Tuesday, August 17, 2010

ಬನ್ನಿ ಸೋದರರೆ ಬನ್ನಿ ಬಾಂಧವರೆ : banni sOdarare


ಬನ್ನಿ ಸೋದರರೆ ಬನ್ನಿ ಬಾಂಧವರೆ
ಹೃದಯ ಹೃದಯಗಳ ಬೆಸೆಯೋಣ
ವಸುಧಾ ಕುಟುಂಬ ರಚಿಸೋಣ
ಮೊಳಗಲಿ ತಾಯ ಯಶೋಗಾನ
ಭಾರತೀ ಜಯ ಭಾರತೀ
ಜಯ ಭಾರತೀ ಜಯ ಭಾರತೀ ||ಪ||

ಹಸಿವಡಗಲಿ ತೃಷೆ ಹಿಂಗಲಿ - ಅಜ್ಞಾನದ ಪೊರೆ ಹರಿಯಲಿ
ರೋಗ ರೂಢಿಗೊದಗಲಿ ಅವಸಾನ - ಸುತರೆಮಗಿದು ಕರ್ತವ್ಯಪಣ
ಧರೆ ಎನಿಸಲಿ ಆನಂದವನ || ವಸುಧಾ ಕುಟುಂಬ ... ||೧||

ಕೊರತೆ ಕಲುಷಗಳನಳೆದಳೆದು - ಸರಿಯುತ್ತರ ಸುರಿಮಳೆಗರೆದು
ಸರ್ವವ್ಯಾಪಿಯಾಗಲಿ ಸಂಕ್ರಮಣ - ಸಂಘಟನಾಬಲ ನಿರ್ಮಾಣ
ವಿಶ್ವ ಸಂತತಿಯ ಕಲ್ಯಾಣ || ವಸುಧಾ ಕುಟುಂಬ ... ||೨||

ಹಿಂದು ಚಿಂತನಾನುಷ್ಠಾನ - ತಂದೊಲಿಸಲಿ ಜಗದುತ್ಥಾನ
ಮಾತೆ ಭಾರತಿಯ ವೈಭವ ಸುದಿನ - ಮೈದಾಳಲಿ ನೆಲದಭಿಮಾನ
ಹಿಂದುತ್ವದ ನವ ಜಾಗರಣ || ವಸುಧಾ ಕುಟುಂಬ ... ||೩||

banni sOdarare banni bAMdhavare
hRudaya hRudayagaLa beseyONa
vasudhA kuTuMba racisONa
moLagali tAya yaSOgAna
BAratI jaya BAratI
jaya BAratI jaya BAratI ||pa||

hasivaDagali tRuShe hiMgali - aj~jAnada pore hariyali
rOga rUDhigodagali avasAna - sutaremagidu kartavyapaNa
dhare enisali AnaMdavana || vasudhA kuTuMba ... ||1||

korate kaluShagaLanaLedaLedu - sariyuttara surimaLegaredu
sarvavyApiyAgali saMkramaNa - saMGaTanAbala nirmANa
viSva saMtatiya kalyANa || vasudhA kuTuMba ... ||2||

hiMdu ciMtanAnuShThAna - taMdolisali jagadutthAna
mAte BAratiya vaiBava sudina - maidALali neladaBimAna
hiMdutvada nava jAgaraNa || vasudhA kuTuMba ... ||3||

1 comment:

Anonymous said...

Bharat mata ki jai🚩🚩