Tuesday, August 17, 2010

ಬನ್ನಿ ಹಿಂದು ವೀರರೇ : banni hiMdu vIrarE


ಬನ್ನಿ ಹಿಂದು ವೀರರೇ ಮುಂದೆ ಸಾಗುವಾ
ವೀರಮಾತೆ ಪುತ್ರರೆಂದು ಧೀರ ಸಂತಾನರೆಂದು
ಧರೆಯೊಳಿಂದು ಸಾರುವಾ ಮುಂದೆ ಸಾಗುವಾ ||ಪ||

ತಾಯ ಸೇವೆಗಾಗಿ ಬನ್ನಿ ಧ್ಯೇಯಕ್ಕಾಗಿ ದುಡಿವ ಬನ್ನಿ
ನಿದ್ದೆ ತೊರೆಯುವಾ, ಎದ್ದು ನಿಲ್ಲುವಾ, ಸಿದ್ಧರಾಗುವಾ
ಕತ್ತಲನ್ನು ಕಬಳಿಸುತ್ತ, ಸುತ್ತ ಬೆಳಕನರಳಿಸುತ್ತ
ಮುಕ್ತ ರವಿಯು ಮೂಡುವಾ ನೋಟ ನೋಡುವಾ ||೧||

ಭಗವ ಧ್ವಜ ಹಾರುತಿಹುದು, ಮುಗಿಲ ಮೇಲೇರುತಿಹುದು
ಶುಭವ ಕೋರುತಾ, ಅಭಯವೀಯುತಾ, ಪ್ರಭೆಯ ಬೀರುತಾ
ಭೋಗ ವಿಷಯ ರಾಗ ತ್ಯಜಿಸಿ, ತ್ಯಾಗ ಭಾವ ಮನದಿ ನಿಲಿಸಿ
ಭಾಗ್ಯಪೂರ್ಣ ನಾಡ ಯೋಗ್ಯ ಮಕ್ಕಳೆನಿಸುವಾ ||೨||

ಮುಂದೆ ನಡೆಯೆ ಸ್ವರ್ಗದ್ವಾರ, ಹಿಂದೆ ಸರಿಯೆ ನರಕ ಘೋರ
ಎಂದು ಸಾರುವಾ, ಮುಂದೆ ಸಾಗುವಾ, ವಿಜಯ ಗಳಿಸುವಾ
ಮುಂದೆವರಿಯೆ ತಡೆವರಾರು? ಸಂಘಶಕ್ತಿಗೆದುರು ಯಾರು?
ಅಸುರ ಬಲವು ಬೆದರಿ ಜಾರುತಿಹುದು ಕಾಣುವಾ ||೩||

ಜಯ ಜಯ ಜಯ ಮಾತೃಭೂಮಿ, ಮಂಗಳಕರ ಪುಣ್ಯಭೂಮಿ
ಎಂದು ಪಾಡುವಾ, ಘೋಷಗೈಯುವಾ, ಹರ್ಷಗೊಳ್ಳುವಾ
ಮಾತೃಭಕ್ತ ಹೃದಯವಿರಲು, ಈಶನೊಲುಮೆ ಬಲವದಿರಲು
ಕಾಲ ಯಮನ ತಡೆಯುವಾ ಧೀರರೆನಿಸುವಾ ||೪||

banni hiMdu vIrarE muMde sAguvA
vIramAte putrareMdu dhIra saMtAnareMdu
dhareyoLiMdu sAruvA muMde sAguvA ||pa||

tAya sEvegAgi banni dhyEyakkAgi duDiva banni
nidde toreyuvA, eddu nilluvA, siddharAguvA
kattalannu kabaLisutta, sutta beLakanaraLisutta
mukta raviyu mUDuvA nOTa nODuvA ||1||

bhagava dhvaja hArutihudu, mugila mElErutihudu
SuBava kOrutA, aBayavIyutA, praBeya bIrutA
BOga viShaya rAga tyajisi, tyAga BAva manadi nilisi
BAgyapUrNa nADa yOgya makkaLenisuvA ||2||

muMde naDeye svargadvAra, hiMde sariye naraka GOra
eMdu sAruvA, muMde sAguvaa, vijaya gaLisuvA
muMdevariye taDevarAru? saMGaSaktigeduru yAru?
asura balavu bedari jArutihudu kANuvA ||3||

jaya jaya jaya mAtRuBUmi, maMgaLakara puNyaBUmi
eMdu pADuvaa, GOShagaiyuvA, harShagoLLuvA
maatRubhakta hRudayaviralu, ISanolume balavadiralu
kAla yamana taDeyuvA dhIrarenisuvA ||4||

No comments: