ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Monday, January 25, 2010
ಕರವ ಜೋಡಿಸಬನ್ನಿ : karava jODisabanni
ಕರವ ಜೋಡಿಸಬನ್ನಿ ಈ ರಾಷ್ಟ್ರಕಾರ್ಯದಲಿ
ಸ್ವರವ ಕೂಡಿಸಬನ್ನಿ ಒಕ್ಕೊರಲ ಘೋಷದಲಿ
ನವಯುಗದ ನಿರ್ಮಾಣ ಗೈವ ಶುಭ ಆಶಯಕೆ
ಆಕೃತಿಯ ಮೂಡಿಸಲು ಜಾಗೃತಿಯ ಸಾಧಿಸಲು ||ಪ||
ಉತ್ತುಂಗ ಸಂಸ್ಕೃತಿಯ ವಾರಿಸಿಕೆ ಎಮಗಿಹುದು
ತಾಯ್ನೆಲದ ಉನ್ನತಿಯ ಆದರ್ಶ ಗುರಿಯಿಹುದು
ಕಷ್ಟಗಳನೆದುರಿಸುವ ಕೆಚ್ಚೆದೆಯ ಬಲವಿಹುದು
ವೈರಿಗಳ ವ್ಯೂಹಗಳ ಭೇದಿಸುವ ಛಲವಿಹುದು ||೧||
ದಮನ ನಿರ್ಬಂಧಗಳ ಅಂಜಿಕೆಯು ನಮಗಿಲ್ಲ
ಆಳುವರಸರ ಕೃಪೆಯ ಆಸರೆಯ ಹಂಗಿಲ್ಲ
ಕಠಿಣ ಅಗ್ನಿ ಪರೀಕ್ಷೆಗಳ ಗೆದ್ದು ಬಂದಿಹೆವು
ಮರಣ ಕೂಪದಿ ಧುಮುಕಿ ಮೇಲೆದ್ದು ಬಂದಿಹೆವು ||೨||
ಕಾಶ್ಮೀರದಾ ಕೂಗು ನಿಮಗೆ ಕೇಳಿಸದೇನು?
ತಾಯೊಡಲ ತಳಮಳವು ಮನವ ಬಾಧಿಸದೇನು?
ಮೆರೆಯುತಿರೆ ಎಲ್ಲೆಲ್ಲೂ ದ್ರೋಹ ವಿಚ್ಛಿದ್ರತೆಯು
ಮೈಮರೆತು ಮಲಗಿದರೆ ಎಲ್ಲಿಹುದು ಭದ್ರತೆಯು? ||೩||
ನೀವು ಕಿವಿಗೊಡಬೇಡಿ ಸ್ವಾರ್ಥಿಗಳ ನುಡಿಗಳಿಗೆ
ಆಜ್ಯವನು ಎರೆಯದಿರಿ ಕುಟಿಲತೆಯ ಕಿಡಿಗಳಿಗೆ
ಸಹಕರಿಸಿ ಬೋಧನೆಗೆ ಬಲವೀವ ಸಾಧನೆಗೆ
ಹಿಂದು ರಾಷ್ಟ್ರೀಯತೆ ಪ್ರಬಲ ಪ್ರತಿಪಾದನೆಗೆ |೪||
karava jODisabanni I rAShTrakAryadali
svarava kUDisabanni okkorala GOShadali
navayugada nirmANa gaiva SuBa ASayake
AkRutiya mUDisalu jAgRutiya sAdhisalu ||pa||
uttuMga saMskRutiya vArisike emagihudu
tAynelada unnatiya AdarSa guriyihudu
kaShTagaLanedurisuva keccedeya balavihudu
vairigaLa vyUhagaLa BEdisuva Calavihudu ||1||
damana nirbaMdhagaLa aMjikeyu namagilla
ALuvarasara kRupeya Asareya haMgilla
kaThiNa agni parIkShegaLa geddu baMdihevu
maraNa kUpadi dhumuki mEleddu baMdihevu ||2||
kASmIradA kUgu nimage kELisadEnu?
tAyoDala taLamaLavu manava bAdhisadEnu?
mereyutire ellellU drOha vicCidrateyu
maimaretu malagidare ellihudu Badrateyu? ||3||
nIvu kivigoDabEDi svArthigaLa nuDigaLige
Ajyavanu ereyadiri kuTilateya kiDigaLige
sahakarisi bOdhanege balavIva sAdhanege
hiMdu rAShTrIyate prabala pratipAdanege |4||
Subscribe to:
Post Comments (Atom)
No comments:
Post a Comment