ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Monday, January 25, 2010
ಉಜ್ವಲ ಸಂಸ್ಕೃತಿ ಮೈಮರೆತಿಹುದು : ujvala saMskRuti maimaretihudu
ಉಜ್ವಲ ಸಂಸ್ಕೃತಿ ಮೈಮರೆತಿಹುದು ಮಲಗಿದೆ ಹಿಂದುಸ್ಥಾನ್
ಎಚ್ಚರವಾಗಿ ಮೆರೆಯುವುದೆಂದು? ಜ್ವಲಂತ ರಾಷ್ಟ್ರಮಹಾನ್
ನನ್ನೀ ದೇಸ ಮಹಾನ್ ||ಪ||
ಸಿಂಧೂ ನದಿಯ ನಾಗರಿಕತೆಯು, ಪವಿತ್ರ ವೇದದ ಕಾವ್ಯದ ಕಥೆಯು,
ಬುದ್ಧ ಶಂಕರರ ಸಿದ್ಧಾಂತಗಳು, ಸಾಧು ಸಂತರ ಆಚಾರಗಳು
ಕರಗಿದೆ ಕಾಲದಲಿ, ತೇಲಿದೆ ಬಾನಿನಲಿ ||೧||
ತರುಣ ಶಕ್ತಿಯು ಏಳುವುದೆಂದು? ರಾಷ್ಟ್ರದುನ್ನತಿಗೆ ಶ್ರಮಿಸುವುದೆಂದು?
ವೈಭವ ದೀಪ್ತಿ ಬೆಳಗುವುದೆಂದು? ತ್ಯಾಗ ಸಾಹಸ ಮೊಳಗುವುದೆಂದು?
ಎಂದಿಗೆ ಪುನರುತ್ಥಾನ್? ನಾಡಿನ ನವ ಕಲ್ಯಾಣ್? ||೨||
ಉನ್ನತ ಜನತೆ ಮೈ ಕೊಡವೇಳಲಿ, ಭಾರತ ಮಾತೆಯ ಸೇವೆಗೆ ನಿಲ್ಲಲಿ
ಚೇತನ ತುಂಬಿ ಮೈ ನವಿರೇಳಲಿ, ಮಹಾತ್ಮರು ತೋರಿದ ದಾರಿಯ ತುಳಿಯಲಿ
ಅಂದಿಗೆ ಹೊಸ ಬೆಳಕು, ನೂತನ ಚಿರ ಬದುಕು ||೩||
ujvala saMskRuti maimaretihudu malagide hiMdusthAn
eccaravAgi mereyuvudeMdu? jvalaMta rAShTramahAn
nannI dEsa mahAn ||pa||
siMdhU nadiya nAgarikateyu, pavitra vEdada kAvyada katheyu,
buddha SaMkarara siddhAMtagaLu, sAdhu saMtara AcAragaLu
karagide kAladali, tElide bAninali ||1||
taruNa Saktiyu ELuvudeMdu? rAShTradunnatige SramisuvudeMdu?
vaiBava dIpti beLaguvudeMdu? tyAga sAhasa moLaguvudeMdu?
eMdige punarutthAn? nADina nava kalyAN? ||2||
unnata janate mai koDavELali, BArata mAteya sEvege nillali
cEtana tuMbi mai navirELali, mahAtmaru tOrida dAriya tuLiyali
aMdige hosa beLaku, nUtana cira baduku ||3||
Subscribe to:
Post Comments (Atom)
No comments:
Post a Comment