Sunday, January 31, 2010

ಕೇಶವನ ಧ್ಯೇಯವಿದು ನಮ್ಮ ಬಾಳುಸಿರು : kESavana dhyEyavidu


ಕೇಶವನ ಧ್ಯೇಯವಿದು ನಮ್ಮ ಬಾಳುಸಿರು
ಆತನಾ ನೆನಪೆಮಗೆ ಮನದಲಿ ತಾ ಹಸಿರು ||ಪ||

ತನು ಮನವು ಜೀವನವು, ತಾಯ್ನೆಲಕೆ ಅರ್ಪಿತವು
ತಾಯ್ನೆಲದಾ ವೈಭವವೇ, ಬಾಳಿದಕೆ ಹೆಗ್ಗುರಿಯು ||೧||

ಹಿಂದುವಿನ ಹೃದಯದೊಳು, ಹೀನತೆಯು ತುಂಬಿಹುದು
ಕುಂದಿದನು ಕಳೆದಳಿಸಿ, ಬಂಧುತನ ಬೆಳಸುವುದು ||೨||

ಜಗಕೊಮ್ಮೆ ಗುರುವಾಗಿ ಮೆರೆದಿಹುದೋ ಭಗವೆ ಇದು
ಮೆರೆಯಿಸಲು ಮತ್ತದನು, ಜಗದಗಲ ಒಯ್ಯುವುದು ||೩||

kESavana dhyEyavidu namma bALusiru
AtanA nenapemage manadali tA hasiru ||pa||

tanu manavu jIvanavu, tAynelake arpitavu
tAyneladA vaiBavavE, bALidake hegguriyu ||1||

hiMduvina hRudayadoLu, hInateyu tuMbihudu
kuMdidanu kaLedaLisi, baMdhutana beLasuvudu ||2||

jagakomme guruvAgi meredihudO Bagave idu
mereyisalu mattadanu, jagadagala oyyuvudu ||3||

No comments: