ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Monday, January 25, 2010
ಅರಳಲಿದೆ ನವಭಾರತದೇಶ : araLalide navaBaaratadESa
ಅರಳಲಿದೆ ನವಭಾರತದೇಶ ಕಗ್ಗತ್ತಲ ಒಡಲಿಂದ
ಬೆಳಗಲಿದೆ ಭುವಿಯಂಗುಲ ಅಂಗುಲ ಹಿಂದುತ್ವದ ಪ್ರಭೆಯಿಂದ ||ಪ||
ಮನುಜನ ಜನುಮವ ಸಾರ್ಥಕಗೊಳಿಸಿಹ ಮುನಿಜನರಮೃತ ವಾಣಿ
ಅನುಜತ್ವದ ಆದರ್ಶವ ಸಾರಿದ ಕಾವ್ಯಗಳದ್ಭುತ ಶೇಣಿ
ಚಿಮ್ಮಲಿದೆ ಚೈತನ್ಯದ ಚಿಲುಮೆ ಪ್ರಾಚೀನದ ನೆಲೆಯಿಂದ ||೧||
ಶತಶತಮಾನದ ಆ ಗತವೈಭವ ಭೂಗವಾಗುವ ಮುನ್ನ
ಜಾಗೃತಗೊಳಿಸಿ ಸುಷುಪ್ತ ಜನಾಂಗದ ಸಮಯವು ಮೀರುವ ಮುನ್ನ
ಉದಿಸಲಿದೆ ನವ ಹಿಂದುಸಮಾಜ ಶತ ಅವಶೇಷಗಳಿಂದ ||೨||
ಹಬ್ಬಿದ ಮಬ್ಬಲಿ ಗುರಿಯನು ತಪ್ಪಿದ ಮೌಢ್ಯವನಪ್ಪಿದ ಜನಕೆ
ಅರಿವಿನ ಈ ಅರುಣೋದಯಕಾಲದಿ ಇಳೆಯನೆ ಬೆಳಗುವ ಬಯಕೆ
ಮೂಡಲಿದೆ ನೂತನ ಆಶೋತ್ತರ ಹತ ಆಕಾಂಕ್ಷೆಗಳಿಂದ ||೩||
ದಿಡುಕಿದ ಅನುಜರ ಸಿಡುಕಿನ ಕೃತ್ಯವು ತಂದಿರೆ ನಾಡಿಗಪಾಯ
ಒಡಕಿನ ಜಾಲಕೆ ಕೆಡುಕಿನ ಕಾಲಕೆ ಸಾರುತ ಅಂತ್ಯವಿದಾಯ
ಉಕ್ಕಲಿದೆ ಸಂಜೀವಿನಿ ಅಮೃತ ಹಾಲಾಹಲದೆಡೆಯಿಂದ ||೪||
araLalide navaBaaratadESa kaggattala oDaliMda
beLagalide BuviyaMgula aMgula hiMdutvada praBeyiMda ||pa||
manujana janumava saarthakagoLisiha munijanaramRuta vANi
anujatvada AdarSava sArida kAvyagaLadButa SRENi
cimmalide caitanyada cilume prAcInada neleyiMda ||1||
SataSatamAnada A gatavaiBava BUgavAguva munna
jAgRutagoLisi suShupta janAMgada samayavu mIruva munna
udisalide nava hiMdusamAja Sata avaSEShagaLiMda ||2||
habbida mabbali guriyanu tappida mouDhyavanappida janake
arivina I aruNOdayakAladi iLeyane beLaguva bayake
mUDalide nUtana ASOttara hata AkAMkShegaLiMda ||3||
diDukida anujara siDukina kRutyavu taMdire nADigapAya
oDakina jAlake keDukina kAlake sAruta aMtyavidAya
ukkalide saMjIvini amRuta hAlAhaladeDeyiMda ||4||
Subscribe to:
Post Comments (Atom)
No comments:
Post a Comment