Sunday, August 29, 2010

ಮೈ ಮರೆತಭಿಮಾನವು : mai maretaBimAnavu


ಮೈ ಮರೆತಭಿಮಾನವು ಮೈ ಕೊಡಹುತ ಮೇಲೇಳುತಿದೆ
ಮರುತನ ಸ್ವರದಲಿ ನವ ರಾಗೋದಯದುಲಿ ಕೇಳುತಿದೆ ||ಪ||

ಅಳಲಿನ ನಿಶೆ ಅಳಿಯಿತು ಅಳುತಳುತೆ, ಮೊಳಗಿತಿದೋ ಮುಂಜಾವಿನ ಗೀತೆ
ಜೀವನಕುಸುಮಗಳರಳಿರೆ ನಗುತೆ, ರುಧಿರಾರ್ಚನೆಗಿನ್ನಾವುದು ಕೊರತೆ?
ಇತಿಹಾಸದ ಕಥೆ, ಉಪಹಾಸದ ವ್ಯಥೆ ಮೈತಾಳುತಿದೆ ||೧||

ಹಾರಿದ ಭರವಸೆಗಳ ಖಗಕುಲವು, ಹೃದಯದ ಗೂಡಿಗೆ ಮರಳುತಲಿಹುದು
ಬಾಳಡಿಯಲಿ ಸಾಯುತಲಿರೆ ಸಾವು ಬಗೆ ಬೆದರದು ಬಳಿ ಸುಳಿಯದು ನೋವು
ಕರ್ಬೊಗೆ ಗಾಳಿಗೆ ಕರಗುವ ಬಗೆ ಹಗೆ ಹಿಂದೋಡುತಿದೆ ||೨||

ಪ್ರಗತಿ ಪರಾಗತಿಗಳ ಏರಿಳಿದು, ಶತಮಾನಗಳೆನಿತೆನಿತನೊ ಕಳೆದು
ಮೈಮೆರೆಸುವ ಪೀಡಕರನು ತುಳಿದು, ನಿಂದುದು ನಾಡಿದು ಹೊಸ ಮೈತಳೆದು
ಪುನರಪಿ ಪುನರುತ್ಥಾನವ ಪಡೆಯಲು ಹೋರಾಡುತಿದೆ ||೩||

ಕೈಜಾರಿದ ಕೈಲಾಸದ ಕರೆಗೆ, ಮರುದನಿ ಕನ್ಯಾಕುವರಿಯವರೆಗೆ
ಕಳೆದಗಲುತಲಿಹ ಭರತನ ಭುವಿಗೆ, ಅಭಯವಿದೊ ಅರಿಯುರುಳಲಿ ಧರೆಗೆ
ಚಿರಜೀವಿಯ ಹೃದಯದಿ ಚಿರವಿಜಯದ ಹೂಂಕಾರವಿದೆ ||೪||

mai maretaBimAnavu mai koDahuta mElELutide
marutana svaradali nava rAgOdayaduli kELutide ||pa||

aLalina niSe aLiyitu aLutaLute, moLagitidO muMjAvina gIte
jIvanakusumagaLaraLire nagute, rudhirArcaneginnAvudu korate?
itihAsada kathe, upahAsada vyathe maitALutide ||1||

hArida BaravasegaLa Kagakulavu, hRudayada gUDige maraLutalihudu
bALaDiyali sAyutalire sAvu bage bedaradu baLi suLiyadu nOvu
karboge gALige karaguva bage hage hiMdODutide ||2||

pragati paraagatigaLa EriLidu, SatamAnagaLenitenitano kaLedu
maimeresuva pIDakaranu tuLidu, niMdudu nADidu hosa maitaLedu
punarapi punarutthAnava paDeyalu hOrADutide ||3||

kaijArida kailaasada karege, marudani kanyAkuvariyavarege
kaLedagalutaliha Baratana Buvige, aBayavido ariyuruLali dharege
cirajIviya hRudayadi ciravijayada hUMkAravide ||4||

No comments: