ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Sunday, August 29, 2010
ಮಾತೆಪೂಜಕ ನಾನು : maatepUjaka nAnu
ಮಾತೆಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ
ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೆ ಆಸೆಯು ಮನದಲಿ ||ಪ||
ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ
ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ
ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ
ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ ||೧||
ನಗುತ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ
ನಿನ್ನ ದುಃಖಿತ ವದನವೀಕ್ಷಿಸೆ ಸಿಡಿವುದೆನ್ನಯ ಹೃದಯವು
ನಿನ್ನ ಮುಖದಲಿ ಗೆಲವು ತರಲು ನೀರುಗೈಯುವೆ ರಕ್ತವ
ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನಶಕ್ತಿಯ ||೨||
ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ
ಎನ್ನ ಶಕ್ತಿಯ ಘೃತವ ಸತತವು ಎರೆಯುತಿರುವೆನು ಭರದಲಿ
ಮಾತೃಮಂದಿರ ಬೆಳಗುತಿರಲಿ ನಾನೇ ನಂದಾ ದೀವಿಗೆ
ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ ||೩||
ರುದ್ರನಾಗಿ ವಿರೋಧಿ ವಿಷವನು ಭರದಿ ನಾನದ ನುಂಗುವೆ
ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ
ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ
ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವಾ ||೪||
maatepUjaka nAnu ennaya SiravaniDuvenu aDiyali
ninna kIrtiyu jagadi mereyali oMde Aseyu manadali ||pa||
eDaru toDarugaLella tuLiyuta muMde nugguve Baradali
ninna nAma ninAdavAgali Sramipe nA prati kShaNadali
ninna gouravakeduru baruva balava murivenu Caladali
jagada janani BArata ida kELi naliyuve manadali ||1||
naguta naliyuva ninna vadanava nODi nalivudu ennede
ninna duHKita vadanavIkShise siDivudennaya hRudayavu
ninna muKadali gelavu taralu nIrugaiyuve raktava
enna kaNakaNa tEdu basiyuve pUrNa jIvanaSaktiya ||2||
ninna tEjava jagavu nODali urive dIpada teradali
enna Saktiya GRutava satatavu ereyutiruvenu Baradali
mAtRumaMdira beLagutirali nAnE naMdA dIvige
batti teradI dEha uriyali sArthakate I bALige ||3||
rudranAgi virOdhi viShavanu Baradi nAnada nuMguve
jagava meccisi adara hRudayava ninneDege nA seLeyuve
sRujipe jagadali ninna pUjipa kOTi kOTi Baktara
kIrti SiKaradi mAte maMDisu arpisuve nA sarvavA ||4||
Subscribe to:
Post Comments (Atom)
No comments:
Post a Comment