Monday, January 25, 2010

ಒಂದುಗೂಡಿ ಬನ್ನಿ ನಾಡಸೇವೆಗೆ : oMdugUDi banni


ಒಂದುಗೂಡಿ ಬನ್ನಿ ನಾಡಸೇವೆಗೆ
ಶುದ್ಧಮನದಿ ಶ್ರದ್ಧೆಯಿಂದ ಗೈವಪೂಜೆಗೆ ||
ಬದ್ಧರಾಗಿ ದಿವ್ಯಧ್ಯೆಯ ಆದರ್ಶಕೆ
ಸಿದ್ಧರಾಗಿ ಸರ್ವಸ್ವ ನೈವೇದ್ಯಕೆ || ||ಪ||

ನಮ್ಮ ಬೆವರು ರಕ್ತವ ತೈಲದಂತೆ ಎರೆಯುವಾ
ನಾಡಗುಡಿಯ ಬೆಳಗಲು ಬತ್ತಿಯಂತೆ ಉರಿಯುವಾ
ಕತ್ತಲನ್ನು ಕರಗಿಸಿ ಸುತ್ತ ಬೆಳಕ ಮೂಡಿಸಿ
ಮನದಿ ಮನೆಯ ಮಾಡಿದಂಥ ಮೌಡ್ಯವನ್ನು ತೊಲಗಿಸಿ ||೧||

ಸುಮ್ಮನಿರದೆ ಕಾರ್ಯಕಾಗಿ ಸತತಕಾಯ ಸವೆಸುವಾ
ಹೆಮ್ಮೆಯಿಂದ ಒಮ್ಮನದಲಿ ಗುರಿಯ ಕಡೆಗೆ ಚಲಿಸುವಾ
ಸೋಲಿನಿಂದ ಕುಗ್ಗದೆ ಸವಾಲುಗಳಿಗೆ ಜಗ್ಗದೆ
ವಿರೋಧಕೆಂದೂ ಬಗ್ಗದಂಥ ಗಟ್ಟಿತನವ ಗಳಿಸುವಾ ||೨||

ಬಿದ್ದ ಜನರ ಮುಗ್ಧತೆಯನು ದುರುಪಯೋಗ ಪಡಿಸಿಹ
ವಿವಿಧ ಅಮಿಷಗಳೋಡ್ಡಿ ತಪ್ಪುದಿಶೆಗೆ ನಡೆಸಿಹ |
ನಯವಂಚಕ ನರಿಗಳ ಕಿತ್ತುಬಿಸುಟು ಸೋಗನು
ವಿಫಲಗೊಳಿಸಿ ಕೃತಕವೇಷ ಧರಿಸಿದವರ ಸಂಚನು || ||೩||

ಸೇವೆಯೊಂದೆ ದಾರಿದೀಪ ಪತಿತ ಜನರ ಬಾಳಿಗೆ
ಸೇವೆಯೊಂದೆ ದಿವ್ಯಮಂತ್ರ ದಿಟದಿ ನಮ್ಮ ಪಾಲಿಗೆ
ಸೇವೆಯಿಂದ ದೂರಗೊಳಿಸಿ ಉಚ್ಚನೀಚ ಭಿನ್ನತೆ
ಸೇವೆಯಿಂದ ಗಳಿಸಬನ್ನಿ ಮಾತೃಭುವಿಗೆ ಮಾನ್ಯತೆ || ||೪||

oMdugUDi banni nADasEvege
Suddhamanadi SraddheyiMda gaivapUjege ||
baddharAgi divyadhYeya AdarSake
siddharAgi sarvasva naivEdyake || ||pa||

namma bevaru raktava tailadaMte ereyuvA
nADaguDiya beLagalu battiyaMte uriyuvA
kattalannu karagisi sutta beLaka mUDisi
manadi maneya mADidaMtha mouDyavannu tolagisi ||1||

summanirade kAryakAgi satatakAya savesuvA
hemmeyiMda ommanadali guriya kaDege calisuvA
sOliniMda kuggade savAlugaLige jaggade
virOdhakeMdU baggadaMtha gaTTitanava gaLisuvA ||2||

bidda janara mugdhateyanu durupayOga paDisiha
vividha amiShagaLODDi tappudiSege naDesiha |
nayavaMcaka narigaLa kittubisuTu sOganu
viPalagoLisi kRutakavESha dharisidavara saMcanu || ||3||

sEveyoMde dAridIpa patita janara bALige
sEveyoMde divyamaMtra diTadi namma pAlige
sEveyiMda dUragoLisi uccanIca Binnate
sEveyiMda gaLisabanni mAtRuBuvige mAnyate || ||4||

3 comments:

Anonymous said...

Wonderful Geete

Anonymous said...

Wonderfull

Anonymous said...

Nice song