ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Monday, January 25, 2010
ಓಗೊಡಿರಿಂದು ಕಾಲದ ಕರೆಗೆ : OgoDiriMdu kAlada karege
ಓಗೊಡಿರಿಂದು ಕಾಲದ ಕರೆಗೆ
ಸ್ಪಂದಿಸ ಬನ್ನಿ ಮಾತೆಯ ಮೊರೆಗೆ ||ಪ||
ಗತ ಇತಿಹಾಸದ ಗರ್ಭದೊಳಡಗಿದ
ಬಡಬಾಗ್ನಿಯ ಬಡಿದೆಬ್ಬಿಸಬನ್ನಿ
ಶತಶತಮಾನದ ಕಡು ಅಪಮಾನದ
ಅಧ್ಯಾಯವ ಕೊನೆಗಾಣಿಸ ಬನ್ನಿ ||೧||
ಈ ನಾಡಿನ ಗಡಿಗುಡಿಗಳ ರಕ್ಷಣೆ
ಗೈಯಲು ಪ್ರಾಣಾರ್ಪಣೆ ಮಾಡಿರುವ
ಅಗಣಿತ ವೀರರ ಸ್ಮರಣೆಯ ಮಾಡುತ
ಕರ್ತವ್ಯದ ಪಥದಲಿ ಮುನ್ನಡೆವಾ ||೨||
ಸತ್ತಾರೂಢರ ಭ್ರಷ್ಟಾಚಾರವು
ಹೆಮ್ಮರವಾಗಿ ಬೆಳೆದಿಹುದಿಂದು
ಸ್ವಾರ್ಥ ದುರಾಸೆಯ ಮೇರೆಯ ಮೀರಿ
ರಾಷ್ಟ್ರ ಹಿತವು ಮರೆಯಾಗಿಹುದಿಂದು ||೩||
ನಕ್ಸಲೀಯ ಪೈಶಾಚಿಕ ನೃತ್ಯವ
ದ್ರೋಹಿಗಳ ದೌರ್ಜನ್ಯದ ಕೃತ್ಯವ
ಕೊನೆಗಾಣಿಸಲು ಕಂಕಣ ಕಟ್ಟಿ
ಪರಮ ವೈಭವದ ಗುರಿಯನು ಮುಟ್ಟಿ ||೪||
OgoDiriMdu kAlada karege
spaMdisa banni mAteya morege ||pa||
gata itihAsada garBadoLaDagida
baDabAgniya baDidebbisabanni
SataSatamAnada kaDu apamAnada
adhyAyava konegANisa banni ||1||
I nADina gaDiguDigaLa rakShaNe
gaiyalu prANArpaNe mADiruva
agaNita vIrara smaraNeya mADuta
kartavyada pathadali munnaDevA ||2||
sattArUDhara BraShTAcAravu
hemmaravAgi beLedihudiMdu
svArtha durAseya mEreya mIri
rAShTra hitavu mareyAgihudiMdu ||3||
naksalIya paiSAcika nRutyava
drOhigaLa dourjanyada kRutyava
konegANisalu kaMkaNa kaTTi
parama vaiBavada guriyanu muTTi ||4||
Subscribe to:
Post Comments (Atom)
No comments:
Post a Comment