ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Tuesday, October 19, 2010
ಎಲ್ಲಾ ಭೇದ ಮರೆತು : ellA BEda maretu
ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ||ಪ||
ದುಡಿದರು ಕಾಣುತ ಕೇಶವರಂದು ಐಕ್ಯದ ಸುಂದರ ಕನಸು
ಪಣತೊಡಿರಿಂದು ಮಾಡುವೆವೆಂದು ಎಲ್ಲವನೂ ನನಸು
ಜಾತಿ ಮತಗಳ ಧನಿಕ ಬಡವರ ಭೇದವ ತರಬೇಡಿ
ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರೂ ಕೈ ನೀಡಿ ||೧||
ಗಂಗೆ ತುಂಗೆ ಕಾವೇರಿಯ ಜಲ ನಮಗಾಗಿಯೆ ಎಂದು
ಮನ ಮಾಡಿಂದು ದುಡಿಯಲು ಬಂಧು ಆಲಸ ಬಿಡುತಿಂದು
ಪುಣ್ಯದ ಮಣ್ಣಿದು ಬೆಳೆಸಲು ಬಾ ಬಂಗಾರದ ಬೆಳೆಯನ್ನು
ಬೆವರಿನ ಹೊಳೆಯೆ ಹರಿಯಲಿ ಇಂದು ಕೊಚ್ಚುತ ಕೊಳೆಯನ್ನು ||೨||
ಕೊಲೆ ಸುಲಿಗೆಗಳ ಅತ್ಯಾಚಾರದ ಕೊನೆಯಾಗಲಿ ಇಂದು
ಸ್ನೇಹದ ಪ್ರೇಮದ ಭ್ರಾತೃತ್ವದ ಸೆಲೆ ಹರಿಯಲಿ ಎಂದೆಂದು
ಕುಡಿಯುವುದೊಂದೆ ಜಲ ಉಸಿರಾಡುವುದೊಂದೆ ಗಾಳಿ
ಹರಿಯುವುದೊಂದೆ ರಕ್ತವು ನಮ್ಮಲಿ ಭೇದವು ಏಕಾಗಿ ||೩||
ellA BEda maretu banniri nAvu samAna
sAruva iMdu ellaru hiMdu iduve navagAna ||pa||
duDidaru kANuta kESavaraMdu aikyada suMdara kanasu
paNatoDiriMdu mADuveveMdu ellavanU nanasu
jAti matagaLa dhanika baDavara BEdava tarabEDi
biddavaranu mElettuva banni ellarU kai nIDi ||1||
gaMge tuMge kAvEriya jala namagAgiye eMdu
mana mADiMdu duDiyalu baMdhu Alasa biDutiMdu
puNyada maNNidu beLesalu bA baMgArada beLeyannu
bevarina hoLeye hariyali iMdu koccuta koLeyannu ||2||
kole suligegaLa atyAcArada koneyAgali iMdu
snEhada prEmada BrAtRutvada sele hariyali eMdeMdu
kuDiyuvudoMde jala usirADuvudoMde gALi
hariyuvudoMde raktavu nammali BEdavu EkAgi ||3||
Subscribe to:
Post Comments (Atom)
No comments:
Post a Comment