Sunday, August 29, 2010

ಯಾವ ನೆಲದ ಗಂಧ ಗಾಳಿ : yAva nelada gaMdha gALi


ಯಾವ ನೆಲದ ಗಂಧ ಗಾಳಿ ಮಣ್ಣ ಕಂಪು ತೀಡಿತೋ
ಯಾವ ಧರೆಗೆ ವರ್ಷಧಾರೆ ಫಲಿಸಿ ಚಿಗುರು ತಂದಿತೋ
ಅದೇ ಎನ್ನ ಜನ್ಮಭೂಮಿ ಅದೇ ಎನ್ನ ಪುಣ್ಯಭೂಮಿ ||ಪ||

ಬಾನಿನಿಂದ ಇಳಿದ ಗಂಗೆ ಯಾವ ನೆಲದಿ ಹರಿದಳೋ
ತೇಗ ಗಂಧ ತರುಗಳೆಲ್ಲ ಯಾವ ಬನದಿ ಅರಳಿತೋ
ಹಿಮದ ಗಿರಿಯ ಧವಳಮಾಲೆ ಯಾರ ಕೊರಳ ಬಳಸಿತೋ ||೧||

ಋಷಿಯ ಕೊನೆಯು ಶ್ರುತಿಯು ಆಗಿ ಎಲ್ಲಿ ಬೆಳಕು ಹೊಮ್ಮಿತೋ
ಉಷೆಯು ಉದಿಸಿ ಬಂದ ಹಾಗೆ ಎಲ್ಲಿ ಹೊಸತು ಮೂಡಿತೋ
ಭಿನ್ನ ಭಿನ್ನ ಹೃದಯದಲ್ಲೇ ಏಕಸೂತ್ರ ಜನಿಸಿತೋ ||೨||

ದಾಸ ಶರಣರಾದಿಯಾಗಿ ಪಂಥರಾಗಿ ಸಂದರೋ
ರಾಮಕೃಷ್ಣ ಬುದ್ಧಸಿದ್ಧ ಮಹಿಮರಾಗಿ ಬೆಳೆದರೋ
ಗೀತೆಯ ನುಡಿ ಬದುಕಿನಲ್ಲಿ ಏಕಮಂತ್ರ ಮೂಡಿತೋ ||೩||

yAva nelada gaMdha gALi maNNa kaMpu tIDitO
yAva dharege varShadhaare Palisi ciguru taMditO
adE enna janmaBUmi adE enna puNyaBUmi ||pa||

bAniniMda iLida gaMge yAva neladi haridaLO
tEga gaMdha tarugaLella yAva banadi araLitO
himada giriya dhavaLamAle yAra koraLa baLasitO ||1||

RuShiya koneyu Srutiyu Agi elli beLaku hommitO
uSheyu udisi baMda hAge elli hosatu mUDitO
Binna Binna hRudayadallE EkasUtra janisitO ||2||

dAsa SaraNarAdiyAgi paMtharAgi saMdarO
rAmakRuShNa buddhasiddha mahimarAgi beLedarO
gIteya nuDi badukinalli EkamaMtra mUDitO ||3||

1 comment:

Nivedita said...

Awesome Song! Thanks for it... beautiful! please upload " savera bhageyale saguthida swatantrada lasya song too... its good