Monday, January 25, 2010

ಕಟ್ಟಬನ್ನಿ ತರುಣರೆ ನವಭಾರತದೇಶವ : kaTTabanni taruNare


ಕಟ್ಟಬನ್ನಿ ತರುಣರೆ ನವಭಾರತದೇಶವ
ಸ್ವತ್ವ ಸ್ವಾಭಿಮಾನಭಾರಿತ ಶಕ್ತಿವಂತ ರಾಷ್ಟ್ರವ...ನವಭಾರತ ದೇಶವ || ||ಪ||

ಕಿತ್ತುಬಿಸುಟು ಸುತ್ತಲಿರುವ ವಿಷಮ ವಿಷದ ಕಳೆಯನು
ಬಿತ್ತಿಬೆಳೆದು ತನ್ನತನದ ಹೊನ್ನಿನಂತ ಬೆಳೆಯನು
ಚಿತ್ತದಲ್ಲಿ ಮನೆಯ ಮಾಡಿದಂಥ ಭ್ರಮೆಯ ತೊಲಗಿಸಿ
ಕತ್ತಲನ್ನು ದೂರಗೊಳಿಸಿ ಧ್ಯೇಯದೀಪ ಬೆಳಗಿಸಿ ||೧||

ಜಗಕೆ ಅನ್ನ ನೀಡಬಲ್ಲ ಸಾಮರ್ಥ್ಯ ನಮಗಿರೆ
ಕರದೊಳೇಕೆ ಭಿಕ್ಷಾಪಾತ್ರೆ ಅನ್ನಪೂರ್ಣೆ ಈ ಧರೆ
ಯಜ್ಞಯಾಗಗಳ ತಪತ್ಯಾಗಗಳ ಪ್ರತಿನಿಧಿಸಿ
ಅಗ್ನಿಯಂತುರಿಯುತಿದೆ ತರುಣಶಕ್ತಿ ||೨||

ಹೆಮ್ಮೆಯಿಂದೆದೆಯೆತ್ತಿ ಹಿಮ್ಮಡಿಯ ಧರೆಗೊತ್ತಿ
ದುಷ್ಕಾಲನಾಗರನ ಹೆಡೆಯ ಮೆಟ್ಟಿ
ದಿಕ್ತಟದಿ ಹೊಂಗಿರಣದೋಕುಳಿಯ ಚಿಮ್ಮುಸುತ
ಅರುಣನಂತರುಳುತಿದೆ ತರುಣಶಕ್ತಿ ||೩||

kaTTabanni taruNare navaBAratadESava
svatva svABimAnaBArita SaktivaMta rAShTrava...navaBArata dESava || ||pa||

kittubisuTu suttaliruva viShama viShada kaLeyanu
bittibeLedu tannatanada honninaMta beLeyanu
cittadalli maneya mADidaMtha Brameya tolagisi
kattalannu dUragoLisi dhyEyadIpa beLagisi ||1||

jagake anna nIDaballa sAmarthya namagire
karadoLEke bhikShApAtre annapUrNe I dhare
yaj~jayAgagaLa tapatyAgagaLa pratinidhisi
agniyaMturiyutide taruNaSakti ||2||

hemmeyiMdedeyetti himmaDiya dharegotti
duShkAlanAgarana heDeya meTTi
diktaTadi hoMgiraNadOkuLiya cimmusuta
aruNanaMtaruLutide taruNaSakti ||3||

No comments: