Monday, January 25, 2010

ಎಂಥ ಸುಮಧುರ ಬಂಧನ : eMtha sumadhura baMdhana


ಎಂಥ ಸುಮಧುರ ಬಂಧನ ಸಂಘಕಿಂದು ಬಂದೆನಾ
ನಾಡ ಕೀರ್ತಿಯ ಉಳಿಸಿ ಬೆಳೆಸಲು ಐಕ್ಯವೊಂದೇ ಸಾಧನಾ |ಪ||

ನಡೆಯಲಾರದೆ ತೆವಳುತಿದ್ದೆನು ನಡಿಗೆ ಕಲಿಸಿತು ಸಂಘವು
ನುಡಿಯಲಾರದೆ ತೊದಲುತಿದ್ದೆನು ನುಡಿಯ ಉಲಿಸಿತು ಸಂಘವು
ಪಡೆದೆ ಉನ್ನತ ಜ್ಞಾನ ಸದ್ಗುಣ ಲಭಿಸಿ ಸಜ್ಜನ ಸಂಗವು ||೧||

ಗುರಿಯ ಅರಿಯದೆ ತಿರುಗುತಿದ್ದೆನು ಮರೆತು ತನುವಿನ ಪರಿವೆಯ
ಗುರುವು ದೊರೆಯದೆ ಮರುಗುತಿದ್ದೆನು ಪಡೆದೆ ಸದ್ಗುರು ಭಗವೆಯ
ದಾರಿ ದೀಪದ ತೆರದಿ ಬೆಳಗಿಹ ವೀರಪುರುಷರ ಚರಿತೆಯ ||೨||

ಶುದ್ಧಶೀಲಕೆ ಬದ್ಧನಾಗಿ ಪ್ರಬುದ್ಧನಾಗುತ ಬೆಳೆದೆನು
ಬುದ್ಧಶಂಕರ ಮಧ್ವ ಬಸವರ ಅಂಶವನು ಮೈ ತಳೆದೆನು
ಜನುಮ ಜನುಮದ ಮೌಡ್ಯ ಭ್ರಾಂತಿಯ ಕಲುಷವೆಲ್ಲವ ತೊಳೆದನು ||೩||

ದೇಶಕಾಯವೆ ಈಶ ಕಾಯವು ಎನುವ ತತ್ವವು ಶಾಶ್ವತ
ಪೂಜ್ಯ ಕೇಶವ ಪೂಜ್ಯ ಮಾಧವ ಚರಣವಿರಚಿತ ಸತ್ಪಥ
ನಾಶವಾಯಿತು ಮೋಹಪಾಶವು ಮಾತೆಗೆಲ್ಲ ಸಮರ್ಪಿತ ||೪||

eMtha sumadhura baMdhana saMGakiMdu baMdenA
nADa kIrtiya uLisi beLesalu aikyavoMdE saadhanaa |pa||

naDeyalArade tevaLutiddenu naDige kalisitu saMGavu
nuDiyalArade todalutiddenu nuDiya ulisitu saMGavu
paDede unnata j~jaAna sadguNa laBisi sajjana saMgavu ||1||

guriya ariyade tirugutiddenu maretu tanuvina pariveya
guruvu doreyade marugutiddenu paDede sadguru Bagaveya
dAri dIpada teradi beLagiha vIrapuruShara cariteya ||2||

SuddhaSIlake baddhanAgi prabuddhanAguta beLedenu
buddhaSaMkara madhva basavara aMSavanu mai taLedenu
januma janumada mouDya bhrAMtiya kaluShavellava toLedanu ||3||

dESakARyave ISa kARyavu enuva tatvavu SASvata
pUjya kESava pUjya mAdhava caraNaviracita satpatha
nASavAyitu mOhapASavu mAtegella samarpita ||4||

No comments: