Monday, August 30, 2010

ರಾಷ್ಟ್ರದೇವಗೆ ಪ್ರಾಣದೀವಿಗೆ : rAShTradEvage prANadIvige


ರಾಷ್ಟ್ರದೇವಗೆ ಪ್ರಾಣದೀವಿಗೆ ಸೇವೆಯಾಗಲಿ ನಾಡಿಗೆ
ಮೃತ್ಯು ಭೃತ್ಯನು ಹಿಂದುಭೂಮಿಗೆ ಮರಣ ಕಾದಿದೆ ಸಾವಿಗೆ ||ಪ||

ಕೋಟಿಕೋಟಿಯ ತರುಣ ಧಮನಿಯು ರಾಷ್ಟ್ರಪ್ರೇಮದ ಸ್ರೋತದಿ
ನಾಳದಾಳದ ನೆತ್ತರೊರೆಯುವ ದೇಶ ಧರ್ಮದ ಗಾನದಿ
ಹೃದಯಹೃದಯವು ದುರ್ಗವಾಗಿದೆ ಅರಿಯನಳಿಸಲು ನಿಂತಿದೆ
ಹಿಂದಿನಂತೆಯೆ ಹಿಂದು ಚೇತನವಿಂದು ಜಾಗೃತವಗಿದೆ ||೧||

ಕಾಲಕಾಲಕೆ ಕ್ರಾಂತಿಶೂರರ ಕಣಕೆ ಕಳಹುತ ಬೆದರದೆ
ಹಿಂದುದೇಶದ ಯುವಜನಾಂಗದ ಧ್ಯೇಯಬಾವುಟವೇರಿದೆ
ಹಗೆಯ ತುಳಿಯುತ ಗಗನದೆತ್ತರ ಬೆಳೆದು ನಿಲ್ಲುವ ಪೌರಷ
ಪ್ರಕಟವಾಗಿದೆ ರಾಷ್ಟ್ರಗೌರವ ಉಳಿಸಿ ಬೆಳೆಸುವ ಸಾಹಸ ||೨||

ಹೂಣಗ್ರೀಕರ ಆಂಗ್ಲ ಮೊಗಲರ ದಹಿಸಿ ಹುಡಿಧೂಳೆಬ್ಬಿಸಿ
ಗೆದ್ದ ನೆಲದಲಿ ಧರ್ಮವೈರಿಗೆ ಚಿರ ಸಮಾಧಿಯ ನಿರ್ಮಿಸಿ
ಪ್ರಲಯ ರುದ್ರನ ಡಮರುವಾದನ ಶೂಲದಲಗಿನ ದರ್ಶನ
ನಡೆಯಲಿಂದೀ ದೇವಧರೆಯಲಿ ಕಾಲಭೈರವನರ್ತನ ||೩||

ಯಾವ ಮಂದೆಗು ಬಾಗೆವೆಂದಿಗು ಸ್ವಾಭಿಮಾನದ ಬಲವಿದೆ
ಬರಲಿ ವೈರಿಯು ಗೋರಿ ಕಾದಿದೆ ಗೆದ್ದು ಬದುಕುವ ಛಲವಿದೆ
ಬಾಳಬಲ್ಲೆವು ಆಳಬಲ್ಲೆವು ಸೋಲನೊಲ್ಲೆವು ಒಲ್ಲೆವು
ವಿಶ್ವವೆಲ್ಲವು ಮುನಿದು ನಿಂತರು ನಾಡನುಳಿಸಲು ಬಲ್ಲೆವು ||೪||

rAShTradEvage prANadIvige sEveyAgali nADige
mRutyu BRutyanu hiMduBUmige maraNa kAdide sAvige ||pa||

kOTikOTiya taruNa dhamaniyu rAShTraprEmada srOtadi
nALadALada nettaroreyuva dESa dharmada gAnadi
hRudayahRudayavu durgavAgide ariyanaLisalu niMtide
hiMdinaMteye hiMdu cEtanaviMdu jAgRutavagide ||1||

kAlakAlake krAMtiSUrara kaNake kaLahuta bedarade
hiMdudESada yuvajanAMgada dhyEyabAvuTavEride
hageya tuLiyuta gaganadettara beLedu nilluva pouraSha
prakaTavAgide rAShTragourava uLisi beLesuva sAhasa ||2||

hUNagrIkara AMgla mogalara dahisi huDidhULebbisi
gedda neladali dharmavairige cira samAdhiya nirmisi
pralaya rudrana DamaruvAdana SUladalagina darSana
naDeyaliMdI dEvadhareyali kAlaBairavanartana ||3||

yAva maMdegu bAgeveMdigu svABimAnada balavide
barali vairiyu gOri kAdide geddu badukuva Calavide
bALaballevu ALaballevu sOlanollevu ollevu
viSvavellavu munidu niMtaru nADanuLisalu ballevu ||4||

No comments: