Tuesday, August 31, 2010

ವಿಘ್ನ ವಿರೋಧದ ಹೆಡೆಯನು ಮೆಟ್ಟಿ : viGna virOdhada heDeyanu meTTi


ವಿಘ್ನ ವಿರೋಧದ ಹೆಡೆಯನು ಮೆಟ್ಟಿ
ನಾಡನು ಕಟ್ಟಲು ಬನ್ನಿ
ಕಲ್ಲು ಮುಳ್ಳುಗಳ ಪಥದಲಿ ಚಲಿಸಿ
ಗುರಿಯನು ಮುಟ್ಟಲು ಬನ್ನಿ ||ಪ||

ಗತ ಇತಿಹಾಸದ ಪುಟ ಪುಟಗಳಲಿ
ಅಡಗಿದೆ ನೀತಿಯ ಪಾಠ
ಶತ ಶತಮಾನದ ಸೋಲುಗೆಲುವುಗಳ
ಏಳು-ಬೀಳುಗಳ ಆಟ
ಮನದಲಿ ಮನೆಮಾಡಿದ ಭಯ ಆಂಜಿಕೆ ದೂರಕೆ ಅಟ್ಟಲು ಬನ್ನಿ ||೧||

ಮೈ ಮರೆವಿನ ಫಲ ಘೋರ ಭೀಕರ
ರಾಷ್ಟ್ರ ವಿನಾಶಕೆ ದಾರಿ
ಏಕತೆಯೊಂದೆ ತಾರಕ ಮಂತ್ರ
ಎಂಬುದನೆಲ್ಲೆಡೆ ಸಾರಿ
ಭೇದದ ಭಿತ್ತಿಯ ಉರುಳಿಸಿ ಹೃದಯದ ಕದವನು ತಟ್ಟಲು ಬನ್ನಿ ||೨||

ಎಲ್ಲೆಡೆ ಬೀಸಿದೆ ಮುಕ್ತತೆ ಸೋಗಲಿ
ಸ್ವೈರಾಚಾರದ ಗಾಳಿ
ನಾಡ ಪರಂಪರೆ ಮೌಲ್ಯದ ಮೇಲೆ
ಪಶ್ಚಿಮ ದಿಕ್ಕಿನ ದಾಳಿ
ಶರಣಾಗದೆ ಮತಿಹೀನ ವಿಚಾರಕೆ ಕಿಚ್ಚನು ಹಚ್ಚಲು ಬನ್ನಿ ||೩||

viGna virOdhada heDeyanu meTTi
nADanu kaTTalu banni
kallu muLLugaLa pathadali calisi
guriyanu muTTalu banni ||pa||

gata itihAsada puTa puTagaLali
aDagide nItiya pATha
Sata SatamAnada sOlugeluvugaLa
ELu-bILugaLa ATa
manadali manemADida Baya AMjike dUrake aTTalu banni ||1||

mai marevina Pala GOra BIkara
rAShTra vinASake dAri
EkateyoMde tAraka maMtra
eMbudanelleDe sAri
BEdada Bittiya uruLisi hRudayada kadavanu taTTalu banni ||2||

elleDe bIside muktate sOgali
svairAcArada gALi
nADa paraMpare moulyada mEle
paScima dikkina dALi
SaraNAgade matihIna vicArake kiccanu haccalu banni ||3||

No comments: