Thursday, August 19, 2010

ಭಗವೆಯ ನಾವ್ ಗಗನದಲಿ : Bagaveya nAv gaganadali


ಭಗವೆಯ ನಾವ್ ಗಗನದಲಿ
ಹಾರಿಸುವಾ ಹಿರಿಮೆಯಿಂದ ಮೆರೆಯಿಸುವಾ ಬಲುಮೆಯಿಂದ ||ಪ||

ಮೇಲೆ ಮೇಲೆ ಗಗನದಲಿ ಹೊಳೆವ ನೀಲ ಮೇಘದಲಿ
ಪಟಪಟನೇ ಪುಟಿಸುತಲಿ ನಲಿಯಿಸುವಾ ಕಲಿತನದಿ ||೧||

ಹಿರಿತನದ ಹಿರಿಮೆಯಿಂದ ಯೌವನದ ಹೆಮ್ಮೆಯಿಂದ
ಬಾಲತನದ ಲೀಲೆಯಿಂದ ಪೂಜಿಸುವಾ ಪ್ರತಿದಿನದಿ ||೨||

ಭಾರತದ ಐಸಿರಿಯ ವೀರತೆಯ ಜಯ ಸಿರಿಯ
ಕೇಶವನ ಮನಸಿರಿಯ ಮೆರೆಯಿಸುವಾ ಅವಿರತದಿ ||೩||

Bagaveya nAv gaganadali
hArisuvA hirimeyiMda mereyisuvA balumeyiMda ||pa||

mEle mEle gaganadali hoLeva nIla mEGadali
paTapaTanE puTisutali naliyisuvA kalitanadi ||1||

hiritanada hirimeyiMda youvanada hemmeyiMda
bAlatanada lIleyiMda pUjisuvA pratidinadi ||2||

BAratada aisiriya vIrateya jaya siriya
kESavana manasiriya mereyisuvA aviratadi ||3||

No comments: