Sunday, August 29, 2010

ರಕ್ಷೆಯ ಕಟ್ಟುವೆವು ನಾವು : rakSheya kaTTuvevu nAvu


ರಕ್ಷೆಯ ಕಟ್ಟುವೆವು ನಾವು ರಕ್ಷೆಯ ಕಟ್ಟುವೆವು
ನಿಶ್ಚಯ ಮಾಡಿಹೆವು ಬಲಾಢ್ಯ ರಾಷ್ಟ್ರವ ಕಟ್ಟುವೆವು ||ಪ||

ಹಿಂದೂ ಸಾಗರದಲೆಗಳಸಂಖ್ಯ ಬ್ರಹ್ಮದೇವನಿಗು ಎಣಿಸಲಸಾಧ್ಯ
ಕಟ್ಟಿಹ ರಕ್ಷೆಗಳಗಣಿತವಣ್ಣ ಹೊಳೆ ಹೊಳೆಯುತಲಿದೆ ಕೇಸರಿಬಣ್ಣ ||೧||

ಒಂದೇ ತಾಯಿಯ ಮಕ್ಕಳು ನಾವು ಒಂದೇ ಮಣ್ಣಿನ ಕಣಗಳು ನಾವು
ಮೇಲುಕೀಳುಗಳ ಭೇಧವನಳಿಸಿ ಸ್ನೇಹದ ಪ್ರೇಮದ ಭಾವನೆ ಬೆಳೆಸಿ ||೨||

ಎಮ್ಮೊಳಹೊರಗಿನ ಶತ್ರುಗಳನ್ನು ಸುಟ್ಟುರಿಸುತ ದುರ್ಮಾರ್ಗಿಗಳನ್ನು
ದೃಢಸಂಕಲ್ಪದ ಸತ್ಪಥದಲ್ಲಿ ಮುನ್ನುಗುತ ಜನಮನವನು ಗೆಲ್ಲಿ ||೩||

ಮೈಮರೆವಿನ ಕಾಲವು ಕಳೆದಿಹುದು ನಾವಸ್ವಾತಂತ್ರ್ಯದ ಬಲ ಬಂದಿಹುದು
ವರ ಭಗವಾಧ್ವಜ ಕೈಯಲಿ ಪಿಡಿದು ದಿಗ್ವಿಜಯದ ಜಯಭೇರಿಯ ಹೊಡೆದು ||೪||

rakSheya kaTTuvevu nAvu rakSheya kaTTuvevu
niScaya mADihevu balADhya rAShTrava kaTTuvevu ||pa||

hiMdU sAgaradalegaLasaMKya brahmadEvanigu eNisalasAdhya
kaTTiha rakShegaLagaNitavaNNa hoLe hoLeyutalide kEsaribaNNa ||1||

oMdE tAyiya makkaLu nAvu oMdE maNNina kaNagaLu nAvu
mElukILugaLa BEdhavanaLisi snEhada prEmada BAvane beLesi ||2||

emmoLahoragina SatrugaLannu suTTurisuta durmArgigaLannu
dRuDhasaMkalpada satpathadalli munnuguta janamanavanu gelli ||3||

maimarevina kAlavu kaLedihudu nAvasvAtaMtryada bala baMdihudu
vara BagavAdhvaja kaiyali piDidu digvijayada jayaBEriya hoDedu ||4||

No comments: