAmakRuShNaru janisida BUmi
caturvEdigaLu dhvanisida BUmi
sAdhakarige pathadarSaka BUmi
sAhasigaLa samarAMgaNa BUmi ||2||

BAShevEShagaLa vaivadhyateyu
dvEShavanaLisuva BAvaikyateyu
sarva samAnate nammaya rIti
Ekate emmaya bALina nIti ||3||

No comments: