Monday, January 25, 2010

ಇದು ಮಂಗಲೋಡ್ಡಯನ : idu maMgalODDayana


ಇದು ಮಂಗಲೋಡ್ಡಯನ, ಗುರಿ ಸೇರುತಿದೆ ಪಯಣ |
ಹಿಂದುತ್ವ ಸಂಕ್ರಮಣ ವಿಶ್ವರಕ್ಷಾಭರಣ ||ಪ||

ವ್ಯಾಸ ವಾಲ್ಮೀಕಿಯರ ವೇದ ಸಂದೇಶಗಳ
ಆಶಯದ ಜಗದಗಲ ಸಾರಿ ನಡೆ ತೋರಿ |
ಸೂಸುತಿದೆ ನರುಗಂಪ ವಿಜಯಸುಮ ತಾನರಳಿ
ಬೀಸುತಿದೆ ಭರವಸೆಯ ಗಾಳಿ ||೧||

ಶಠ ವಾದಗಲ ತೊರೆದು ಶಠಕೆ ಶಾಠ್ಯವ ನುಡಿದು
ದಿಟವೊಂದ ಸಾಧಿಸುವ ಧ್ಯೇಯ ಪಥದಿ |
ಉದಿಸುತಿದೆ ಹಿಂದುತ್ವ ನೇಸರದ ಹೊಂಗಿರಣ
ಒದಗುತಿದೆ ಜಗದ ಜಾಗರಣ ||೨||

ಮನವ್ಯದತ್ತರದ ಅಮೃತ ಮಂತ್ರವನೆರೆಯೆ
ಬಾಂಧವ್ಯ ಬಾಹುಗಳ ಭುವಿಯಗಲ ಬೆಸೆಯೆ |
ಸೂರೆಗೊಳಲಿದೆ ಸಕಲ ಲೋಕಗಳ ಜನಮನವು
ಮರಳಲಿದೆ ಪರಮ ವೈಭವವು ||೩||

idu maMgalODDayana, guri sErutide payaNa |
hiMdutva saMkramaNa viSvarakShABaraNa ||pa||

vyAsa vAlmIkiyara vEda saMdESagaLa
ASayada jagadagala sAri naDe tOri |
sUsutide narugaMpa vijayasuma tAnaraLi
bIsutide Baravaseya gALi ||1||

SaTha vAdagala toredu SaThake SAThyava nuDidu
diTavoMda sAdhisuva dhyEya pathadi |
udisutide hiMdutva nEsarada hoMgiraNa
odagutide jagada jAgaraNa ||2||

manavyadattarada amRuta maMtravanereye
bAMdhavya bAhugaLa Buviyagala beseye |
sUregoLalide sakala lOkagaLa janamanavu
maraLalide parama vaiBavavu ||3||

No comments: