Monday, January 25, 2010

ಅನುಪಮ ಆದರ್ಶದ ನುಡಿಯೊಂದಕೆ : anupama Adarshada


ಅನುಪಮ ಆದರ್ಶದ ನುಡಿಯೊಂದಕೆ
ದೊರೆತಿದೆ ಇಲ್ಲಿ ಉದಾಹರಣೆ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೆ ||ಪ||

ಹಣವಿಲ್ಲ, ಹಣ ಬೆಂಬಲವಿಲ್ಲ ಅಧಿಕಾರದ ಅಂದಣವಿಲ್ಲ
ಬಣವಿಲ್ಲ ಜನ ಬೆಂಬಲವಿಲ್ಲ ಅನುಕೂಲತೆಗಳ ಸುಳಿವಿಲ್ಲ
ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಹಿಂದೂ ಸಂಘಟನೆ ||೧||

ರಾಷ್ಟ್ರಭಕ್ತಿ ಸದ್ಗುಣಗಳನುಳಿಸಿದರೆ ಬಡತನವೇ ಮೈ ಮನೆಯೆಲ್ಲಾ
ಪದವಿ ಬೇರೆ ಪ್ರವೃತ್ತಿ ಬೇರೆ ಇದು ಪರಿಹಾಸ್ಯದ ನುಡಿ ಜನಕೆಲ್ಲಾ
ವ್ಯಂಗ್ಯ ವಿರೋಧವನೆದುರಿಸಿ ಕೇಶವ ಕಟ್ಟಿದ ಹಿಂದೂ ಸಂಘಟನೆ ||೨||

ಸಾವಿರದಿತಿಹಾಸವ ಕಟ್ಟಿದ ಮನೆ ಬಾನೆತ್ತರ ಭುಮಿಯ ಅಗಲ
ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ
ಪುನರಪಿ ಜೀರ್ಣೋದ್ಧಾರಕೆ ಕೇಶವ ಕಟ್ಟಿದ ಹಿಂದೂ ಸಂಘಟನೆ ||೩||

anupama Adarshada nuDiyoMdake
doretide illi udaaharaNe
kriyAsiddhiH sattvE bhavati mahatAM nOpakaraNe ||pa||

haNavilla, haNa beMbalavilla adhikArada aMdaNavilla
baNavilla jana beMbalavilla anukUlategaLa suLivilla
kShaNavaadarU biDuvillade kESava kaTTida hiMdU saMGaTane ||1||

rAShTraBakti sadguNagaLanuLisidare baDatanavE mai maneyellA
padavi bEre pravRutti bEre idu parihAsyada nuDi janakellA
vyaMgya virOdhavanedurisi kESava kaTTida hiMdU saMGaTane ||2||

sAviraditihAsava kaTTida mane bAnettara Bumiya agala
SatamAnada dAsyada birugALige naDugitu naDeyitu oLajagaLa
punarapi jIrNOddhArake kESava kaTTida hiMdU saMGaTane ||3||

No comments: