Monday, January 25, 2010

ಏಕಾತ್ಮ ಭಾರತದ ಶತಕೋಟಿ ಕಾಯಗಳ : EkAtma BAratada


ಏಕಾತ್ಮ ಭಾರತದ ಶತಕೋಟಿ ಕಾಯಗಳ
ಧಮನಿಯೊಳು ಉಕ್ಕುತಿಹ ನೆತ್ತರೊಂದೇ |
ಹೃದಯದೊಳು ಸ್ಪಂದಿಸುವ ಭಾವ ಒಂದೇ ||
ಹಿಂದುತ್ವವೀ ನೆಲದ ಮೂಲಮಂತ್ರ...
ಈ ಪುಣ್ಯಭೂಮಿಗದೇ ಜೀವಯಂತ್ರ |ಪ||

ನಮ್ಮ ಪ್ರಾಚೀನತೆಯ ಶ್ರೇಷ್ಠತಮ ಸಂಸ್ಕೃತಿಯ
ರವಿಕಿರಣ ವಿಶ್ವವನೆ ಬೆಳಗುತಿಹುದು
ವಿವಿಧತೆಯೊಳೇಕತೆಯ ಸಮರಸದ ಸಂಹಿತೆಯ
ಆದರ್ಶ ಜನಮನವ ಬೆಸೆಯುತಿಹುದು ||೧||

ಸುವಿಚಾರಬದ್ಧತೆಗೆ ಆಚಾರ ಶುದ್ಧತೆಗೆ
ಭಾರತದೊಳಿಹುದೆಂದೂ ಅಗ್ರ ಪ್ರಾಶಸ್ತ್ಯ
ಹೊಸಯುಗದ ಹೊಸ ಜಗದ ನಿರ್ಮಿತಿಯ ಸಿದ್ಧತೆಗೆ
ಮೀಸಲಾಗಿರಲೆಮ್ಮ ಪೂರ್ಣ ಸಾಮರ್ಥ್ಯ ||೨||

ಚರಿತೆಗಂಟಿದ ಸಕಲ ದುರಿತಗಳ ಕಶ್ಮಲವ
ಒಮ್ಮನದಿ ನಾವಿಂದು ನೀಗಿಸೋಣ
ತರಮದ ಭೇಧಗಳ ತ್ವರಿತವಾಗಳಿಸುತಲಿ
ಜಾಗೃತಿಯ ಕಹಳೆಯನು ಮೊಳಗಿಸೋಣ ||೩||

EkAtma BAratada SatakOTi kAyagaLa
dhamaniyoLu ukkutiha nettaroMdE |
hRudayadoLu spaMdisuva BAva oMdE ||
hiMdutvavI nelada mUlamaMtra...
I puNyaBUmigadE jIvayaMtra |pa||

namma prAcInateya SrEShThatama saMskRutiya
ravikiraNa viSvavane beLagutihudu
vividhateyoLEkateya samarasada saMhiteya
AdarSa janamanava beseyutihudu ||1||

suvicArabaddhatege AcAra Suddhatege
BAratadoLihudeMdU agra prASastya
hosayugada hosa jagada nirmitiya siddhatege
mIsalAgiralemma pUrNa sAmarthya ||2||

caritegaMTida sakala duritagaLa kaSmalava
ommanadi nAviMdu nIgisONa
taramada BEdhagaLa tvaritavAgaLisutali
jAgRutiya kahaLeyanu moLagisONa ||3||

1 comment:

Arun B Ramakrishna said...

Excellent.. Great effort. Thank you very much.